ದೊಡ್ಡಡ್ಕ-ಬಳ್ಳೆರಿ ಸಂಪರ್ಕ ರಸ್ತೆಯಲ್ಲಿ ನೀರು – ಸಂಚಾರಕ್ಕೆ ಅಡ್ಡಿ – ರಸ್ತೆ ಬಳಕೆದಾರರಿಂದ ಸೂಕ್ತ ಕ್ರಮಕ್ಕೆ ಆಗ್ರಹ

0

ಬಡಗನ್ನೂರು: ಆರ್ಯಾಪು ಗ್ರಾ.ಪಂ ವ್ಯಾಪ್ತಿಯ ದೊಡ್ಡಡ್ಕ-ಬಳ್ಳೇರಿ ಸಂಪರ್ಕ ರಸ್ತೆಯಲ್ಲಿ ನೀರು ತುಂಬಿ ಸಂಚಾರಕ್ಕೆ ಅಡ್ಡಿ ತೊಡಕಾಗಿದ್ದು ಈ ಭಾಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದು 40 ವರ್ಷಗಳ ಹಿಂದಿನ ರಸ್ತೆಯಾಗಿದ್ದು ಸುಮಾರು 25 ರಿಂದ 30 ಮನೆಗಳಿಗೆ ಸಂಪರ್ಕ ಕಲ್ಪಸುತ್ತಿದೆ. ಪ್ರಸ್ತುತ ಈ ರಸ್ತೆಯ ಅಕ್ಕಪಕ್ಕದ ‌ಜಾಗವನ್ನು ಮಾಲೀಕರು ಮಾರಾಟ ಮಾಡಿದ್ದು, ಜಮೀನು ಖರೀದಿಸಿದ ವ್ಯಕ್ತಿ ರಸ್ತೆ ಮಾರ್ಜಿನ್ ನಲ್ಲಿ ಕಾಂಪೌಂಡ್ ರಚನೆ ಮಾಡಿರುವುದರಿಂದ ಮೇಲ್ಭಾಗದಿಂದ ಹರಿದು ಬರುವ ಮಳೆಯ ನೀರು ಸರಾಗವಾಗಿ ಚರಂಡಿಯಲ್ಲಿ ಹರಿದು ಹೋಗಲು ಸಾಧ್ಯವಾಗದೆ  ರಸ್ತೆಯಲ್ಲಿ ನೀರು ತುಂಬುವಂತಾಗಿದೆ. ಇದರಿಂದ ಈ ರಸ್ತೆಯನ್ನು ಬಳಸುವ ವಾಹನ ಚಾಲಕರಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗಿದೆ. ಈ ಕುರಿತು ಆರ್ಯಾಪು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ, ಪುತ್ತೂರು ಎ.ಸಿ ಅವರಿಗೆ ಮನವಿ ಸಲ್ಲಿಸಿ ಈ ಭಾಗದ ಜನರ ಸಮಸ್ಯೆ ಬಗ್ಗೆ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರೂ  ಇದುವರೆಗೆ ಯಾವುದೇ ಅಧಿಕಾರಿ ಅಥವಾ ಜನಪ್ರತಿನಿಧಿಗಳಿಂದ ಸ್ಪಂದನೆ ಸಿಕ್ಕಿಲ್ಲ ಎಂಬ ಕೊರಗು ಈ ಭಾಗದ ಜನರದ್ದು. ಇನ್ನಾದರೂ ಸಂಬಂಧಪಟ್ಟವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು, ರಸ್ತೆ ಬಳಕೆದಾರರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here