ಬಡಗನ್ನೂರು: ಆಟಿಕೂಟ ಸಮಾರೋಪ ಸಮಾರಂಭ

0

ಬಡಗನ್ನೂರು: ಆಟಿ ವಿಶಿಷ್ಟತೆ ಮತ್ತು ಆಹಾರ ಪದ್ಧತಿ ಬಗ್ಗೆ ಮುಂದಿನ ಜನಾಂಗಕ್ಕೆ  ತಿಳಿಸುವ ಕೆಲಸ ಅಗಬೇಕಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಹೇಳಿದರು. ಅವರು  ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಬಡಗನ್ನೂರು ಇದರ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಆಟಿಕೂಟ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಮಾಡಿ ಮಾತನಾಡಿದರು.  

 ತುಳುನಾಡಿನ  ಸಂಸ್ಕೃತಿ ಆಚಾರ ವಿಚಾರ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಅಗಬೇಕಿದೆ..ತುಳು ಭಾಷೆಯನ್ನು  ಎಂಟನೇ  ಪರಿಚ್ಚೇಸಕ್ಕೆ ಸೇರಿಸುವ ಬಗ್ಗೆ ಸರ್ಕಾರದ ಕಡೆಯಿಂದ ಚರ್ಚೆಗಳು ನಡೆಯುತ್ತಿವೆ  ಮಾನ್ಯ ಶಾಸಕ ಅಶೋಕ ರೈ ರವರು  ತುಳು ಭಾಷೆಯನ್ನು ಅಧಿಕೃತವಾಗಿ ಎರಡನೇ ಸ್ಥಾನ ನೀಡುವ ವಿಚಾರದ ಬಗ್ಗೆ  ವಿಧಾನ ಮಂಡಲದ ಕಲಾಪದಲ್ಲಿ  ಪ್ರಸ್ತಾಪಿಸಿದ್ದಾರೆ ಎಂದ ಅವರು ತುಳು ಭಾಷೆ, ಪರಂಪರೆ ತುಳುನಾಡಿನ ಸಾಂಸ್ಕೃತಿಕ ಐತಿಹ್ಯಗಳನ್ನು ಮುಂದಿನ ಪೀಳಿಗೆಗೆ ಸಿಕ್ಕಬೇಕಾದರೆ ಇಂತಹ ಆಟಿಕೂಟ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ತಿಳಿಸುವ ಕೆಲಸ ಅಗಬೇಕಿದೆ ಎಂದು ಹೇಳಿ ಶುಭ ಹಾರೈಸಿದರು.

ಸಭೆಯು ಆಟಿಕೂಟ ಸಮಿತಿ ಅಧ್ಯಕ್ಷ ನಾರಾಯಣ ರೈ ಕುದ್ಕಾಡಿ ರವರ ಅಧ್ಯಕ್ಷತೆಯಲ್ಲಿ ಜು. 21 ರಂದು ಬಡಗನ್ನೂರು ಶಾಲಾ ಸಭಾಂಗಣದಲ್ಲಿ ನಡೆಯಿತು.ವೇದಿಕೆಯಲ್ಲಿ ಆಟಿಕೂಟ ಸಮಿತಿ ಉಪಾಧ್ಯಕ್ಷೆ ಶಂಕರಿ ಪಟ್ಟೆ, ಕಾರ್ಯದರ್ಶಿ ಶಾಂಭವಿ ಶೆಟ್ಟಿ ಕುದ್ಕಾಡಿ, ಶತಮಾನೋತ್ಸವ ಸಮಿತಿ ಸಂಚಾಲಕ ಸತೀಶ್ ರೈ ಕಟ್ಟಾವು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ರೈ ಪಳ್ಳತ್ತಾರು, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಮಹಾಲಿಂಗ ಪಾಟಾಳಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಹರೀಣಾಕ್ಷಿ ಎ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ  ಶತಮಾನೋತ್ಸವ ಸಮಿತಿ ಪ್ರಮುಖ ಸಲಹೆಗಾರ ರಾಮಣ್ಣ ಗೌಡ ಬಸವಹಿತ್ತಿಲು ಕಾರ್ಯದರ್ಶಿ ಸಂತೋಷ್ ಆಳ್ವ ಗಿರಿಮನೆ, ಹಿರಿಯ ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿ ಸಲಾವುದ್ಧಿನ್ ಪದಡ್ಕ, ಕೋಶಾಧಿಕಾರಿ ಸುಬ್ರಾಯ ನಾಯ್ಕ  ಸದಸ್ಯ ಜನಾರ್ದನ ಪದಡ್ಕ,  ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು ಮೂಲ್ಯ,  ಉಪಾಧ್ಯಕ್ಷೆ ವಿಜಯಲಕ್ಷ್ಮಿ,  ಹಾಗೂ ಶತಮಾನೋತ್ಸವ ಸಮಿತಿ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು,  ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಅಕ್ಷರದಾಸೋಹ ಸಿಬ್ಬಂದಿಗಳು ಅಂಗನವಾಡಿ ಕಾರ್ಯಕರ್ತರು, ಶಿಕ್ಷಕ ವೃಂದದವರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಶಾಲಾ ಸಹ ಶಿಕ್ಷಕಿಯರಾದ ವಿಜಯಲಕ್ಷ್ಮಿ ವಂದಿಸಿ, ರಮ್ಯ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ಮಧುಶ್ರೀ ಹಾಗೂ ಗೌರವ ಶಿಕ್ಷಕಿ ಸೌಮ್ಯ ಸಹಕರಿಸಿದರು.

LEAVE A REPLY

Please enter your comment!
Please enter your name here