ಬೆಟ್ಟಂಪಾಡಿ ಪ್ರಿಯದರ್ಶಿನಿಯಲ್ಲಿ ವಿಜ್ಞಾನ ಮಾದರಿ ಪ್ರದರ್ಶನ

0

ಪುತ್ತೂರು: ಪ್ರಿಯದರ್ಶಿನಿ ವಿದ್ಯಾಸಂಸ್ಥೆ ವಿದ್ಯಾಗಿರಿ ಬೆಟ್ಟಂಪಾಡಿ ಇಲ್ಲಿನ 2024 25ನೇ ಶೈಕ್ಷಣಿಕ ವರ್ಷದ ವಿಜ್ಞಾನ ಮಾದರಿ ಪ್ರದರ್ಶನ ಕಾರ್ಯಕ್ರಮವು ಆ.3 ರಂದು ಕೇಶವದರ್ಶಿನಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಸತೀಶ್ ರೈ ಕಟ್ಟಾವು ಇವರು ವಿಜ್ಞಾನ ಮಾದರಿ ಪ್ರದರ್ಶನವನ್ನು ರಾಸಾಯನಿಕ ಬಳಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವಿಜ್ಞಾನವು ಮುಂದುವರಿಯಬೇಕಾದ ಶಾಖೆ, ಹಾಗೂ ಇದು ಕುತೂಹಲವನ್ನು ಹೆಚ್ಚಿಸುವ ಆಸಕ್ತಿದಾಯಕ ವಿಷಯ ಎಂದು ಹೇಳಿ ವಿದ್ಯಾರ್ಥಿಗಳನ್ನು ವಿಜ್ಞಾನದೆಡೆಗೆ ಕರೆತರುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ತಿಳಿಸಿದರು.

ಶಾಲಾ ಮುಖ್ಯ ಗುರು ರಾಜೇಶ್ ಇವರು ವಿಜ್ಞಾನದ ಮಹತ್ವ, ಹಾಗೂ ದೇಶದ ಏಳಿಗೆಯಲ್ಲಿ ಇದರ ಪಾತ್ರದ ಬಗ್ಗೆ ಗಮನಾರ್ಹವಾಗಿ ಚರ್ಚಿಸಿದರು. ವಿದ್ಯಾರ್ಥಿಗಳು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾವು ಮಾಡಿದ ಮಾದರಿಗಳ ಬಗ್ಗೆ ಮಾಹಿತಿ ನೀಡಿದರು. ನೀರಿನ ಶುದ್ಧೀಕರಣ, ಕರೆಗಂಟೆ, ರಾಕೆಟ್, ಪರಮಾಣು ವಿದ್ಯುತ್ ಸ್ಥಾವರ, ಜ್ವಾಲಾಮುಖಿ ಇತ್ಯಾದಿ ಮಾದರಿಗಳು ಪ್ರದರ್ಶನಗೊಂಡವು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ಸಂಧ್ಯಾ ವಿ ಸ್ವಾಗತಿಸಿ, ಭವ್ಯ ಜಿ ಇವರು ವಂದಿಸಿದರು. ಸಹ ಶಿಕ್ಷಕಿದಿವ್ಯ ಪ್ರಭು. ಜಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here