ಉಪ್ಪಿನಂಗಡಿ: ವಿದ್ಯಾಭಾರತಿ ವತಿಯಿಂದ ನಡೆಯುವ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯೂ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆ.6 ರಂದು ಶ್ರೀ ಗುರು ಸುಧೀಂದ್ರಕಲಾ ಮಂದಿರದಲ್ಲಿ ನಡೆಯಿತು.
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ವಿದ್ಯಾಭಾರತಿ ಕ್ಷೇತ್ರೀಯ ನೈತಿಕ, ಆಧ್ಯಾತ್ಮಿಕ ಪ್ರಮುಕ್ ವೆಂಕಟರಮಣ ರಾವ್ ಮಂಕುಡೆ ಶಿಸ್ತುಬದ್ಧ ಜೀವನದಿಂದ ಗೆಲುವು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸುಂದರ ಗೌಡ ಸಚಿನ್ ಶಾಮಿಯಾನ ಉಪ್ಪಿನಂಗಡಿ, ಇಂದ್ರಪ್ರಸ್ಥ ವಿದ್ಯಾಸಂಸ್ಥೆಯ ಅಧ್ಯಕ್ಷ ಕರುಣಾಕರ ಸುವರ್ಣ, ಸಂಚಾಲಕ ಸುಬ್ರಹ್ಮಣ್ಯ ಭಟ್, ಜಿಲ್ಲಾ ಶಾರೀರಿಕ
ಪ್ರಮುಖ್ ಪುರುಶೋತ್ತಮ , ಮಂಗಳೂರು ಅಲೈಡ್ ಸಂಸ್ಥೆಯ ಉಪ ಮುಖ್ಯ ಶಿಕ್ಷಕ ಸುರೇಶ್, ಹಾಗೂ ಸಂಸ್ಥೆಯ ಮುಖ್ಯಶಿಕ್ಷಕರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಜಿಲ್ಲೆಯ ವಿದ್ಯಾಭಾರತಿ ಒಳಪಟ್ಟ 34 ಸಂಸ್ಥೆಗಳಿಂದ ಸುಮಾರು 345 ಸ್ಪರ್ಧಾಳುಗಳು ಭಾಗವಹಿಸಿದ್ದು ಈ ಕಾರ್ಯಕ್ರಮವ ವಿದ್ಯಾಲಯದ ಮುಖ್ಯ ಗುರು ವೀಣಾ ಆರ್ ಪ್ರಸಾದ್ ಸ್ವಾಗತಿಸಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹೆಚ್.ಕೆ. ಪ್ರಕಾಶ್ ವಂದಿಸಿದರು. ಕಾರ್ಯಕ್ರಮವನ್ನು ಅನಿತಾ, ಹರ್ಷಿತಾ, ನಂದಶ್ರೀ, ವನಿತಾ ನಿರೂಪಿಸಿದರು.
ಸಮಗ್ರ ಪ್ರಶಸ್ತಿಯನ್ನು ಪಡೆದ ವಿದ್ಯಾಸಂಸ್ಥೆಗಳು
14ರ ವಯೋಮಾನದ ಬಾಲಕರ ವಿಭಾಗದಲ್ಲಿ– ಶಕ್ತಿ ವಿದ್ಯಾಸಂಸ್ಥೆ, ಮಂಗಳೂರು ಪ್ರಥಮ, ಸರಸ್ವತಿ ಇಂಗ್ಲೀಷ್ ಮಾಧ್ಯಮ ಶಾಲೆ ದ್ವಿತೀಯ,
ಬಾಲಕಿಯರ ವಿಭಾಗದಲ್ಲಿ -ಶಾರದಾ ಶುಭೋದಯ ಪ್ರಥಮ, ವಿವೇಕಾನಂದ ಇಂಗ್ಲೀಷ್ ಮಾಧ್ಯಮ ಶಾಲೆ ದ್ವಿತೀಯ,
17ರ ವಯೋಮಾನದ ಬಾಲಕರ ವಿಭಾಗದಲ್ಲಿ -ಶಾರದಾ ವಿದ್ಯಾನಿಕೇತನ ಪ್ರಥಮ, ಶಾರದಾ ಗಣಪತಿ ಕೈರಂಗಳ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಶ್ರೀದೇವಿ ಪ್ರೌಢಶಾಲೆ ಪ್ರಥಮ, ಜ್ಞಾನದೀಪ ಎಲಿಮಲೆ ದ್ವಿತೀಯ
19ರ ವಯೋಮಾನದ ಬಾಲಕರ ವಿಭಾಗದಲ್ಲಿ– ವಿವೇಕಾನಂದ ಕಾಲೇಜು ಪುತ್ತೂರು ಪ್ರಥಮ,
ಶಾರದಾ ಪದವಿ ಪೂರ್ವ ಕಾಲೇಜು ಮಂಗಳೂರು ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಕಾಲೇಜು ಪ್ರಥಮ , ಶಕ್ತಿ ಕಾಲೇಜು ಮಂಗಳೂರು ಮತ್ತು ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ ದ್ವಿತೀಯ ಅನುಸಾರವಾಗಿ ಸ್ಥಾನ ಪಡೆದುಕೊಂಡಿದ್ದಾರೆ.