ವಿವೇಕಾನಂದ ಪಾಲಿಟೆಕ್ನಿಕ್ ನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

0

ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಗಾಟನಾ ಕಾರ‍್ಯಕ್ರಮವು ಆ.10ರಂದು ನಡೆಯಿತು. ದೀಪ ಬೆಳಗಿಸಿ ಉದ್ಗಾಟಿಸಿದ ವಿವೇಕಾನಂದ ಪದವಿ ಪೂರ್ವಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ರೈ.ಪಿ. ಮಾತನಾಡಿ ಇಲ್ಲಿ ಓದಿದ ವಿದ್ಯಾರ್ಥಿಗಳು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮಿಂಚಿದ್ದಾರೆ. ವಿಶ್ವವನ್ನು ಉಳಿಸಬೇಕಾದರೆ ಮೊದಲು ಭಾರತ ಉಳಿಬೇಕು ಅದಕ್ಕಾಗಿ ಭಾರತದ ಮೌಲ್ಯಗಳನ್ನು ಸಂರಕ್ಷಣೆ ಮಾಡಬೇಕು, ನಾಯಕನಿಗೆ ಸರಿಯಾದ ದಿಕ್ಕು ಸಿಕ್ಕಿದಾಗ ಸಮಾಜವನ್ನು ಸರಿಯಾಗಿ ನಡೆಸಿಕೊಂಡು ಹೋಗಲು ಸಾಧ್ಯ ಎಂದರು.


ಕಾರ‍್ಯಕ್ರಮದ ಅಧ್ಯಕ್ಷ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡಿ “ಸಂಸ್ಥೆಯ ಗೌರವಕ್ಕೆ ಚ್ಯುತಿಬಾರದಂತೆ ನಡೆಯತ್ತೇವೆ ಎಂದು ಮಾತು ಕೊಟ್ಟಂತೆ ನಡೆದು ಸಂಸ್ಥೆಯ ಅಭಿವೃಧ್ದಿಗೆ ಶ್ರಮಿಸುವವರಾಗಿ ಎಂದರು.


ವಿದ್ಯಾರ್ಥಿಸಂಘದ ಪ್ರತಿನಿಧಿಗಳಾದ ಅಂಶಿಕ್ ಜಿ.ಕೆ,ಹೃತ್ವಿಕ್ ಪಿ.ಸಿ. ಸುಮನ್ ಡಿ. ವರ್ಷಿತ್ ಬಿ. ದೀವಿತ್ ಶೆಟ್ಟಿ, ಶ್ರಾವ್ಯ ಇವರಿಗೆ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಸಿವಿಲ್ ವಿಭಾಗ ಮುಖ್ಯಸ್ಥರಾದ ರವಿರಾಮ ಎಸ್ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಈ ಕಾರ‍್ಯಕ್ರಮದಲ್ಲಿ ಆಡಳಿತ ಮಂಡಳಿಯ ಸಂಚಾಲಕ ಮಹಾದೇವ ಶಾಸ್ತ್ರಿ ಮಣಿಲ ಹಾಗೂ ಸದಸ್ಯರಾದ ಈಶ್ವರಚಂದ್ರ ಭಾಗವಹಿಸಿದ್ದರು.

ಈ ಕಾರ‍್ಯಕ್ರಮದಲ್ಲಿ ಶಿಕ್ಷಕರು,ಶಿಕ್ಷಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.ವಿದ್ಯಾರ್ಥಿಗಳಾದ ಶೃಜನ್ಯ ತಂಡದವರು ಪ್ರಾರ್ಥಿಸಿದರು, ಕಾಲೇಜಿನ ಪ್ರಾಂಶುಪಾಲ ಮುರಳೀಧರ್ ಎಸ್ ಸ್ವಾಗತಿಸಿ, ವಿದ್ಯಾರ್ಥಿ ನಾಯಕ ಅಂಶಿಕ್ ಜಿ.ಕೆ. ವಂದಿಸಿದರು, ಕಂಪ್ಯೂಟರ್ ಸೈನ್ಸ ವಿಭಾಗದ ವಿದ್ಯಾರ್ಥಿನಿ ವಿಜೇತ ನಿರೂಪಿಸಿದರು.

LEAVE A REPLY

Please enter your comment!
Please enter your name here