





ಪುತ್ತೂರು: ಇಂಡಿಯನ್ ಯೂಥ್ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಪ್ರದಾನ ಕಾರ್ಯದರ್ಶಿ ಹುದ್ದೆಗೆ ಪುತ್ತೂರು ತಾಲೂಕು ಎನ್.ಎಸ್.ಯು.ಐ ಮಾಜಿ ಅಧ್ಯಕ್ಷ ಬಾತಿಶಾ ಆತೂರು ನಾಮಪತ್ರ ಸಲ್ಲಿಸಿದ್ದು ಅಂತಿಮ ಕಣದಲ್ಲಿದ್ದಾರೆ.


ಜಿಲ್ಲೆಯಿಂದ 16 ಮಂದಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು ಪುತ್ತೂರು ಕಡಬ ತಾಲೂಕಿನಿಂದ ಏಕೈಕ ಅಭ್ಯರ್ಥಿಯಾಗಿ ಬಾತಿಶಾ ಆತೂರು ಸ್ಪರ್ಧಿಸುತ್ತಿದ್ದಾರೆ. ಆ.16ರಿಂದ ಸೆ.16ರ ವರೆಗೆ ವಿವಿಧ ಹಂತಗಳಲ್ಲಿ ಚುನಾವಣೆ ನಡೆಯಲಿದೆ.





ಸುಮಾರು 9 ವರ್ಷಗಳ ಕಾಲ ಎನ್.ಎಸ್.ಯು.ಐ ಯಲ್ಲಿ ಸೇವೆ ಸಲ್ಲಿಸಿರುವ ಬಾತಿಶಾ ಆತೂರು ಅವರು ಎನ್.ಎಸ್.ಯು.ಐ ಕಾಲೇಜು ಘಟಕದ ಅಧ್ಯಕ್ಷರಾಗಿ, ತಾಲೂಕು ಅಧ್ಯಕ್ಷರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಕಡಬ ತಾಲೂಕು ಯುವ ಕಾಂಗ್ರೆಸ್ ಉಪಾದ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಬಡವರ ಪರವಾಗಿಯೂ ಕಾಳಜಿ ವಹಿಸಿ ಅನೇಕ ನೆರವಿನ ಕಾರ್ಯವನ್ನು ಮಾಡಿದ್ದಾರೆ.










