ವಿಟ್ಲಪಡ್ನೂರು ಗ್ರಾಮ ಸಭೆ

0

ಗ್ರಾಮ ಸಭೆಗಳು ಜನರ ಸಮಸ್ಯೆ ಪರಿಹಾರಕ್ಕೆ ಸೂಕ್ತ ವೇದಿಕೆ: ಜಯಂತ ಪಿ.

ವಿಟ್ಲ: ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಭಾಗವಹಿಸಿ ನೇರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮತ್ತು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಲಹೆ ನೀಡಲು ಉತ್ತಮವಾದ ವೇದಿಕೆಯಾಗಿದೆ. ಗ್ರಾಮಸ್ಥರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಕುಡಿಯುವ ನೀರನ್ನು ಮಿತವಾಗಿ ಬಳಸಿ ಹೆಚ್ಚಿನ ನೀರು ಪೋಲಾಗುವುದನ್ನು ನಿಲ್ಲಿಸಬೇಕು ಹಾಗೂ ತುರ್ತು ಸಂದರ್ಭದಲ್ಲಿ  ವಾಟರ್ ಮ್ಯಾನ್ ಗಳಿಗೆ ಸಹಕಾರವನ್ನು ನೀಡಬೇಕು. ಗ್ರಾ.ಪಂ.ಗೆ  ಸಲ್ಲಿಸತಕ್ಕ ಆಸ್ತಿ ತೆರಿಗೆಯನ್ನು ಆದಷ್ಟು ಬೇಗ  ಪಾವತಿಸಿ ಸಹಕರಿಸಬೇಕು ಎಂದು ವಿಟ್ಲಪಡ್ನೂರು ಗ್ರಾಮ ಪಂಚಾಯತ್ ನ ಅಧ್ಯಕ್ಷ ಜಯಂತ ಪಿ. ಹೇಳಿದರು. 

ಅವರು  ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ  2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಬಂಟ್ವಾಳ ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ನೋಣಯ್ಯ ಮಾರ್ಗದರ್ಶಕ ಅಧಿಕಾರಿಯಾಗಿ ಆಗಮಿಸಿ ಸಭೆ ನಡೆಸಿಕೊಟ್ಟರು. 

ವಿವಿಧ ಇಲಾಖಾಧಿಕಾರಿಗಳು  ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. 

 ಉಪಾಧ್ಯಕ್ಷೆ  ಪ್ರೇಮಲತಾ, ಸದಸ್ಯರುಗಳಾದ  ಜಯಲಕ್ಷ್ಮಿ , ನಾಗೇಶ್ ಕುಮಾರ್ ,  ಕೆ. ರೇಖಾ,  ಜಯಭಾರತಿ,  ಹರಿಕಿಶೋರ್, ರವೀಶ್ ಶೆಟ್ಟಿ ,  ರೇಷ್ಮಾ ಶಂಕರಿ , ಹರ್ಷ ದ್ ಕೆ. ಎಂ.,  ಶರೀಫ್, ಲಕ್ಷ್ಮಿ ,ಶ್ರೀ ಮೈಮೂದ್,  ನೆಬಿಸಾ, ಅವ್ವಮ್ಮ, ಸಂದೇಶ್ ಶೆಟ್ಟಿ,  ಅಮಿತಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ಡೋಣು ಸ್ವಾಗತಿಸಿ,  ವಂದಿಸಿದರು. ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here