ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯಲ್ಲಿ ಪುತ್ತೂರಿನ 19 ಮಂದಿಗೆ ಉದ್ಯೋಗ

0

ಉದ್ಯೋಗ ಕ್ಷೇತ್ರದಲ್ಲಿ ಶಾಸಕರ ಕಾರ್ಯ ಶ್ಲಾಘನೀಯ: ಸುದೇಶ್ ಶೆಟ್ಟಿ


ಪುತ್ತೂರು: ಅಶೋಕ್ ರೈಯವರು ಪುತ್ತೂರು ಶಾಸಕರಾದ ಬಳಿಕ ಒಂದಲ್ಲೊಂದು ಹೊಸ ಸಾಧನೆಗಳನ್ನು ಮಾಡುತ್ತಲೇ ಇದ್ದು , ಎಲ್ಲವೂ ಜನೋಪಯೋಗಿ ಕಾರ್ಯಗಳಾಗಿದ್ದು ಇದೀಗ ಉದ್ಯೋಗ ಕ್ಷೇತ್ರದಲ್ಲಿಯೂ ಶಾಸಕರ ಕಾರ್ಯ ಶ್ಲಾಘನೀಯವಾಗಿದೆ ಎಂದು ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಹೇಳಿದರು.


ಅವರು ಶಾಸಕರ ಕಚೇರಿ ಸಭಾಂಗಣದಲ್ಲಿ ನಡೆದ ಉದ್ಯೋಗ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪುತ್ತೂರಿನ ಯುವಕರಿಗೆ ಕೆಲಸ ಕೊಡಿಸಬೇಕು ಅವರು ಕೂಡಾ ಸ್ವಂತ ಕಾಲಲ್ಲಿ ನಿಲ್ಲುವಂತಾಗಬೇಕು, ಕುಟುಂಬವನ್ನು ಸಲಹಬೇಕು ಎಂಬ ಉದ್ದೇಶದಿಂದ ಉದ್ಯೋಗ ಹುಡುಕಿಕೊಂಡು ಬರುವ ಯುವಕರಿಗೆ ಶಾಸಕರು ಇಲ್ಲಿನ ಯುವಕರನ್ನೇ ಆ ಹುದ್ದೆಗೆ ನೇಮಕಗೊಳಿಸುತ್ತಿದ್ದಾರೆ.

ಈ ಬಾರಿ ಬೆಂಗಳೂರಿನ ಬಿಎಂಟಿಸಿಗೆ ಚಾಲಕ ಹುದ್ದೆಗೆ 50 ಮಂದಿ ಪುತ್ತೂರಿನ ಯುವಕರಿಗೆ ಅವಕಾಶ ನೀಡಬೇಕು ಎಂದು ಬಿಎಂಟಿಸಿಯಲ್ಲಿ ಮಾತುಕತೆ ನಡೆಸಿದ್ದಾರೆ ಅದೇ ರೀತಿ ಪುತ್ತೂರು ಕೆಎಸ್‌ಆರ್‌ಟಿಸಿಯಲ್ಲಿಯೂ 50 ಮಂದಿಗೆ ಉದ್ಯೋಗವನ್ನು ಕಲ್ಪಿಸಿದ್ದಾರೆ. ಮೊದಲ ಹಂತವಾಗಿ 19 ಮಂದಿ ಅಭ್ಯರ್ಥಿಗಳು ಆ.12 ಕ್ಕೆ ಉದ್ಯೋಗಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.


ರೈ ಚಾರಿಟೇಬಲ್ ಟ್ರಸ್ಟ್ ಸೋಶಿಯಲ್ ಮೀಡಿಯಾ ಮುಖ್ಯಸ್ಥ ಕೃಷ್ಣಪ್ರಸಾದ್ ಬೊಳ್ಳಾವು ಮಾತನಾಡಿ ಬೆಂಗಳೂರು ಬಿಎಂಟಿಸಿಯಲ್ಲಿ ಚಾಲಕ ಹುದ್ದೆ ಸಿಗುವುದು ಸುಲಭದ ಕೆಲಸವಲ್ಲ. ಶಾಸಕರು ಅಲ್ಲಿಯ ಅಧಿಕಾರಿಗಳ ಜೊತೆ ಮಾತನಾಡಿ ನಮ್ಮ ಯುವಕರನ್ನು ಸೇರಿಸುವ ಕೆಲಸ ಮಾಡಿದ್ದಾರೆ. ಕೆಲಸಕ್ಕೆ ಸೇರಿದ ಕೂಡಲೇ ಎಲ್ಲವೂ ಸರಿಯಾಗಿರಬೇಕೆಂದಿಲ್ಲ, ನಾವು ಸ್ವಲ್ಪ ದಿನ ಸುಧಾರಿಸಿಕೊಳ್ಳಬೆಕಾದೀತು ಏನೇ ಸಮಸ್ಯೆಯಾದರೂ ಟ್ರಸ್ಟ್ ಪ್ರಮುಖರಿಗೆ ತಿಳಿಸಿದರೆ ಸಾಕು ನಾವು ನಿಮಗೆ ಎಲ್ಲಾ ರೀತಿಯ ನೆರವನ್ನು ನೀಡುವುದಾಗಿ ಹೇಳಿದರು. ಟ್ರಸ್ಟ್ ಸಿಬಂದಿ ಲಿಂಗಪ್ಪ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here