ಪುತ್ತೂರು: ಸರಕಾರದ ಪಡಿತರ ಅಕ್ಕಿ ಪಡೆಯಲು ಮತ್ತೆ ಸರ್ವರ್ ಭೂತ ಅಡ್ಡ ಬಂದಿದೆ.ಉಚಿತ ರೇಷನ್ ಅಕ್ಕಿ ಪಡೆಯಲು ಜನರು ರೇಷನ್ ಅಂಗಡಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲಸ ಬಿಟ್ಟು ಅಕ್ಕಿ ಪಡೆಯಲು ರೇಷನ್ ಅಂಗಡಿಗೆ ಹೋದರೆ ಅಲ್ಲಿ ಸರ್ವರ್ ಸಮಸ್ಯೆ, ನೆಟ್ವರ್ಕ್ ಸಮಸ್ಯೆ ಕಂಡು ಬಂದಿದ್ದು ಐದು, ಹತ್ತು ಅಕ್ಕಿ ಪಡೆಯಲು ಜನರು ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶದ ರೇಷನ್ ಅಂಗಡಿಗಳಲ್ಲಿ ಕಳೆದ ಎರಡು ದಿನಗಳಿಂದ ಸರ್ವರ್ ಸಮಸ್ಯೆ ಕಂಡು ಬಂದಿದ್ದು ಜನರು ತೊಂದರೆಗೆ ಸಿಲುಕಿದ್ದಾರೆ.
ಆ.21 ರ ತನಕ ಸರ್ವರ್ ಸ್ಲೋ ಇರಲಿದೆ ಎಂಬ ಮೇಸೆಜ್ ಬಂದಿತ್ತಾದರೂ ಆಗಾಗ ಕೈ ಕೊಡುವ ಸರ್ವರ್‌ನಿಂದ ಜನರು ಕೆಲಸ ಬಿಟ್ಟು ರೇಷನ್ ಅಂಗಡಿಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗಂಟೆಗೊಮ್ಮೆ ಸರ್ವರ್ ಕೈಕೊಡುತ್ತಿರುವುದರಿಂದ ರೇಷನ್ ವಿತರಿಸಲು ಸಮಸ್ಯೆಯಾಗುತ್ತಿದ್ದು ಬಡವರು ಉಚಿತ ಅಕ್ಕಿಗಾಗಿ ಒಂದು ದಿನದ ಕೆಲಸ ಬಿಟ್ಟು ರೇಷನ್ ಅಂಗಡಿ ಮುಂದೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಯಾರು ಹೊಣೆ? ಸರ್ವರ್ ಡೌನ್ ಬಗ್ಗೆ ಮಾಹಿತಿ ಕೇಳಿದರೆ ಇದು ಸ್ಟೇಟ್ ಲೆವೆಲ್ ಇಶ್ಯೂ ಎಂಬ ಮಾಹಿತಿ ಸಿಗುತ್ತಿದೆ.