ಕೂರೇಲು ಶ್ರೀ ನಾಗ ದೇವರ ಸಾನಿಧ್ಯದಲ್ಲಿ ಶ್ರಮದಾನ

0

ಪುತ್ತೂರು: ಆರ್ಯಾಪು ಗ್ರಾಮದ ಕೂರೇಲು ಶ್ರೀ ಮಲರಾಯ ದೈವಸ್ಥಾನದ ಶ್ರೀ ನಾಗದೇವರ ಸಾನಿಧ್ಯದಲ್ಲಿ ಶ್ರಮದಾನ ಕಾರ್ಯಕ್ರಮ ಆ.4 ರಂದು ನಡೆಯಿತು. ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದತೆ ಕೂರೇಲು ನಾಗ ಸಾನಿಧ್ಯದ ಸಂಪೂರ್ಣ ಜೀರ್ಣೋದ್ಧಾರ ನಡೆಯಲಿದ್ದು ಅದರಂತೆ ಜು.7 ರಂದು ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ನಾಗ ಸಾನಿಧ್ಯದಲ್ಲಿ ಶ್ರೀ ನಾಗದೇವರನ್ನು ಬಾಲಲಯದಲ್ಲಿ ಪ್ರತಿಷ್ಠಾಪನೆ ಮಾಡುವ ಕಾರ್ಯವು ನಡೆದಿದೆ.

ಇದೀಗ ಕೂರೇಲು ಕುಟುಂಬಸ್ಥರು ಮತ್ತು ಬಂಧುಮಿತ್ರರು ಸೇರಿಕೊಂಡು ಕೂರೇಲು ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಮಾರ್ಗದರ್ಶನದಂತೆ ಶ್ರಮದಾನ ಮಾಡುವ ಮೂಲಕ ಹಳೆಯ ನಾಗನ ಕಟ್ಟೆ ಇತ್ಯಾದಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು. ಮುಂದಿನ ದಿನಗಳಲ್ಲಿ ನೂತನ ಕಟ್ಟೆ ನಿರ್ಮಾಣದೊಂದಿಗೆ ಶ್ರೀ ನಾಗದೇವರ ಪ್ರತಿಷ್ಠಾ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಲಿದೆ. ಶ್ರಮದಾನದಲ್ಲಿ ಭಾಗವಹಿಸಿದ ಕೂರೇಲು ಕುಟುಂಬಸ್ಥರಿಗೆ ಮತ್ತು ಬಂಧುಮಿತ್ರರಿಗೆ ಕೂರೇಲು ಕೆ.ಸಂಜೀವ ಪೂಜಾರಿಯವರು ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here