ನಿಡ್ಪಳ್ಳಿ; ತುಳುನಾಡು ಫ್ರೆಂಡ್ಸ್ ತೂಂಬಡ್ಕ ಇದರ ಆಶ್ರಯದಲ್ಲಿ ಬಾಜುಗುಳಿ ಗದ್ದೆಯಲ್ಲಿ ಕೆಸರಡ್ ಒಂಜಿ ದಿನ ಕೆಸರ್ ಕಂಡ ಉಚ್ಚಯ- 2024 ಕಾರ್ಯಕ್ರಮ ಆ.4 ರಂದು ನಡೆಯಿತು. ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆ ದೀಪ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿ, ಕ್ರೀಡಾಕೂಟ ಉದ್ಘಾಟಿಸಿದರು. ಪುತ್ತೂರು ತಾಲೂಕು ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಗದ್ದೆಗೆ ಹಾಲು ಎರೆದು ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದರು.
ಕೆ.ಎಂ.ಎಫ್ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಮಾಜಿ ಸೈನಿಕ ರಮಾನಾಥ ರೈ ಪಡ್ಯಂಬೆಟ್ಟು , ಸೂರಂಬೈಲು ಶಾಲಾ ನಿವೃತ್ತ ಮುಖ್ಯ ಗುರು ಶ್ರೀಧರ್ ವೈ ಶುಭ ಹಾರೈಸಿದರು. ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯ ಮೋಹನ ನಾಯ್ಕ ತೂಂಬಡ್ಕ ,ಶಕ್ತಿ ಅಯಿಲ್ ಮಿಲ್ ಚೆಲ್ಯಡ್ಕ ಇದರ ಮಾಲಕ ಸೀತಾರಾಮ ರೈ, ಗದ್ದೆ ಮಾಲಕ ವೆಂಕಪ್ಪ ನಾಯ್ಕ ಬಾಜುಗುಳಿ, ಫ್ರೆಂಡ್ಸ್ ಅಧ್ಯಕ್ಷ ದಯಾನಂದ ತೂಂಬಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಿಂಚನ ಮತ್ತು ಬಳಗ ಪ್ರಾರ್ಥಿಸಿ, ಕೀರ್ತನ್ ಸ್ವಾಗತಿಸಿದರು. ವೈಶಾಕ್ ರೈ ವಂದಿಸಿ ವರ್ಷಾ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.
ವಿಶೇಷ ಅಭ್ಯಾಗತರಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ,ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ , ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇದರ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ವಿಜಯ ಸಾಮ್ರಾಟ ಪುತ್ತೂರು ಇದರ ಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ, ಯುವ ವಾಹಿನಿ ಹಿಂದೂ ಜಾಗರಣ ವೇದಿಕೆ ವಿಟ್ಲ ಇದರ ರೂವಾರಿ ಅಕ್ಷಯ್ ರಜಪೂತ್ ಕಲ್ಲಡ್ಕ ಹಾಗೂ ಇನ್ನೂ ಹಲವಾರು ಗಣ್ಯರುಗಳು ಭೇಟಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಯುವ ನಾಯಕ ಸಹಜ್ ರೈ ಬಳಜ್ಜ ಗದ್ದೆಗೆ ಇಳಿದು ಹುಲಿ ಹಾಡಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಮನರಂಜಿಸಿದ ವಿವಿಧ ಸ್ಪರ್ಧೆಗಳು-
ಪುಟಾಣಿಗಳಿಗೆ, ಯುವಕ -ಯುವತಿಯರಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.ಸುಬೋಧ ಪ್ರೌಢಶಾಲೆ ಪಾಣಾಜೆಯ ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ರೈ ತೀರ್ಪುಗಾರರಾಗಿ ಸಹಕರಿಸಿದರು. ಲಿಖಿತ್ ಪುತ್ತೂರು ಧ್ವನಿವರ್ಧಕದಲ್ಲಿ ಸಹಕರಿಸಿದರು. ಸಾಗರ್ ಬೆಳ್ಳಾರೆ, ವರ್ಷ ಪುತ್ತೂರು, ಪ್ರದೀಪ್ ಪಾಣಾಜೆ ಕಾರ್ಯಕ್ರಮವನ್ನು ನಿರೂಪಿಸಿದರು. ತುಳುನಾಡ್ ಫ್ರೆಂಡ್ಸ್ ತೂಂಬಡ್ಕ ಬಳಗದ ಸದಸ್ಯರು ಸಹಕರಿಸಿದರು.ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು
ಲಘು ಉಪಹಾರ ಮತ್ತು ಮಧ್ಯಾಹ್ನದ ಸಹಭೋಜನದಲ್ಲಿ ತುಳುನಾಡಿನ ಖಾದ್ಯಗಳಾದ ಪತ್ರೊಡೆ,ಕಣಿಳೆ, ಹಲಸಿನ ಕಾಯಿ ಪಲ್ಯ ಇನ್ನಿತರ ಖಾದ್ಯಗಳನ್ನು ಸವಿದರು.
ಸಭಾ ಕಾರ್ಯಕ್ರಮದ ಆರಂಭದಲ್ಲಿ ವಯನಾಡು ಮತ್ತು ಹಲವೆಡೆ ಪ್ರಕೃತಿ ವಿಕೋಪದ ದುರಂತಕ್ಕೆ ಬಲಿಯಾದವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.ಪ್ರಕೃತಿ ವಿಕೋಪದ ಸಮಯದಲ್ಲಿ ಹಗಲು ಇರುಳು ಎನ್ನದೆ ಜೀವದ ಹಂಗು ತೊರೆದು ರಕ್ಷಣೆಗೆ ನಿಂತ ಸೈನಿಕರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.