ಬಲ್ನಾಡು: ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಬಲ್ನಾಡು, ಒಕ್ಕಲಿಗ ಗೌಡ ಸೇವಾ ಸಂಘ ಬಲ್ನಾಡು, ಯುವ ಘಟಕ, ಮಹಿಳಾ ಘಟಕ ಮತ್ತು ಮಾದರಿ ಗ್ರಾಮ ಸಮಿತಿ ಬಲ್ನಾಡು ಇವರ ಸಹಯೋಗದಲ್ಲಿ ಆಟಿ ಆಚರಣೆ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಶ್ರೀ ಭಟ್ಟಿ ವಿನಾಯಕ ಸಭಾಭವನದಲ್ಲಿ ಆ.4ರಂದು ನಡೆಯಿತು.
ಉದ್ಘಾಟನಾ ಕಾರ್ಯಕ್ರಮ
ಬೆಳಿಗ್ಗೆ ಕಾರ್ಯಕ್ರಮವನ್ನು ಬಲ್ನಾಡು ಕಟ್ಟೆಮನೆಯ ಬಾಲಕೃಷ್ಣ ಗೌಡ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಒಕ್ಕಲಿಗ ಗೌಡ ಸೇವಾ ಸಂಘ ಬಲ್ನಾಡು ಗ್ರಾಮ ಸಮಿತಿ ಅಧ್ಯಕ್ಷರಾದ ಮಾಧವ ಗೌಡ ಕಾಂತಿಲ,ಮುಖ್ಯ ಅತಿಥಿಗಳಾಗಿ ದಂಡನಾಯಕ ಶ್ರೀ ಉಳ್ಳಾಲ್ತಿ ದೈವಸ್ಥಾನ ಬಲ್ನಾಡು ಮಾಜಿ ಅಧ್ಯಕ್ಷರಾದ ತಿಮ್ಮಪ್ಪ ಗೌಡ ಬ್ರಹ್ಮರಕೋಡಿ ಭಾಗವಹಿಸಿದ್ದರು.
ಸಮಾರೋಪ ಕಾರ್ಯಕ್ರಮ
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಾದರಿ ಗ್ರಾಮ ಸಮಿತಿ ಅದ್ಯಕ್ಷರಾದ ನಾರಾಯಣಗೌಡ ಕುಕ್ಕುತ್ತಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರದ ಸಂಜೀವ ಮಠಂದೂರು,ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷರಾದ ಡಿ ವಿ ಮನೋಹರ್, ತಾಲೂಕು ಯುವ ಘಟಕದ ಅಧ್ಯಕ್ಷ ಅಮರನಾಥ ಗೌಡ, ತಾಲೂಕು ಮಹಿಳಾ ಘಟಕದ ಅಧ್ಯಕ್ಷ ವಾರಿಜಾ ಬೆಳಿಯಪ್ಪ ಗೌಡ, ಪುತ್ತೂರು ವಲಯ ಒಕ್ಕೂಟದ ಅಧ್ಯಕ್ಷ ಲೋಕನಾಥ ಗೌಡ, ಬಲ್ನಾಡು ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಗೀತಾ ವಳಗುಡ್ಡೆ, ಸಂತ ಫಿಲೋಮಿನಾ ಕಾಲೇಜು ಉಪನ್ಯಾಸಕಿ ಉಷಾ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಮಿತಿ ಅಧ್ಯಕ್ಷರಾದ ಗೋಪಾಲಕೃಷ್ಣ ಪಟೇಲ್ ಆಟಿ ತಿಂಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಸಲಹಾ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ ದೇವಳಿಕೆ, ಮಾದರಿ ಗ್ರಾಮ ಸಮಿತಿಯ ಸಂಚಾಲಕರು ಉಮೇಶ್ ಗೌಡ ಬ್ರಹ್ಮರಕೋಡಿ, ಗ್ರಾಮ ಸಮಿತಿ ಅಧ್ಯಕ್ಷರಾದ ಮಾಧವ ಗೌಡ ಕಾಂತಿಲ, ಮಹಿಳಾ ಘಟಕದ ಅಧ್ಯಕ್ಷರಾದ ಚಂದ್ರಾವತಿ ಮುದಲಾಜೆ, ಯುವ ಘಟಕದ ಅಧ್ಯಕ್ಷರಾದ ಸಂತೋಷ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಜ್ಞಾ,ಪ್ರೇಮ, ಗೀತಾ,ಕೃಪಾ ಪ್ರಾರ್ಥಿಸಿದರು. ಗೀತಾ ಒಳಗುಡ್ಡೆ ಸ್ವಾಗತಿಸಿದರು, ಕೃಪಾ ವಂದಿಸಿದರು, ಉಷಾ ಕಾಂತಿಲ ಕಾರ್ಯಕ್ರಮ ನಿರೂಪಿಸಿದರು. ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಮೇಲ್ವಿಚಾಕಾರದ ಸುಮಲತಾ, ಪ್ರೇರಕರಾದ ನಮಿತಾ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.
ಪ್ರತಿಭಾ ಪುರಸ್ಕಾರ /ಸನ್ಮಾನ ಕಾರ್ಯಕ್ರಮ
2023 24ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ನಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಬಾಬುಗೌಡ ಬ್ರಹ್ಮರಕೋಡಿ ಮುತ್ತಪ್ಪಗೌಡ ಕಾಂತಿಲ, ಗೌಡತ್ತಿಗೆ ನಡೆಸುತ್ತಿರುವ ಜಿನ್ನಪ್ಪ ಗೌಡ ಕಾಂತಿಲ, ದಂಡನಾಯಕ ದೈವದ ಪಾತ್ರಿ ಪರಮೇಶ್ವರ ಗೌಡ ಕಟ್ಟೆಮನೆ, ಮಲರಾಯನ ದೈವದ ಅಡೈಣ ಕತ್ತಿ ಪಾತ್ರಿ ಮಂಜಪ್ಪ ಗೌಡ ಕುಕ್ಕುತ್ತಡಿ, ಶ್ರೀ ಉಳ್ಳಾಲ್ತಿ ದೈವಸ್ಥಾನದ ಮೂಲ ಪರಿಚಾರಕರು ಕುಕ್ಕಪ್ಪ ಗೌಡ ಕಲ್ಲಾಜೆ ಇವರುಗಳನ್ನು ಶಾಲು, ಹಾರ ,ಸ್ಮರಣಿಕೆ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.
ವಿವಿಧ ಆಟೋಟ ಸ್ಪರ್ಧೆ ಬಹುಮಾನ ವಿತರಣೆ
ಪುರುಷರಿಗೆ ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಒಳಾಂಗಣ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು.ಮಧ್ಯಾಹ್ನ ಆಟಿ ತಿಂಗಳ ತಿಂಡಿ ತಿನಿಸುಗಳ ಭೋಜನ ನಡೆಯಿತು.