





ಪುತ್ತೂರು: ಜೆಸಿಐಯವರು ಬಿ.ಸಿ.ರೋಡಿನಲ್ಲಿ ಆಯೋಜಿಸಿದ್ದ ಬಂಟವಾಳದ ಬೃಹತ್ ಆಹಾರ ಮೇಳದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಹುಬ್ಬಳ್ಳಿ ಹಾಗೂ ದ.ಕ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಆಶ್ರಯದಲ್ಲಿ ಸತ್ಯ ಶಾಂತ ಪ್ರತಿಷ್ಠಾನ ಅರ್ಪಣೆಯೊಂದಿಗೆ ಸಾಹಿತಿ ಶಾಂತಾ ಕುಂಟಿನಿಯವರ ಸಾರಥ್ಯದಲ್ಲಿ ಗಾನಲಹರಿ ಕಾರ್ಯಕ್ರಮ ಆ.4ರಂದು ನಡೆಯಿತು.


ತೃಷಾ ಶ್ರೀಧರ್ ನಾಯ್ಕ್, ಶ್ರೇಯಾ ಸಿ.ಪಿ ಕಡಬ, ಆತ್ಮಿ ಕಡಬ, ವರ್ಷಿಣಿ ಕಡಬ, ಕುಶಾಲಪ್ಪ ಗೌಡ, ವೈಶಾಲಿ ಉಪ್ಪಿನಂಗಡಿ, ರವಿ ಕುಮಾರ್, ಪ್ರದೀಪ್ ಆಚಾರ್ಯ ಹಾಗೂ ಶಾಂತಾ ಕುಂಟಿನಿ ಹಾಡು ಹಾಡಿದರು. ಶ್ರೇಯಾ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.






ದ.ಕ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಜಯಾನಂದ ಪೆರಾಜೆ ಅವರು ಗಾಯಕರಿಗೆ ಪ್ರಶಸ್ತಿ ಪತ್ರ ನೀಡಿದರು. ಶಾಂತಾ ಕುಂಟಿನಿರವರಿಗೆ ಶಾಲು ಹೊದೆಸಿ ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಿದರು.










