ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನ ಪದ್ಧತಿಯ ಅರಿವು ಮೂಡಿಸಬೇಕು- ದುಗ್ಗಪ್ಪ ನಾಯ್ಕ
ಬಡಗನ್ನೂರುಃ ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನ ಪದ್ಧತಿಯ ಅರಿವು ಮೂಡಿಸಬೇಕು ಎಂದು ಪುತ್ತೂರು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷ ದುಗ್ಗಪ್ಪ ನಾಯ್ಕ ಹೇಳಿದರು. ಅವರು ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಇದರ ಗ್ರಾಮೀಣ ಶಾಖೆ ,ಮರಾಟಿ ಸಮಾಜ ಸೇವಾ ಸಂಘ ಪಡುಮಲೆ ಇದರ ವಾರ್ಷಿಕ ಮಹಾಸಭೆ, ಆಟಿ ಐಸಿರಿ, ವನಮಹೋತ್ಸವ, ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಕಾರ್ಯಕ್ರಮವು ಆ.11 ರಂದು ಗೋಪಿ ಪೇರಾಲು ಇವರ ಮನೆಯಲ್ಲಿ ದಿ. ಗಣಪಯ್ಯ ವೇದಿಕೆಯಲ್ಲಿ ನಡೆಯಿತು .
ಸಂಘಟನೆ ಒಂದು ವಿಚಾರ ವಿನಿಮಯ ಕೇಂದ್ರ, ಸಂಘಟನೆಯಿಂದ ವ್ಯಕ್ತಿಗತವಾಗಿ ನಮಗೆ ಮತ್ತು ಸಮಾಜಕ್ಕೆ ಒಳ್ಳೆಯದಾಗುತ್ತದೆ.6 ಶತಮಾನದಲ್ಲಿ ಶಿಕ್ಷಣ ಇಲ್ಲದೆ ನಿರೀಕ್ಷಿತರಾಗಿ ಜನ ಬೇರೆಯವರ ಅಡಿಯಾಳಾಗಿ ಬದುಕನ್ನು ಕಂಡುಕೊಂಡಿದ್ದರು ಸ್ವಾತಂತ್ರ್ಯ ನಂತರ ಡಾ ಬಿ.ಆರ್ ಅಂಭೆಡ್ಕರ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ನಮ್ಮಂತ ಶೋಷಿತ ವರ್ಗದವರಿಗೆ ಒಂದು ವಿಶೇಷ ಅರ್ಥಿಕ ಸಾಮಾಜಿಕ ಶೈಕ್ಷಣಿಕ ಮೀಸಲಾತಿ ಒದಗಿಸಿಕೊಟ್ಟು ಶೈಕ್ಷಣಿಕ ಲಾಭ ಪಡೆದ ಒಂದಿಷ್ಟು ಜನ ನಮ್ಮ ಉಳಿದವರ ಸ್ಥಿತಿಗೂ ಸಹಾಯ ನೀಡಲು ಮೊಂದಾದ ಸಂಘಟನೆ .ನಾವು ಮಾತ್ರ ಬದುಕುವುದಲ್ಲ ಉಳಿದವರನ್ನು ಬದುಕಿನ ಸ್ಥಿತಿಗಳಿಗೆ ಸಹಾಯ ಹಸ್ತ ನೀಡಲು ಮುಂದಾದ ಸಮುದಾಯ ಸಂಘಟನೆ ರೂಪದಲ್ಲಿ ಕಾಣುತ್ತಿದೆ ಇದರಿಂದ ಸಂಘಟನೆಯಲ್ಲಿ ಹೆಚ್ಚು ತನ್ನನ್ನು ತಾನು ತೊಡಗಿಸಿಕೊಳ್ಳಬೇಕು.ಅಂಕ ಒಂದೇ ಮಾನದಂಡ ಅಲ್ಲ ಮಕ್ಕಳು ಜೀವನ ಪದ್ದತಿ ಅರಿವು ಮೂಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳನ್ನು ಪ್ರೇರಣೆ ನೀಡುವ ಕೆಲಸ ಗ್ರಾಮೀಣ ಸಂಘಗಳು ಮಾಡಬೇಕು ಎಂದು ಹೇಳಿದರು.
ಬೆರಳೆಣಿಕೆಯಿಂದ ಪ್ರಾರಂಭವಾದ ಮಾತೃ ಸಂಘಕ್ಕೆ ಮುಂದೆ 50 ವರ್ಷದ ಸಂಭ್ರಮ ಆಚರಣೆ ಸಂದರ್ಭದಲ್ಲಿ ನಮ್ಮ ಶಕ್ತಿಯನ್ನು ಪ್ರದರ್ಶಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಪಡುಮಲೆ ಗ್ರಾಮೀಣ ಶಾಖೆ ಈಗಾಗಲೇ 9 ವರ್ಷ ತುಂಬಿದ್ದು ಮುಂದೆ ದಶಮಾನ ಸಂಭ್ರಮ ಆಚರಣೆ ಸಂದರ್ಭದಲ್ಲಿ ಸಮಾಜ ಭಾಂದವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ವೇದಿಕೆ . ಸೃಷ್ಟಿಮಾಡಬೇಕು. ಎಂದು ಹೇಳಿ ಶುಭ ಹಾರೈಸಿದರು.
ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ವೈಕೆ ನಾಯ್ಕ ಪಟ್ಟೆ ಪ್ರಾಸ್ತಾವಿಕ ಮಾತನಾಡಿ ಸಮಾಜ ಭಾಂದವರ ಬಲವರ್ಧನೆ ನಿಟ್ಟಿನಲ್ಲಿ ಸಂಘ ರಚಿಸಿ ಸತತ 9 ವರ್ಷಗಳ ಕಾಲ ಸಾಮಾಜಿಕ, ಧಾರ್ಮಿಕ ಶೈಕ್ಷಣಿಕ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದು ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ಅವಶ್ಯಕತೆ ಇದ್ದು ಇದರ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡುವಂತೆ ಹೇಳಿದರು.
ಅತಿಥಿಗಳಾಗಿ ಕಾಸರಗೋಡು ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಬುದ್ದ ನಾಯ್ಕ ಮುಂಡೋಳೆ, ಅಟಿ ವೈಶಿಷ್ಟತೆ ಬಗ್ಗೆ ಮಾತನಾಡಿದರು. ಪುತ್ತೂರು ಕೊಂಬೆಟ್ಟು ಮರಾಟಿ ಯುವ ವೇದಿಕೆ ಅಧ್ಯಕ್ಷ ಗಂಗಾಧರ ನಾಯ್ಕ ಕೌಡಿಚ್ಚಾರು ಸಂದರ್ಭೋಚಿತ ಮಾತನಾಡಿ ಶುಭ ಹಾರೈಸಿದರು.ಮಾತೃ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್ ಎಲ್ಎಎನ್ ಆ .20 ರಂದು ನಡೆಯುವ ಕರಾವಳಿ ಮಾರಾಟಿ ಸಮಾವೇಶ 2024 ರ ಬಗ್ಗೆ ಮಾಹಿತಿ ನೀಡಿ ಸಮಾಜ ಭಾಂದವರು ಭಾಗವಹಿಸುವಂತೆ ಆಹ್ವಾನಿಸಿದರು.
ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅಪ್ಪಯ್ಯ ನಾಯ್ಕ ತಲೆಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಬೆಳವಣಿಗೆ ಒಗ್ಗಟ್ಟಿನಲ್ಲಿ ಮತ್ತು ಹೊಂದಾಣಿಕೆ ಕೆಲಸ ಮಾಡಿದಾಗ ಸಮಾಜ ಅಭಿವೃದ್ಧಿ ಸಾಧ್ಯ ಸಂಘದ ಅಭಿವೃದ್ಧಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಮಾತೃ ಸಂಘದ ಕಾರ್ಯದರ್ಶಿ ಶೀನಪ್ಪ ನಾಯ್ಕ, ಮಾತೃ ಸಂಘದ ಕೋಶಾಧಿಕಾರಿ ಮೋಹನ್, ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಪೇರಾಲು ಕೋಶಾಧಿಕಾರಿ ಶ್ರೀಧರ ನಾಯ್ಕ ನೇರ್ಲಪ್ಪಾಡಿ, ಉಪಸ್ಥಿತರಿದ್ದರು.
ಕೊಯಿಲ ಅಂಗನವಾಡಿ ಕಾರ್ಯಕರ್ತ ಹೇಮಾವತಿ ಪೇರಾಲು, ಬಡಗನ್ನೂರು ಗ್ರಾ.ಪಂ ಮಾಜಿ ಸದಸ್ಯ ಬಾಲಕೃಷ್ಣ ನಾಯ್ಕ ಮೂಂಡೋಳೆ, ಸಂಘದ ಸದಸ್ಯೆ ಜಾನಕಿ ಪಟ್ಟೆ , ಸುಂದರ ನಾಯ್ಕ ತಲೆಂಜಿ, ಕುಸುಮಾವತಿ ತಲೆಂಜಿ ಪುಟ್ಟಣ್ಣ ನಾಯ್ಕ ಪೇರಾಲು, ಚಂದ್ರಶೇಖರ ಕೊಡೆಂಕೀರಿ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಹಾಲಿಂಗ ನಾಯ್ಕ, ಮಾಜಿ ತಾ.ಪಂ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ, ಕರುಣಾಕರ ನಾಯ್ಕ,ಅಲೆಟಿ, ಉಪ್ಪಿನಂಗಡಿ ಗ್ರಾಮ ಸಮಿತಿ ಅಧ್ಯಕ್ಷ ಸೀತಾರಾಮ ನಾಯ್ಕ,, ಮಾತೃ ಸಂಘದ ಕಾರ್ಯಕಾರಿ ಸದಸ್ಯ ಬಾಬು ನಾಯ್ಕ ಮಹಿಳಾ ಸಂಘದ ಅಧ್ಯಕ್ಷೆ ಕಿಶೋರಿ ದುಗ್ಗಪ್ಪ ನಾಯ್ಕ, ಹಾಗೂ ಮಾತೃ ಸಂಘದ ಸದಸ್ಯರು, ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಸದಸ್ಯರು ಯುವ ವೇದಿಕೆ ಸದಸ್ಯರು ಹಾಗೂ ಸಮಾಜ ಭಾಂದವರು ಉಪಸ್ಥಿತರಿದ್ದರು.
ಬಡಗನ್ನೂರು ಸ.ಉ.ಹಿ.ಪ್ರಾ.ಶಾಲಾ ವಿದ್ಯಾರ್ಥಿ ಲಾಸ್ಯ ಪ್ರಾಥಿಸಿದರು.ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಪೇರಾಲು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಜಯಂತಿ ಮೂಂಡೋಳೆ ವರದಿ ವಾದಿಸಿದರು, ಕುಸುಮಾವತಿ ತಲೆಂಜಿ ಬಹುಮಾನ ವಿಜೇತ ಪಟ್ಟಿ ಓದಿದರು. ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ನೀಲಗಿರಿ ವಂದಿಸಿದರು. ಮಾಜಿ. ತಾ.ಪಂ ಅಧ್ಯಕ್ಷೆ ರೇಖಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಯುವ ವೇದಿಕೆ ಸದಸ್ಯ ಗೋಪಾಲ ನಾಯ್ಕ ಹಾಗೂ ಮನೆಯವರಾದ ರಾಮಚಂದ್ರ ನಾಯ್ಕ ಪೇರಾಲು ಸಹಕರಿಸಿದರು.
ಆಟಿ ಐಸಿರಿ ಕಾರ್ಯಕ್ರಮವನ್ನು ಸುಮಾರು 25 ಬಗೆಯ ಖಾದ್ಯವನ್ನು ಸಮಾಜ ಭಾಂದವರು ತಯಾರಿಸಿ ತಂದಿದ್ದು ಸುಮಾರು 300 ಜನರು ಸವಿದರು.
ವನ ಮಹೋನ್ನತ ಆಚರಣೆ:- ಕಾಸರಗೋಡು ನಿವೃತ್ತ ಬಿ.ಎಸ್.ಎನ್.ಎಲ್ .ಉದ್ಯೋಗಿ ಬುದ್ದ ನಾಯ್ಕ ಮುಂಡೋಳೆ, ಹಲಸಿನ ಗಿಡ ನೆಡುವ ಮೂಲಕ ವನಮಹೋತ್ವವ ಆಚರಣೆ ಮಾಡಲಾಯಿತು.
ಸ್ಪರ್ಧಾ ಕೂಟ:- ಸಮಾಜದ ಮಹಿಳೆಯರಿಗೆ, ಪುರುಷರಿಗೆ ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಸನ್ಮಾನ;-ಹಿರಿಯರಾದ ಗೋಪಿ ಪೇರಾಲು, ಕಾಸರಗೋಡು ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಬುದ್ದ ನಾಯ್ಕ ಮುಂಡೋಳೆ,ಹಾಗೂ ಕ್ಯಾಂಪ್ಕೋ ನಿವೃತ್ತ ಉದ್ಯೋಗಿ ದೇವಪ್ಪ ನಾಯ್ಕ ಚಂದುಕೂಡ್ಲು ಇವರನ್ನು ಶಾಲು ಹೊದಿಸಿ ಹೂ , ಫಲಪುಷ್ಪ ನೀಡಿ ಅಭಿನಂದಿಸಲಾಯಿತು.
ಪುಸ್ತಕ ವಿತರಣೆ:-1 ನೇ ತರಗತಿಯಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.
ನೂತನ ವಧುವರರಿಗೆ ಗೌರವಾರ್ಪಣೆ
ಸೂರ್ಯನಾರಾಯಣ ನಂದಿನಿ ಕೊಡೆಂಕಿರಿ ಹಾಗೂ ಹರಿಪ್ರಸಾದ್ ಶ್ಯಾಮಲಾ ಮೂಂಡೋಳೆ ನೂತನ ವಧುವರವನ್ನು ಶಾಲು ಹೊದಿಸಿ ಗೌರವಿಸಲಾಯಿತು.