ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ವತಿಯಿಂದ ಆ.20ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 170ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಧಾರ್ಮಿಕ ಹಾಗೂ ಸಭಾ ಕಾರ್ಯಕ್ರಮ ಜೊತೆಗೆ ಬಿಲ್ಲವ ಸಮಾಜ ಬಾಂಧವರಲ್ಲಿನ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ, ಗೌರವಾರ್ಪಣೆ, ಅಭಿನಂದನೆ ಕಾರ್ಯಕ್ರಮ ಜರಗಲಿದೆ.
ಪ್ರತಿಭಾ ಪುರಸ್ಕಾರ:
2023-24ನೇ ವರ್ಷದ ಎಸೆಸ್ಸೆಲ್ಸಿಯಲ್ಲಿ ಶೇ.95 ಮತ್ತು ಮೇಲ್ಟಟ್ಟು ಅಂಕ ಗಳಿಸಿದವರಿಗೆ, ಪಿಯುಸಿ, ಐಟಿಐ, ಡಿಎಡ್ ಅಂತಿಮ ಪರೀಕ್ಷೆಯಲ್ಲಿ ಶೇ.90 ಮತ್ತು ಮೇಲ್ಪಟ್ಟು ಅಂಕ ಗಳಿಸಿದವರಿಗೆ, ಎಲ್ಲಾ ತರದ ಡಿಗ್ರಿ, ಡಿಪ್ಲೋಮಾ, ಬಿಬಿಎಂ, ಬಿಸಿಎ, ಬಿಎಡ್, ಎಲ್‌ಎಲ್‌ಬಿ ಇತ್ಯಾದಿ ಕೋರ್ಸಿನ ಅಂತಿಮ ಪರೀಕ್ಷೆಯಲ್ಲಿ ಶೇ.85 ಮತ್ತು ಮೇಲ್ಪಟ್ಟ ಅಂಕ ಗಳಿಸಿದವರಿಗೆ, ಎಲ್ಲಾ ಸ್ನಾತಕೋತ್ತರ, ವೈದ್ಯಕೀಯ, ತಾಂತ್ರಿಕ ಎಂಸಿಎ, ಎಂಬಿಎ, ಎಂಎಸ್‌ಡಬ್ಲ್ಯೂ, ಎಂಎ, ಎಂಕಾಂ, ಎಂಟೆಕ್ ಕೋರ್ಸಿನ ಅಂತಿಮ ಪರೀಕ್ಷೆಯಲ್ಲಿ ಶೇ.80 ಮತ್ತು ಮೇಲ್ಪಟ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.
ಸನ್ಮಾನ:
ಐಪಿಎಸ್, ಐಎಎಸ್, ಕೆಎಎಸ್, ಕೆಇಎಸ್, ಪಿಎಚ್‌ಡಿ, ಸಿಎ ಪದವಿ ಪಡೆದವರಿಗೆ, 2023-24ರ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರಪ್ರಶಸ್ತಿ ಅಥವಾ ರಾಜ್ಯಪ್ರಶಸ್ತಿ ಪಡೆದವರಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಐದು ಮಹನೀಯರು, 2023-24ರಲ್ಲಿ ಜಿಲ್ಲಾಮಟ್ಟಕ್ಕಿಂತ ಮೇಲ್ಪಟ್ಟ ಕ್ರೀಡಾ ಕ್ಷೇತ್ರ, ಕಲಾ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ವಿಜ್ಞಾನ ಕ್ಷೇತ್ರದಲ್ಲಿನ ಪ್ರತಿಭೆ ಹೊಂದಿದ ಸಮಾಜ ಬಾಂಧವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.
ಆ.15 ರೊಳಗೆ ನೀಡಲು ಮನವಿ:
ಬಿಲ್ಲವ ಸಮಾಜ ಬಾಂಧವರಲ್ಲಿನ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ, ಸನ್ಮಾನ, ಗೌರವಾರ್ಪಣೆ, ಅಭಿನಂದನೆ ಕಾರ್ಯಕ್ರಮ ಜರಗಲಿದ್ದು ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವವರು ಅವರ ಆಧಾರ್ ಪ್ರತಿ, ಅಂಕಪಟ್ಟಿಯೊಂದಿಗೆ ಸೂಕ್ತ ದಾಖಲೆಯನ್ನು ನೀಡುವುದು. ಸನ್ಮಾನ, ಅಭಿನಂದನೆ, ಗೌರವಾರ್ಪಣೆಗೆ ಹೆಸರು ನೀಡುವವರು ಅರ್ಹ ಅಭ್ಯರ್ಥಿಯ ಸಾಧನೆಯನ್ನು ವೈವಕ್ತಿಕ ವಿವರ(ಬಯೋಡಾಟ)ಗಳೊಂದಿಗೆ ಸಂಘದಿಂದ ನೀಡುವ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಆ.15ರೊಳಗೆ ಆಯಾ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷರುಗಳ ಮೂಲಕ ತಲುಪಿಸುವುದು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಪುತ್ತೂರು ಬಿಲ್ಲವ ಸಂಘದ ಪ್ರಕಟಣೆ ತಿಳಿಸಿದೆ.