ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿ ವ್ಯವಹರಿಸುತ್ತಿರುವ ಮದುವೆ ವಸ್ತ್ರಗಳ ಖರೀದಿಗೆ ಪ್ರಸಿದ್ಧಿಯಾದ ಯಂ. ಸಂಜೀವ ಶೆಟ್ಟಿ ಜವುಳಿ ಮಳಿಗೆಯಲ್ಲಿ ಜು.26ರಂದು ಆರಂಭಗೊಂಡ ‘ಆಟಿ ಸೇಲ್’ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಪಿಂಗ್ ಪ್ರಿಯರಿಗೆ ಇನ್ನಷ್ಟು ಖರೀದಿ ಮಾಡಲು ಹೊಸ ಸ್ಟಾಕ್‌ಗಳು ಲಭ್ಯವಿದೆ.
ಪ್ರಖ್ಯಾತ ಮಿಲ್‌ಗಳಿಂದ ನೇರವಾಗಿ ಖರೀದಿಸಿ ಅತೀ ಕಡಿಮೆ ಲಾಭಾಂಶವಿಟ್ಟು ಅತೀ ಕಡಿಮೆ ದರದಲ್ಲಿ ಮಾರಾಟ ಮಾಡುವ, ಕಂಪೆನಿ ಸೀರೆಗಳು ಮತ್ತು ಇನ್ನಿತರ ಜವುಳಿಗಳ ಮಾರಾಟಕ್ಕೆ ಆರಂಭದ ದಿನವೇ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆರಂಭದ ದಿನವೇ ಗ್ರಾಹಕರು ಆಗಮಿಸಿದ್ದು ಮಳಿಗೆಯಲ್ಲಿ ಜನ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಪುತ್ತೂರಿನವರೊಂದಿಗೆ ಹತ್ತೂರಿನವರೂ ಸೇರಿದಂತೆ ಗ್ರಾಹಕರಿಂದ ಮಳಿಗೆಯು ತುಂಬಿ ತುಳುಕುತ್ತಿದೆ. ಅತೀ ದೊಡ್ಡಮಟ್ಟದಲ್ಲಿ ಗ್ರಾಹಕರಿಗೋಸ್ಕರ ಸಾರಿ ಮತ್ತು ಇನ್ನಿತರ ಜವುಳಿಗಳನ್ನು ಖರೀದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ದಿನವೂ ಹೊಸ ಹೊಸ ಸ್ಟಾಕ್‌ಗಳನ್ನು ಗ್ರಾಹಕರಿಗೆ ಒದಗಿಸುತ್ತಿರುವುದು ಮತ್ತು ಕಡಿಮ ಲಾಭಾಂಶದೊಂದಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದು ಆಟಿ ಸೇಲ್‌ನ ವಿಶೇಷವಾಗಿದೆ. ಈ ಆಷಾಢ ಮಾಸದಲ್ಲಿ ಏರ್ಪಡಿಸುವ ಅತೀ ದೊಡ್ಡ ಮಾರಾಟಕ್ಕೆ ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಡಿಕೇರಿ, ಮೈಸೂರು, ಬೆಂಗಳೂರಿನಿಂದ ಗ್ರಾಹಕರು ಜನರು ಧಾವಿಸಿ ಬರುತ್ತಿದ್ದಾರೆ ಎಂದು ಸಂಸ್ಥೆಯವರು ಮಾಹಿತಿ ನೀಡಿದ್ದಾರೆ.
ಹೊಸ ಸ್ಟಾಕ್‌ಗಳು ಗ್ರಾಹಕರಿಗೆ ಲಭ್ಯ
ಸಣ್ಣ ಮಕ್ಕಳಿಂದ ಪ್ರಾರಂಭವಾಗಿ ಎಲ್ಲಾ ವಯೋಮಾನದವರಿಗೂ ಹೊಂದುವಂತಹ ರೆಡಿಮೇಡ್ ಹಾಗೂ ಇನ್ನಿತರ ವಸ್ತ್ರಗಳ ಬಹು ದೊಡ್ಡ ಪ್ರಮಾಣದ ಹೊಸಸಂಗ್ರಹ ಅತೀ ಕಡಿಮೆ ಲಾಭಾಂಶದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಇದೀಗ ಹೊಸ ಸ್ಟಾಕ್‌ಗಳು ಮಳಿಗೆಗೆ ಬಂದಿದ್ದು ಗ್ರಾಹಕರಿಗೆ ಲಭ್ಯವಿದೆ. ಹೊಸ ಸ್ಟಾಕ್‌ನಲ್ಲಿ ವಿವಿಧ ವಿನ್ಯಾಸದ ವಸ್ತ್ರಗಳನ್ನು ಪಡೆಯಲು ಅವಕಾಶವಿದೆ.