ಪುತ್ತೂರು: ಕರ್ನಾಟಕ ಸರಕಾರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ಇದರ ವತಿಯಿಂದ ಪುತ್ತೂರಿನ ಮೌಲಾನ ಆಜಾದ್ ಮಾದರಿ ಶಾಲೆಯ ಶಿಕ್ಷಕಿ ಪೂರ್ಣಿಮಾ ಬಿ ಎಸ್ ರವರನ್ನು ಅತ್ಯುತ್ತಮ ಶಿಕ್ಷಕಿ ಎಂದು ಗುರುತಿಸಿ ಸಚಿವ ಜಮೀರ್ ಅಹಮದ್ ಖಾನ್ ಬೆಂಗಳೂರಿನ ದೇವರಾಜ ಅರಸು ಭವನ ವಸಂತನಗರದಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದಿಸಿದರು.
2023 -24ನೇ ಸಾಲಿನಲ್ಲಿ ಪುತ್ತೂರಿನ ಮೌಲಾನ ಆಜಾದ್ ಮಾದರಿ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡದಲ್ಲಿ ರಾಜ್ಯಕ್ಕೆ ಉತ್ತಮ ಗುಣಾತ್ಮಕ ಶೇ.100% ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದರು. ಶೇ.100 ಫಲಿತಾಂಶ ಲಭಿಸಲು ಕಾರಣಕರ್ತರಾದ ಶಿಕ್ಷಕಿ ಪೂರ್ಣಿಮಾ ಬಿ ಎಸ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.