ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ವಲಯಾಧ್ಯಕ್ಷರ ಸಮಾವೇಶ, ಆಟಿದ ಗೌಜಿ

0

ಪುತ್ತೂರು: ಲಯನ್ಸ್ ಜಿಲ್ಲೆ 317d, ಪ್ರಾಂತ್ಯ 4, ವಲಯ 2ರ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ವಲಯಾಧ್ಯಕ್ಷರ ಸಮಾವೇಶ ಹಾಗೂ ಆಟಿದ ಗೌಜಿ ಕಾರ್ಯಕ್ರಮವು ಲಯನ್ಸ್ ಪುತ್ತೂರು ಕ್ರೌನ್ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್ ರವರ ಪಡೀಲು ನಿವಾಸದಲ್ಲಿ ಆ.7 ರಂದು ಸಂಜೆ ಜರಗಿತು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಲಯನ್ಸ್ ವಲಯ ಅಧ್ಯಕ್ಷ ಸುದೇಶ್ ಭಂಡಾರಿ ಮಾತನಾಡಿ, ನೂತನ ಕ್ಲಬ್ ಸದಸ್ಯರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಉತ್ತಮ ಸಮಾಜಸೇವೆಯ ಮುಖಾಂತರ ಕ್ಲಬ್ ಉನ್ನತ ಹಂತಕ್ಕೇರಲಿ ಎಂದು ಹೇಳಿ ಶುಭ ಹಾರೈಸಿದರು.

ಲಯನ್ಸ್ ಮಾಜಿ ಪ್ರಾಂತ್ಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಕ್ಲಬ್ ಮುಂದಿನ ಐದು ವರ್ಷಗಳಲ್ಲಿ ಒಳ್ಳೆಯ ಸೇವಾ ಚಟುವಟಿಕೆಗಳನ್ನು ಮಾಡುವ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡು ಕ್ಲಬ್ ಬೆಳೆಯಲಿ ಎಂದರು.

ವೇದಿಕೆಯಲ್ಲಿ ಲಯನ್ಸ್ ಪುತ್ತೂರು ವಲಯ ರಾಯಭಾರಿ ಸದಾಶಿವ ನಾಯಕ್, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷೆ ವೇದಾವತಿ ಎ, ಲಯನ್ಸ್ ಕ್ಲಬ್ ಪುತ್ತೂರು ಅಧ್ಯಕ್ಷೆ ಪ್ರೇಮಲತಾ ರಾವ್, ಲಯನ್ಸ್ ವಿಟ್ಲ ಕ್ಲಬ್ ಅಧ್ಯಕ್ಷ ರಜತ್ ಆಳ್ವ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಆಟಿದ ಗೌಜಿಯ ಮನೋರಂಜನಾ ಕಾರ್ಯಕ್ರಮಗಳಾದ ನೃತ್ಯ, ಹಾಡು, ಆಟೋಟ ಸ್ಪರ್ಧೆಗಳು ನಡೆದವು. ಸದಸ್ಯರಿಂದ ವಿವಿಧ ಬಗೆಯ ಖಾದ್ಯಗಳನ್ನು ಸವಿಯುವ ಮೂಲಕ ಕಾರ್ಯಕ್ರಮದ ಸಿಹಿಯನ್ನು ಹೆಚ್ಚಿಸಿದ್ದರು. ಲಯನ್ಸ್ ಪುತ್ತೂರು ಕ್ರೌನ್ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್ ಸ್ವಾಗತಿಸಿ, ಕಾರ್ಯದರ್ಶಿ ಲೀನಾ ಮಚಾದೋ ವರದಿ ಮಂಡಿಸಿದರು. ಕೋಶಾಧಿಕಾರಿ ವಿಕ್ಟರ್ ಶರೂನ್ ಡಿ’ಸೋಜ ವಂದಿಸಿದರು.

LEAVE A REPLY

Please enter your comment!
Please enter your name here