ಪುತ್ತೂರು : ಪುತ್ತೂರು ತಾಲೂಕು ಕೃಷಿಕ ಸಮಾಜದ ವತಿಯಿಂದ ಕೃಷಿ ಇಲಾಖೆ ಸಹಯೋಗದಿಂದ ಒಂದು ದಿನದ ಕೃಷಿ ಅಧ್ಯಯನ ಪ್ರವಾಸ ನಡೆಯಿತು.
ಕಡಬ ಮರ್ದಾಳದ ಡೆಪ್ಪಾಜೆ ಲೋಹಿತ್ ರೈ ಅವರ ತೋಟದಲ್ಲಿ ಹಣ್ಣು ಹಂಪಲು ಹಾಗೂ ತೋಟಗಾರಿಕಾ ಮಿಶ್ರ ಬೆಳೆಯ ಬಗ್ಗೆ,ಕಡಬ ಅಜಿತ್ ರೈ ಮತ್ತು ರಮೇಶ್ ಭಟ್ ಕಲ್ಪುರೆ ಯವರ ಹರ್ತ್ಯಡ್ಕದ ಹಣ್ಣು ಹಂಪಲು ತೋಟ,ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ಪುರಂದರ ರೈಯವರ ಒಂದೂವರೆ ಕೋಟಿ ಲೀಟರಿನ ನೀರಿನ ಟ್ಯಾಂಕಿ, ಅಡಿಕೆ ಮತ್ತು ಹಣ್ಣು ಹಂಪಲಿನ ತೋಟ, ಕಡಮಜಲು ಸುಭಾಷ್ ರೈ ಅವರ ಕಡಮಜಲು ಸಿರಿ ಗೇರುತೋಟ, ಅಡಿಕೆ ತೋಟ, ಜಾನುವಾರು ಸಾಕಣೆ, ನಾಟಿ ಕೋಳಿ ಸಾಕಣೆ, ಆಧುನಿಕ ಕೃಷಿ ಕ್ಷೇತ್ರಕ್ಕೆ ಪ್ರವಾಸ ಮಾಡಲಾಯಿತು. ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯಲ್ಲಿ ನಡೆದ ಆಟಿದ ಆಮಾಸೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು 78 ಬಗೆಯ ಖಾದ್ಯಗಳನ್ನು ಸವಿಯಲಾಯಿತು.
ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ಕೋರಂಗ, ಹಾಗೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಯಶಸ್ ,ಕೃಷಿ ಅಧಿಕಾರಿ ಭರ್ಮಣ್ಣ, ಹಿರಿಯ ಕೃಷಿಕರಾದ ಕಡಮಜಲು ಸುಭಾಸ್ ರೈ, ಕೃಷಿಕ ಸಮಾಜದ ಜಿಲ್ಲಾ ನಿರ್ದೇಶಕ ಐ.ಸಿ. ಕೈಲಾಸ್, ಉಮೇಶ್ ರೈ ಸಾಯಿರಾಂ ಕಲ್ಲುಗುಡ್ಡೆ ಸೇರಿದಂತೆ 45 ಮಂದಿ ಕೃಷಿಕರು ಭಾಗವಹಿಸಿದರು.