ಜು.31: ಕುಂತೂರು ಸರಕಾರಿ ಉ.ಹಿ.ಪ್ರಾ. ಶಾಲಾ ಸಹ ಶಿಕ್ಷಕಿ ಭವಾನಿ ವೈ ನಿವೃತ್ತಿ

0

ಕಡಬ: ಕುಂತೂರು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ಭವಾನಿ ವೈ ಅವರು ಜು.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

ಶ್ರೀಮತಿ ಭವಾನಿ ಅವರು 14-2-1996ರಂದು ಪುತ್ತೂರು ತಾಲೂಕಿನ ಅಡೆಕ್ಕಲ್ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಸೇವೆಗೆ ಸೇರ್ಪಡೆಗೊಂಡಿದ್ದರು. ಆ ನಂತರ ಸರಕಾರಿ ಹಿ.ಪ್ರಾ.ಶಾಲೆ ರೆಂಜಿಲಾಡಿ, ಸರಕಾರಿ ಕಿ.ಪ್ರಾ.ಶಾಲೆ ಪಿಜಕ್ಕಳದಲ್ಲಿ ಸೇವೆ ಸಲ್ಲಿಸಿದ್ದಾರೆ. ನಿಯೋಜನೆ ಮೇಲೆ ಸರಕಾರಿ ಹಿ.ಪ್ರಾ.ಶಾಲೆ ಕುಂತೂರುಪದವು, ಸರಕಾರಿ ಕಿ.ಪ್ರಾ.ಶಾಲೆ ಕುಟ್ರುಪ್ಪಾಡಿ, ಸರಕಾರಿ ಕಿ.ಪ್ರಾ.ಶಾಲೆ ಬಲ್ಯಪಟ್ಟೆ, ಸರಕಾರಿ ಕಿ.ಪ್ರಾ.ಶಾಲೆ ಮೂರಾಜೆಕೊಪ್ಪ ಮತ್ತು ಸರಕಾರಿ ಮಾದರಿ ಹಿ.ಪ್ರಾ.ಶಾಲೆ ಕಡಬ ಇಲ್ಲಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಕುಂತೂರುಪದವು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ತಾಲೂಕಿನ ವಿವಿಧ ಶಾಲೆಗಳಲ್ಲಿ ಒಟ್ಟು ೨೯ ವರ್ಷ ಸುದೀರ್ಘ ಸೇವೆ ಸಲ್ಲಿಸಿ ಜು.31ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

ಇವರು ಏಣಾಜೆ ಬಟ್ಟೋಡಿಯ ನಿವೃತ್ತ ಶಿಕ್ಷಕ ಅಣ್ಣಪ್ಪ ಗೌಡ ಹಾಗೂ ಶ್ರೀಮತಿ ನೀಲಮ್ಮ ಅವರ ಪುತ್ರಿಯಾಗಿದ್ದು ಇವರ ಸಹೋದರ ದಿನೇಶ್ ಅವರು ಕೊಣಾಲು ಸರಕಾರಿ ಪ.ಪೂ.ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾರೆ. ಇವರಿಗೆ ಮೂವರು ಸಹೋದರಿಯರು ಇದ್ದಾರೆ. ಪ್ರಸ್ತುತ ಕಡಬ ಪಣೆಮಜಲು ಗ್ರೀನ್‌ಪಾರ್ಕ್ ಎಂಬಲ್ಲಿ ಪತಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಪಿ.ಹಾಗೂ ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಪುತ್ರಿ ಡಾ.ಪ್ರತ್ಯೂಷರವರ ಜೊತೆ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here