ಭಕ್ತರಿಂದ ನಾಗ ದೇವರಿಗೆ ಸಿಯಾಳ, ಹಾಲು ಸಮರ್ಪಣೆ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆ.9ರಂದು ನಾಗರ ಪಂಚಮಿ ಆಚರಣೆ ನಡೆಯಿತು. ಭಕ್ತರಿಂದ ನಾಗ ದೇವರಿಗೆ ಸಿಯಾಳ, ಹಾಲು ಸಮರ್ಪಣೆ ಮಾಡಲಾಯಿತು.
ಬೆಳಿಗ್ಗೆ ದೇವರಮಾರು ಗದ್ದೆಯಲ್ಲಿರುವ ಮೂಲ ನಾಗಸನ್ನಿಧಿಯಲ್ಲಿ ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರ ವೈದಿಕತ್ವದಲ್ಲಿ ಅಭಿಷೇಕಗಳು ನಡೆದ ಬಳಿಕ ನಾಗತಂಬಿಲ ನಡೆಯಿತು. ಇದೇ ಸಂದರ್ಭ ದೇವಳದ ಎದುರು ಇರುವ ವಾಸುಕೀ ನಾಗನ ಗುಡಿಯಲ್ಲಿ ಅಭಿಷೇಕಗಳು ನಡೆಯಿತು. ಭಕ್ತರು ಸರದಿ ಸಾಲಿನಲ್ಲಿ ಬಂದು ನಾಗ ದೇವರಿಗೆ ಹಾಲು, ಸೀಯಾಳ ಸಮರ್ಪಣೆ ಮಾಡಿದರು.