ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಆಟಿ ದುರ್ಗಾ ನಮಸ್ಕಾರ ಪೂಜೆ

0

ಕಾಣಿಯೂರು: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಆಟಿ ದುರ್ಗಾ ನಮಸ್ಕಾರ ಪೂಜೆ ಜು 19 ರಿಂದ ಜು 30ರವರೆಗೆ ನಡೆಯಿತು. 12 ದಿವಸಗಳ ಕಾರ್ಯಕ್ರಮದಲ್ಲಿ ಪ್ರತಿನಿತ್ಯ ರಾತ್ರಿ ನಡೆದ ವಿಶೇಷ ಭಜನಾ ಕಾರ್ಯಕ್ರಮದಲ್ಲಿ ಮುಗೇರು ಮಹಾವಿಷ್ಣು ಭಜನಾ ಮಂಡಳಿ ಸವಣೂರು, ಶ್ರೀ ಸದಾಶಿವ ಭಜನಾ ಮಂಡಳಿ ಅಗಳಿ, ಶ್ರೀ ಶಾರದಾ ಭಜನಾ ಮಂಡಳಿ ಕೊಪ್ಪ ಚಾರ್ವಾಕ, ಶ್ರೀ ನಾಲ್ಕಂಬ ಉಳ್ಳಾಲ್ತಿ ಭಜನಾ ಮಂಡಳಿ ಶ್ರೀ ಕ್ಷೇತ್ರ ನಾಲ್ಕಂಬ ಚಾರ್ವಾಕ, ಶ್ರೀ ಹರಿ ಭಜನಾ ಮಂಡಳಿ ಪುಣ್ಚತ್ತಾರು, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಕಾಣಿಯೂರು, ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ನಾವೂರು, ಶ್ರೀ ಲಕ್ಷ್ಮಿಪ್ರಿಯಾ ಮಹಿಳಾ ಭಜನಾ ಮಂಡಳಿ ಬೆಳಂದೂರು, ಶ್ರೀ ಕಪಿಲೇಶ್ವರ ಭಜನಾ ಮಂಡಳಿ ಚಾರ್ವಾಕ, ಶ್ರೀ ಕಪಿಲೇಶ್ವರ ಮಹಿಳಾ ಭಜನಾ ಮಂಡಳಿ ಚಾರ್ವಾಕ ಸೇರಿದಂತೆ ಹಲವಾರು ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಾಣಿಯೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ದೇವಸ್ಥಾನದ ಆಡಳಿತಾಧಿಕಾರಿ ರಘು ಬಿ.ಎನ್, ವ್ಯವಸ್ಥಾಪನಾ ಸಮಿತಿಯ ನಿಕಟ ಅಧ್ಯಕ್ಷ ಕೊರಗಪ್ಪ ಗೌಡ ಕುಕ್ಕುನಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ, ಚಾರ್ವಾಕ ಜೋಡುದೈವಗಳ ಕ್ಷೇತ್ರದ ಆಡಳಿತದಾರ ಕುಸುಮಾಧರ ರೈ ಕಾಸ್ಪಾಡಿಗುತ್ತು, ಅರ್ಚಕ ವೆಂಕಟಕೃಷ್ಣ ಭಟ್, ಆಡಳಿತ ಪಂಗಡದ ಅಧ್ಯಕ್ಷ ಕುಸುಮಾಧರ ಬೀರೊಳಿಗೆ, ಕಾರ್ಯದರ್ಶಿ ಯಶ್ವಿತ್ ಮುದುವ ಹಾಗೂ ಭಕ್ತಾಧಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here