ಪುತ್ತೂರು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷರಾಗಿ ನ್ಯಾಯವಾದಿ ಪಿಕೆ ಸತೀಶನ್ ,ಪ್ರದಾನ ಕಾರ್ಯದರ್ಶಿಯಾಗಿ ಬಿ.ಎಂ.ಭಟ್, ಖಜಾಂಜಿಯಾಗಿ ಈಶ್ವರಿ ಶಂಕರ್ ಮುಂಡೂರು ಆಯ್ಕೆ

0

ಪುತ್ತೂರು: ಪುತ್ತೂರು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷರಾಗಿ ನ್ಯಾಯವಾದಿ ಪಿ.ಕೆ.ಸತೀಶನ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ. ಭಟ್ ಹಾಗು ಖಜಾಂಚಿಯಾಗಿ ಈಶ್ವರಿ ಶಂಕರ್ ಮುಂಡೂರು ಆಯ್ಕೆಗೊಂಡಿದ್ದಾರೆ.


ಮಾಜಿ ಸೈನಿಕ ಭವನದಲ್ಲಿ ಇತ್ತೀಚೆಗೆ ನಡೆದ ಪುತ್ತೂರು ತಾಲೂಕು ಬೀಡಿ ಕಾರ್ಮಿಕ ಸಂಘದ 10ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ವಾರ್ಷಿಕ ಮಹಾಸಭೆಯನ್ನು ಹಿರಿಯ ನ್ಯಾಯವಾದಿ ಸಿಐಟಿಯು ಮುಖಂಡ ಪಿ.ಕೆ.ಸತೀಶನ್ ಅವರು ಉದ್ಘಾಟಿಸಿ ಮಾತನಾಡಿ ಬೀಡಿ ಕಾರ್ಮಿಕರ ಕಾನೂನು ಬದ್ದ ವೇತನ ಸವಲತ್ತುಗಳ ನಿರಾಕರಣೆ ಕಾರ್ಮಿಕ ಇಲಾಖೆಯ ಮತ್ತು ಸರಕಾರದ ವೈಫಲ್ಯಕ್ಕೆ ಸ್ಪಷ್ಟವಾದ ಸಾಕ್ಷಿ ಆಗಿದೆ 1000 ಬೀಡಿಗೆ ರೂ 315.04 ನೀಡಬೇಕಾದಲ್ಲಿ ಬೀಡಿ ಮಾಲಕರು ಕೇವಲ ರೂ 263.80 ನೀಡಿ ಪ್ರತಿ 1000 ಬೀಡಿಯಲ್ಲಿ ತಲಾ ರೂ 51.24 ರಂತೆ ಲೂಟಿ ಹೊಡೆಯುತ್ತಿದ್ದಾರೆ. ಇಂತಹ ಕಾನೂನು ಬಾಹಿರ ಕೆಲಸಗಳನ್ನು ತಡೆಯಲಾಗದ ಕಾರ್ಮಿಕ ಇಲಾಖೆ ಇರುವುದಾದರೂ ಯಾಕೆ ಎಂದು ಪ್ರಶ್ನಿಸಿದ ಅವರು ಈ ವರ್ಷ ಪ್ರತಿ 1000 ಬೀಡಿಗೆ ತಲಾ ರೂ 41.46 ರಂತೆ ಅಂದರೆ 1 ಲಕ್ಷ ಬೀಡಿ ತಯಾರಿಸಿದವರಿಗೆ ರೂ 4,146 ರಂತೆ ಬೋನಸ್ ಬಿಡುಗಡೆಯಾಗಿದ್ದು ಅದನ್ನು ಸಮರ್ಪಕವಾಗಿ ಕಾರ್ಮಿಕರಿಗೆ ತಲುಪಿಸಲು ಕಾರ್ಮಿಕ ಇಲಾಖೆ ಮುಂದಾಗಬೇಕಿದೆ ಎಂದರು. ಇಲ್ಲವಾದಲ್ಲಿ ಇಂತಹ ಅನ್ಯಾಯದ ವಿರುದ್ದ ಹೋರಾಟ ನಡೆಸಲು ಸಿಐಟಿಯು ಬದ್ದವಾಗಿದೆ ಎಂದ ಅವರು ಬೋನಸ್ ಕಡಿಮೆ ನೀಡಿದರೆ 9448155980, 8792591538 ನಂಬ್ರಕ್ಕೆ ಕರೆ ಮಾಡುವಂತೆ ವಿನಂತಿಸಿದರು.


ನ್ಯಾಯವಾದಿ ಬಿ.ಎಂ.ಭಟ್ ಅವರು ಬೀಡಿ ಕಾರ್ಮಿಕರು ತಮ್ಮ ತಮ್ಮ ಪ್ರದೇಶದಲ್ಲಿ ಸಭೆ ಸೇರಿ ಮಾಹಿತಿ ಕಾರ್ಯಕ್ರಮ ಏರ್ಪಡಿಸಿದಾಗಲೇ ಕಾನೂನು ಬದ್ದ ಸವಲತ್ತುಗಳು ವಂಚನೆ ಆಗುವುದನ್ನು ತಡೆಯಲು ಸಾದ್ಯ ಎಂದರು. ಸಭೆಯ ಅದ್ಯಕ್ಷತೆಯನ್ನು ಗುಡ್ಡಪ್ಪ ಗೌಡ ವಹಿಸಿದ್ದರು. ಈಶ್ವರಿ ಸ್ವಾಗತಿಸಿ, ವಂದಿಸಿದರು.


ನೂತನ ಪದಾಧಿಕಾರಿಗಳ ಆಯ್ಕೆ
ಮಹಾ ಸಭೆಯಲ್ಲಿ ಪುತ್ತೂರು ಬೀಡಿ ಕಾರ್ಮಿಕ ಸಂಘದ ನೂತನ ಸಮಿತಿ ಆಯ್ಕೆ ಮಾಡಲಾಯಿತು. ನೂತನ ಅದ್ಯಕ್ಷರಾಗಿ ಪಿಕೆ.ಸತೀಶನ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ.ಭಟ್, ಖಜಾಂಜಿಯಾಗಿ ಈಶ್ವರಿ ಮುಂಡೂರು, ಉಪಾದ್ಯಕ್ಷರಾಗಿ ಗುಡ್ಡಪ್ಪ ಗೌಡ ಮತ್ತು ಚಿತ್ರಕಲಾ ದೋಳ್ಪಾಡಿ, ಸಹಕಾರ್ಯದರ್ಶಿಯಾಗಿ ಪವಿತ್ರ ಗೆಜ್ಜೆಗಿರಿ ಮತ್ತು ಜಾನಕಿ ಕೊಪ್ಪ ಹಾಗೂ ಸದಸ್ಯರಾಗಿ ಕಸ್ತೂರಿ ರೈ ಕೋಳ್ತಿಗೆ, ಜಯಂತಿ ಪಾಲ್ತಡಿ, ವಾರಿಜ ದೋಳ್ಪಾಡಿ, ಸುಂದರಿ ಇರ್ದೆ, ಉಷಾ ಮುಂಡೂರು, ಯಶೋದ ಮೂರಾಜೆ, ಬೇಬಿ, ಸವಿತ ಮೊದಲಾದವರು ಆಯ್ಕೆ ಆದರು.

LEAVE A REPLY

Please enter your comment!
Please enter your name here