ಉಪ್ಪಿನಂಗಡಿ: ಹನ್ನೆರಡು ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷ- ಸ್ನೇಕ್ ಝಕಾರಿಯಾರಿಂದ ರಕ್ಷಣೆ

0

ಉಪ್ಪಿನಂಗಡಿ : ಇಲ್ಲಿನ ಮೊಗ್ರು ಗ್ರಾಮದ ಸುದೆಪಿಲ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಸಮೀಪದ ನಿವಾಸಿ ಡೆನಿತ್ ಸಾಲಿಯಾನ್ ಎಂಬವರ ತೋಟದಲ್ಲಿ ಕಾಣಿಸಿದ ಹನ್ನೆರಡು ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಡಲಾಯಿತು.


ಸಾಲಿಯಾನ್ ರವರ ತೋಟದ ಕೊಕ್ಕೊ ಗಿಡದಲ್ಲಿ ಕಾಣಿಸಿದ ಕಾಳಿಂಗ ಸರ್ಪದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ಅರಣ್ಯ ಇಲಾಖೆಯವರು ಉಪ್ಪಿನಂಗಡಿಯ ಸ್ನೇಕ್ ಝಕಾರಿಯಾ ರವರೊಂದಿಗೆ ಸ್ಥಳಕ್ಕೆ ಆಗಮಿಸಿ ಕಾಳಿಂಗ ಸರ್ಪವನ್ನು ಹಿಡಿಯಲಾಯಿತು.


ಈ ವೇಳೆ ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಕೆ ವಿ ಪ್ರಸಾದ್, ಪಂಚಾಯತ್ ಸದಸ್ಯ ಶಿವ ಪ್ರಸಾದ್ , ಅರಣ್ಯ ಇಲಾಖೆಯ ಜಗದೀಶ್ , ಸೇಸಪ್ಪ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here