ಆ.15 : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸವಣೂರು ಗ್ರಾ.ಪಂ.ನಿಂದ ಅಭಿನಂದನಾ ಕಾರ್ಯಕ್ರಮ

0

ಸವಣೂರು : ಸವಣೂರು ಗ್ರಾ.ಪಂ.ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಭಿನಂದನಾ ಕಾರ್ಯಕ್ರಮ ಆ.15ರಂದು ಸವಣೂರು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ನಡೆಯಲಿದೆ.

ಸವಣೂರು ಗ್ರಾ.ಪಂ.ನಲ್ಲಿ 13 ವರ್ಷ ಲೆಕ್ಕಸಹಾಯಕರಾಗಿದ್ದು ಗ್ರೇಡ್ 1 ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿದ ಮನ್ಮಥ ಎ. ಅವರಿಗೆ,2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಸವಣೂರು ಪ್ರೌಢಶಾಲೆ,ಮಂಜುನಾಥನಗರ ಪ್ರೌಢಶಾಲೆಯ ಶಿಕ್ಷಕ ವೃಂದಕ್ಕೆ ,ಅವಿರತ ಸಾಹಸಿಕ ಸೇವೆಗೈಯುತ್ತಿರುವ ಸವಣೂರು, ಕುಂಬ್ರ ಮೆಸ್ಕಾಂ ಜೆಇ ಹಾಗೂ ಸಿಬಂದಿಗಳಿಗೆ, ನಿವೃತ್ತ ಅಂಗನವಾಡಿ ಶಿಕ್ಷಕರಾದ ಸುಮಂಗಲಾ ಮಂಜುನಾಥನಗರ, ಲಕ್ಷ್ಮೀ ಬೇರಿಕೆ ಪಾಲ್ತಾಡಿ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಗ್ರಾ.ಪಂ.ನ ಗ್ರಂಥಪಾಲಕಿ ಶಾರದಾ ಮಾಲೆತ್ತಾರು ಅವರಿಗೆ ಅಭಿನಂದನೆ ನಡೆಯಲಿದೆ ಎಂದು ಗ್ರಾ.ಪಂ.ಪ್ರಕಟಣೆ ತಿಳಿಸಿದೆ

LEAVE A REPLY

Please enter your comment!
Please enter your name here