ತಂಡವಾಗಿ ಕಾರ್ಯ ಆರಂಭಿಸಿದ್ದೇ ಅಭಿವೃದ್ಧಿಗೆ ಅಡಿಪಾಯವಾಯಿತು-ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ಮಹಾಸಭೆಯಲ್ಲಿ ಶೀನ ನಾಯ್ಕ ಹೇಳಿಕೆ

0

ವ್ಯವಹಾರ ₹ 20.45 ಕೋಟಿ ರೂ | ಲಾಭ ₹ 21.09 ಲಕ್ಷ | ಲಾಭಾಂಶ 8% ಘೋಷಣೆ

ಪುತ್ತೂರು : ಸಹಕಾರಿಯ ಅತ್ಯುತ್ತಮ ರೀತಿಯ ಸಾಧನೆಯಿಂದ ನಿಮ್ಮೆಲ್ಲರ ಆಶೀರ್ವಾದ , ಪ್ರಶಂಸೆಗೆ ಆಡಳಿತ ಮಂಡಳಿ ಹಾಗೂ ಸಿಬಂದಿ ವರ್ಗ ಪಾತ್ರವಾಗಿದೆ. ನಮ್ಮ ಸಹಕಾರಿಗೆ ವಿಟ್ಲ ಭಾಗದಿಂದ ಅತ್ಯುತ್ತಮ ಬೆಂಬಲವು ಸಿಕ್ಕಿದೆ ಜೊತೆಗೆ ಮರಾಟಿ ಯುವ ವೇದಿಕೆಯು ಸಂಘದ ಪ್ರಗತಿಗೆ ನೀಡಿರುವ ಸಹಕಾರ ಕೂಡ ಮೆಚ್ಚುವಂಥದ್ದು. ಮುಂದಿನ ದಿನಗಳಲ್ಲಿ ವಿಟ್ಲದಲ್ಲೂ ಚೊಚ್ಚಲ ಶಾಖೆ ತೆರೆಯುವ ಆಲೋಚನೆಯನ್ನು ಖಂಡಿತ ಮಾಡುತ್ತೇವೆ ಎಂದು ಇಲ್ಲಿನ ತಾ.ಪಂ. ವಾಣಿಜ್ಯ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ ಸಂಘ ನಿ ಇದರ ಅಧ್ಯಕ್ಷ ಕೆ.ಶೀನ ನಾಯ್ಕ ಹೇಳಿದರು.


ಆ.11 ರಂದು ಕೊಂಬೆಟ್ಟು ಮರಾಟಿ ಸಮಾಜದ ಸಭಾಂಗಣದಲ್ಲಿ ನಡೆದ ಐದನೆಯ ಸಹಕಾರಿಯ ಮಹಾಸಭೆಯಲ್ಲಿ ಮಾತನಾಡಿದ ಅವರು , ಪ್ರಸಕ್ತ ಸಾಲಿನಲ್ಲಿ ಸಹಕಾರಿಯು ರೂ.20.45
ಕೋಟಿ ರೂ ವ್ಯವಹಾರ ನಡೆಸಿದ್ದು , ರೂ.21.09 ಲಕ್ಷ ಲಾಭ ಗಳಿಸಿದೆ. ಮೊದಲ ಬಾರಿಗೆ ಎಲ್ಲಾ ಸದಸ್ಯರಿಗೆ ಶೇಕಡಾ 8 ರಷ್ಟು ಲಾಭಾಂಶವನ್ನು ಕೂಡ ನೀಡುತ್ತಿದ್ದೇವೆ ಎಂದು ತಿಳಿಸಿದರು.


ಒಟ್ಟು ಸದಸ್ಯರ ಸಂಖ್ಯೆ 2106 ಇದ್ದು , ರೂ.42.51 ಲಕ್ಷ ಶೇರು ಬಂಡವಾಳ ಹೊಂದಿದೆ. ರೂ.3.14 ಕೋಟಿ ಸಾಲ ನೀಡಲಾಗಿದ್ದು , ನೂರರಷ್ಟು ವಸೂಲಾತಿ ನಡೆದು , ರೂ 4.83 ಕೋಟಿ ಠೇವಣಿ ಸಂಗ್ರಹಣೆ ಯೂ ಆಗಿದೆಯೆಂದು ಮಾಹಿತಿ ನೀಡಿದ ಅವರು ,18 ರ ಒಳಗಿನ ವಯೋಮಾನದವರಿಗಾಗಿ ವಿನೂತನ ಯೋಜನೆಯೊಂದನ್ನು ಆರಂಭಿಸಿರುವ ನಾವು , 1 ಲಕ್ಷ ರೂಪಾಯಿ ಠೇವಣಿಗೆ ಬರೀ 8 ವರ್ಷದ ಅವಧಿಗೆ 2 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದರು. ಜೊತೆಗೆ ಚಿನ್ನಾಭರಣ ಸಾಲ 9.5 % ಬಡ್ಡಿ ದರದಲ್ಲಿ ಲಭ್ಯವಿದೆ ,
ಸಂಘದ ಅಭಿವೃದ್ಧಿ, ಒಳಿತಿಗಾಗಿ ನಾವೆಲ್ಲರೂ ತಂಡವಾಗಿ ಪ್ರಾಮಾಣಿಕ ರೀತಿಯಲ್ಲಿ ಸೇವೆ ಸಲ್ಲಿಸಿದ್ದೇ ಅಭಿವೃದ್ಧಿಗೆ ಪ್ರಮುಖ ಕಾರಣವಾಯಿತು. ಮುಂದೆ ಇನ್ನೂ ಉತ್ತಮ ಸಾಧನೆ ಮಾಡುವಲ್ಲಿ ಎಲ್ಲರು ಸಹಕಾರ ನೀಡಬೇಕು , ಪ್ರತಿಯೊಬ್ಬರೂ ಕೂಡ ಉಳಿತಾಯ ಖಾತೆ ತೆರೆದು ಸೌಹಾರ್ದದ ಬೆಳವಣಿಗೆಗೆ ಸಹಕರಿಸಬೇಕೆಂದು ಹೇಳಿ ಸದಸ್ಯರ ಮತ್ತು ಸಮಾಜ ಭಾಂದವರ ಬೆಂಬಲ ಯಾಚಿಸಿದರು.


ಉಪಾಧ್ಯಕ್ಷ ಚೋಮ ನಾಯ್ಕ , ನಿರ್ದೇಶಕರಾದ ರಾಮಚಂದ್ರ ನಾಯ್ಕ ಮತ್ತು ಎಂ. ವೆಂಕಪ್ಪ ನಾಯ್ಕ ವಿವಿಧ ವಿಷಯವನ್ನು ಸೂಚಿಸಿದರು. ಈ ವೇಳೆ ಸಹಕಾರಿಯ ಎಲ್ಲಾ ನಿರ್ದೆಶಕರು, ಸದಸ್ಯರು ಮತ್ತು ಸಮಾಜ ಭಾಂದವರು ಹಾಗೂ ಕಾನೂನು ಸಲಹೆಗಾರ ಮಂಜುನಾಥ್ ಎನ್ ಎಸ್ ಹಾಜರಿದ್ದರು.


ಸದಸ್ಯರಾದ ನಿವೃತ್ತ ಡಿ.ಜಿ.ಎಂ ವಾಸು ನಾಯ್ಕ ಗಣೇಶ್ ಭಾಗ್ ಸಂಘದ ಕಾರ್ಯವೈಖರಿ , ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೋರ್ವ ಸದಸ್ಯ ರಮೇಶ್ ಕೋಮಾಲಿ ಮಂಚಿ ಮಾತನಾಡಿ , ಸಂಘದ ಶಾಖೆಯೊಂದನ್ನು ಶೀಘ್ರದಲ್ಲೇ ವಿಟ್ಲ ಪರಿಸರದಲ್ಲಿ ಪ್ರಾರಂಭಿಸುವಂತೆ ಒತ್ತಾಯಿಸಿದರು. ಉಮೇಶ್ ಗಣೇಶ್ ಭಾಗ್ ,ಮಂಜಪ್ಪ ದಂಡೆಗೋಳಿ ಅನಿಸಿಕೆಯೊಂದಿಗೆ ಸೂಕ್ತ ಸಲಹೆಯನ್ನಿತ್ತರು.ಸಹಕಾರಿ ನಿರ್ದೇಶಕಿ ಯಶೋಧ ಎಂ ಪ್ರಾರ್ಥಿಸಿ , ಪೂವಪ್ಪ ನಾಯ್ಕ ಸ್ವಾಗತಿಸಿದರು. ಕಾರ್ಯನಿರ್ವಹಣಾಧಿಕಾರಿ ನಂದಿತ್ ಬಿ. ನಾಯ್ಕ ವರದಿ ಮಂಡಿಸಿದರು. ನಿರ್ದೇಶಕ ಸುಂದರ ನಾಯ್ಕ ವಂದಿಸಿ , ಸಿಬ್ಬಂದಿ ಜಯ ಹಾಗೂ ಪಿಗ್ಮಿ ಎಜೆಂಟ್ ಗಣೇಶ್ ಸಹಕರಿಸಿದರು.ಆ ಬಳಿಕ ಸವಿ ಭೋಜನ ನೆರವೇರಿತು.

ಸನ್ಮಾನ : ಹೈನುಗಾರಿಕೆ ಜೊತೆಗೆ ಮಲ್ಲಿಗೆ ಕೃಷಿಯನ್ನೂ ಮಾಡಿಕೊಂಡು, ಸಾಧನೆಯ ಮೆಟ್ಟಿಲು ಏರಿರುವ ಪುಣಚ ಗ್ರಾಮದ ಮಾಯಿಲ ಮೂಲೆ ನಿವಾಸಿ ಪೂರ್ಣಿಮಾ ಜಗದೀಶ್ ಅವರನ್ನು ಸಹಕಾರಿಯ ಪರವಾಗಿ , ನಿರ್ದೇಶಕಿಯಾರಾದ ಯಶೋಧ ಕೃಷ್ಣ ಮತ್ತು ಹೇಮಾವತಿ ಹೆಚ್ ಸನ್ಮಾನಿಸಿದರು.

ಅ.19 ಮತ್ತು 20 ರಂದು ನಡೆಯಲಿದೆ ಮರಾಟಿ ಭಾಂದವರ ಸಮಾವೇಶ…
ಭೈರವಿ ಶ್ರೀ ಸೌಹಾರ್ದ ಸಹಕಾರಿ ಮೂಡಬಿದ್ರೆ ಇದರ ನಿರ್ದೇಶಕ ಪ್ರಕಾಶ್ ಮಾತನಾಡಿ , ಶ್ರೀ ಮಹಮ್ಮಾಯಿ ಸೌಹಾರ್ದ ಸಹಕಾರಿ 4 ವರ್ಷಗಳಲ್ಲಿ ಇಷ್ಷೂ ದೊಡ್ಡ ಮಟ್ಟದಲ್ಲಿ ಬೆಳೆಯುತ್ತದೆಯೆಂಬ ಸಣ್ಣ ಕಲ್ಪನೆಯೂ ಬಹುಶಃ ಪುತ್ತೂರಿಗರಲ್ಲಿ ಇದ್ದಿರಲಿಕ್ಕಿಲ್ಲ. ಇದಕ್ಕೆ ಕಾರಣ ಸಹಕಾರಿಯಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರ ಪ್ರಾಮಾಣಿಕ ಸೇವೆ. ಹೀಗಾಗಿ ನಾವೆಲ್ಲರೂ ಮೂಕವಿಸ್ಮಯರಾಗಿದ್ದೆವೆ. ಈ ಪರಿಯ ಬೆಳವಣಿಗೆಗೆ ಪೂರ್ಣ ತಂಡಕ್ಕೆ ಅಭಿನಂದನೆ ಸಲ್ಲಿಸುವೆಯೆಂದರು.
ಬಳಿಕ ಅಕ್ಟೋಬರ್ 19&20 ರಂದು ಮೂಡಬಿದ್ರೆ ಆಳ್ವಾಸ್ ಕಾಲೇಜು ಆವರಣದಲ್ಲಿ ನಡೆಯಲಿರುವ ಮರಾಟಿ ಸಮಾಜ ಭಾಂದವರ ಸಮಾವೇಶಕ್ಕೆ ಅಧಿಕ ಸಂಖ್ಯೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ವಿನಂತಿಸಿಕೊಂಡರು.

LEAVE A REPLY

Please enter your comment!
Please enter your name here