ಪುತ್ತೂರು: ಉಪ್ಪಿನಂಗಡಿ ವೇದಶಂಕರನಗರದ ಶ್ರೀರಾಮ ಶಾಲೆಯ 2024 -2025ರ ಶೈಕ್ಷಣಿಕ ವರ್ಷದ ಪೋಷಕ ಸಂಘ ಹಾಗೂ ಮಾತೃಭಾರತಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಪೋಷಕ ಸಂಘದ ಅಧ್ಯಕ್ಷರಾಗಿ ಉದಯ ಅತ್ರಮಜಲು ಆಯ್ಕೆಗೊಂಡರು. ಇವರ ಹೆಸರನ್ನು ಪಲಿತ್ ಸೂಚಿಸಿ, ಮಧುರಾಜ್ ಅನುಮೋದಿಸಿದರು. ಉಪಾಧ್ಯಕ್ಷರಾಗಿ ಜಯಶ್ರೀ ಜನಾರ್ದನ ಆಯ್ಕೆಗೊಂಡರು. ಇವರ ಹೆಸರನ್ನು ಉದಯ ಅತ್ರಮಜಲು ಸೂಚಿಸಿ ಗೋಪಾಲಕೃಷ್ಣ ಅನುಮೋದಿಸಿದರು. ಮಾತೃಭಾರತಿಯ ಅಧ್ಯಕ್ಷರಾಗಿ ಸಂಧ್ಯಪ್ರಭಾ ಆಯ್ಕೆಗೊಂಡಿದ್ದು ಇವರ ಹೆಸರನ್ನು ಸೌಮ್ಯ ವಾಸುದೇವ ಆಚಾರ್ಯ , ಸೂಚಿಸಿ ಚೈತ್ರಾ ಅನುಮೋದಿಸಿದರು. ಉಪಾಧ್ಯಕ್ಷರಾಗಿ ಜ್ಯೋತಿ ಆಯ್ಕೆಗೊಂಡಿದ್ದುವಇವರ ಹೆಸರನ್ನು ಸಂಧ್ಯ ಪ್ರಭಾ ಸೂಚಿಸಿ ಯಶೋದ ಅನುಮೋದಿಸಿದರು.
ಪೋಷಕ ಸಂಘದಲ್ಲಿ ಪ್ರಮೋದ್, ಸೂಚನಾ, ಗೌತಮ ನಾರಾಯಣ, ರೋಹಿಣಿ, ಪಲಿತ್, ರಶ್ಮಿ, ಗೋಪಾಲಕೃಷ್ಣ, ಸುಲೋಚನಾ, ಮಧುರಾಜ್, ರಂಜಿನಿ, ಭಾಸ್ಕರ, ರವಿಕಲಾ, ಧನಂಜಯ, ಮಾಲತಿ, ಜನಾರ್ದನ, ಮಾಲಿನಿ, ಸುನೀತಾ ಮತ್ತು ಕೃಷ್ಣ.ಬಿರವರು ಸದಸ್ಯರಾಗಿ ಆಯ್ಕೆಗೊಂಡರು.
ಮಾತೃಭಾರತಿಯಲ್ಲಿ ಮಧುರಾ, ಜಯಶ್ರೀ, ಎನ್.ಮೋಹಿನಿ, ತೀರ್ಥ, ದಿವ್ಯಾ, ಧನ್ಯ, ಅಮಿತಾ, ಮೀರಾ, ಚೈತ್ರಾ, ಇಂದಿರಾ, ಸವಿತಾ, ಕಲಾವತಿ, ದೇವಕಿ, ಸೌಮ್ಯ, ದಿವ್ಯ, ವೀಣಾ, ಯಶೋದ ಮತ್ತು ಪುಷ್ಪಲತಾ ಸದಸ್ಯರಾಗಿ ಆಯ್ಕೆಗೊಂಡರು. ನಿಕಟಪೂರ್ವ ಪೋಷಕ ಸಂಘದ ಅಧ್ಯಕ್ಷ ಮೋಹನ್ ಭಟ್.ಪಿ ಮತ್ತು ಮಾತೃಭಾರತಿಯ ನಿಕಟ ಪೂರ್ವ ಅಧ್ಯಕ್ಷೆ ಸೌಮ್ಯ ವಾಸುದೇವ ಆಚಾರ್ಯ ಅನಿಸಿಕೆ ವ್ಯಕ್ತಪಡಿಸಿದರು. ಶಾಲಾ ಸಂಚಾಲಕ ಯು.ಜಿ. ರಾಧ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯರಾದ ಜಯಂತ್ ಪೊರೋಳಿ ಮತ್ತು ಗುಣಕರ ಅಗ್ನಾಡಿ ಉಪಸ್ಥಿತರಿದ್ದರು. ಪ್ರೌಢವಿಭಾಗದ ಮುಖ್ಯಗುರು ರಘುರಾಮ ಭಟ್.ಸಿ, ಸ್ವಾಗತಿಸಿ, ನಮಿತಾ ಮಾತಾಜಿ ಮತ್ತು ಬೇಬಿ ಮಾತಾಜಿ ಕಾರ್ಯಕ್ರಮ ಸಂಯೋಜಿಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಮಾತಾಜಿ ವಿಮಲ ವಂದಿಸಿದರು.