ಬೆಂಗಳೂರಿನಲ್ಲಿ ಬಿಂದು ಫ್ಯಾಕ್ಟರಿ ಔಟ್‌ಲೆಟ್‌ಗೆ ಚಾಲನೆ

0

ಪುತ್ತೂರು:ಪ್ರತಿಷ್ಠಿತ ತಂಪು ಪಾನೀಯ ತಯಾರಿಕಾ ಸಂಸ್ಥೆಯಾಗಿರುವ ಪುತ್ತೂರಿನ ಬಿಂದು ಫ್ಯಾಕ್ಟರಿಯು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಟರ್ಮಿನಲ್ ಒಂದರಲ್ಲಿ ತೆರೆದಿರುವ ತನ್ನ 17ನೇ ಫ್ಯಾಕ್ಟರಿ ಔಟ್‌ಲೆಟ್‌ಗೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಎನ್.ಅರುಣ್ ಔಟ್‌ಲೆಟ್‌ ಗೆ ಚಾಲನೆ ನೀಡಿದರು.

ಅ ಬಳಿಕ ಮಾತನಾಡಿದ ಎಸ್.ಎನ್. ಅರುಣ್, ರಾಜ್ಯದ ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಬಿಂದು ಸಂಸ್ಥೆಯು ಇದೀಗ ತನ್ನ ಮಾರುಕಟ್ಟೆಯನ್ನು ದೇಶಾದ್ಯಂತ ವಿಸ್ತರಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಇಂತಹ ಸಂಸ್ಥೆಯೊಂದಿಗೆ ಕೆಎಸ್‌ಆರ್‌ಟಿಸಿಯು ಸದಾ ಕೈ ಜೋಡಿಸಲಿದೆ ಎಂದರು.

ಸಂಸ್ಥೆಯ ಆಡಳಿತ ನಿರ್ದೇಶಕ ಸತ್ಯಶಂಕರ್ ಮಾತನಾಡಿ ಮಾರುಕಟ್ಟೆ ವಿಸ್ತರಣೆಯ ಉದ್ದೇಶದಿಂದ ಹಾಗೂ ಸಂಸ್ಥೆಯ ಎಲ್ಲ ಉತ್ಪನ್ನಗಳು ಒಂದೂ ಸೂರಿನಡಿ ಸಿಗಬೇಕು ಎಂಬ ಪರಿಕಲ್ಪನೆಯಿಂದ ಸಂಸ್ಥೆಯು ಫ್ಯಾಕ್ಟರಿ ಔಟ್‌ಲೆಟ್ ತೆರೆಯಲಾರಂಭಿಸಿತು. ಈಗಾಗಲೇ 17 ಔಟ್‌ಲೆಟ್ ತೆರೆಯಲಾಗಿದೆ. ರಾಜ್ಯದಲ್ಲಿ ಈ ಹಣಕಾಸು ವರ್ಷದಲ್ಲಿ ಒಟ್ಟು 50 ಫ್ಯಾಕ್ಟರಿ ಔಟ್‌ಲೆಟ್ ತೆರೆಯುವ ಗುರಿ ಹಾಕಿಕೊಳ್ಳಲಾಗಿದೆ. ಐದು ವರ್ಷಗಳಲ್ಲಿ 500 ಫ್ಯಾಕ್ಟರಿ ಔಟ್‌ಲೆಟ್ ತೆರೆಯುವ ಯೋಜನೆ ಇದೆ. ಈ ಮೂಲಕ ಉದ್ಯೋಗಾವಕಾಶವೂ ಹೆಚ್ಚಾಗಲಿದೆ ಎಂದರು.

ಬಿಂದು ಸಂಸ್ಥೆಗೆ ಸಂಬಂಧಿಸಿದ ಎಲ್ಲಾ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುವ ಫ್ಯಾಕ್ಟರಿ ಔಟ್‌ಲೆಟ್ ಇದಾಗಿದೆ. ನಿರ್ದೇಶಕಿ ಮೇಘಾ ಶಂಕರ್, ಮನಸ್ವಿತ್ ಶಂಕರ್, ವಾಣಿಜ್ಯ ಮತ್ತು ಮಾರುಕಟ್ಟೆ ವಿಭಾಗದ ರಾಷ್ಟ್ರೀಯ ಪ್ರಬಂಧಕ ಹರಿಪ್ರಸಾದ್, ಉಪಾಧ್ಯಕ್ಷ ಶ್ರೀನಿವಾಸನ್, ಮಾರಾಟ ವಿಭಾಗದ ನ್ಯಾಷನಲ್ ಪ್ರಬಂಧಕ ಗಿರೀಶ್, ವ್ಯವಹಾರ ಮುಖ್ಯಸ್ಥ ದೇವರಾಜ್, ಮಾರಾಟ ವಿಭಾಗದ ವಲಯ ಮುಖ್ಯಸ್ಥ ಪುಟ್ಟೇಗೌಡ ಉಪಸ್ಥಿತರಿದ್ದರು.

ಈ ಔಟ್‌ಲೆಟ್‌ನ ಮೂಲಕ ಬಿಂದು ಸಂಸ್ಥೆಯ ಎಲ್ಲ ಉತ್ಪನ್ನಗಳು ಒಂದೂ ಸೂರಿನಡಿ ಫ್ಯಾಕ್ಟರಿ ಬೆಲೆಯಲ್ಲಿ ಲಭ್ಯವಾಗಲಿದೆ. ಬಿಂದು ಉತ್ಪನ್ನಗಳಾದ ಸಂಸ್ಕರಿಸಲ್ಪಟ್ಟ ನೀರು, ಸೋಡಾ ಮತ್ತು ಪ್ಯಾಕೆಟೆಡ್ ಪಾನೀಯಗಳಾದ ಸಿಪ್‌ಆನ್, ಹಣ್ಣಿನ ಮೂಲದ ಪಾನೀಯ, ಫ್ಲೋಝನ್ ಬ್ಯಾಂಡ್‌ ಫಿಝ್ ಸಹಿತವಾದ ಹಣ್ಣಿನ ಮೂಲದ ಪಾನೀಯ, ಸ್ಪ್ಯಾಕ್ ಅಪ್ ಬ್ಯಾಂಡ್‌ನಲ್ಲಿ ಸ್ಕ್ಯಾಕ್ಸ್ ಕುರುಕಲು ಚಿಪ್ಸ್ ಹೀಗೆ ಸುಮಾರು 50ಕ್ಕೂ ಅಧಿಕ ಸ್ವದೇಶಿ ಉತ್ಪನ್ನಗಳು ಮಳಿಗೆಯಲ್ಲಿ ದೊರೆಯಲಿದೆ.ಔಟ್‌ಲೆಟ್ ಅಲ್ಲದೆ ದೇಶಾದ್ಯಂತ ಸುಮಾರು 5 ಲಕ್ಷಕ್ಕೂ ಅಧಿಕ ಮಳಿಗೆಗಳಲ್ಲಿ ಬಿಂದು ಉತ್ಪನ್ನಗಳು ದೊರೆಯುತ್ತದೆ. ಇದಲ್ಲದೆ ವಿದೇಶಕ್ಕೂ ಕೆಲವೊಂದು ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಶಂಕ‌ರ್ ತಿಳಿಸಿದರು.

LEAVE A REPLY

Please enter your comment!
Please enter your name here