ಸವಣೂರು ಗ್ರಾಮ ಪಂಚಾಯತಿ ಸಾಮಾನ್ಯ ಸಭೆ

0

ಪೂರ್ವತಯಾರಿಲ್ಲದಿರುವುದೇ ಶಿಕ್ಷಣ ಇಲಾಖೆಯಲ್ಲಿ ಸಮಸ್ಯೆಗೆ ಮೂಲ
ಮೊಗರು ಶಾಲೆಯಲ್ಲಿನ ಅಕ್ಷರ ದಾಸೋಹ ಸಿಬ್ಬಂದಿ ಬಿಡುಗಡೆಗೆ ಇಲಾಖೆ ಸೂಚನೆ : ಸದಸ್ಯರ ಆಕ್ಷೇಪ

ಸವಣೂರು : ಪೂರ್ವತಯಾರಿಲ್ಲದಿರುವುದೇ ಶಿಕ್ಷಣ ಇಲಾಖೆಯಲ್ಲಿ ಸಮಸ್ಯೆಗೆ ಮೂಲ,ಈ ಕುರಿತು ಶಿಕ್ಷಣ ಇಲಾಖೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸವಣೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.ಸಾಮಾನ್ಯ ಸಭೆಯು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.ಅಧ್ಯಕ್ಷತೆಯಲ್ಲಿ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರು, ಸವಣೂರಿನ ಮೊಗರು ಶಾಲೆಗೆ ಜೂನ್ ತಿಂಗಳಲ್ಲಿ ಅಕ್ಷರ ದಾಸೋಹ ಸಿಬ್ಬಂದಿ ನೇಮಕಕ್ಕೆ ಇಲಾಖೆ ಸೂಚನೆ ನೀಡಿತ್ತು.ಅದರಂತೆ ನೇಮಕ ಮಾಡಲಾಗಿತ್ತು ‌ಇದೀಗ ಅವರನ್ನು ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ.ಬೇರೆ ಕಡೆ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಅಲ್ಲಿ ಕೆಲಸ ಬಿಟ್ಟು ಶಾಲೆಗೆ ಸೇರ್ಪಡೆಯಾದರು. ಇದೀಗ ಅವರಿಗೂ ಈ ಸೂಚನೆಯಿಂದ ಸಮಸ್ಯೆಯಾಗಿದೆ ಎಂದು ಸದಸ್ಯ ರಫೀಕ್ ಎಂ.ಎ.ಹೇಳಿದರು.

ಶಾಲೆಗಳಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳನ್ನು ಶಾಲಾರಂಭಕ್ಕೂ ಮುನ್ನ ಮಾಡಬೇಕು.ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಶಾಲೆಯಲ್ಲಿ ಮೊಗರು ಶಾಲೆಯಿಂದ ನಿಯೋಜನೆಗೊಂಡ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರು.ಇದೀಗ ಅವರಿಗೆ ವರ್ಗವಾಗಿದೆ.ಈಗ ಎರಡೂ ಕಡೆ ಶಿಕ್ಷಕರ ಸಮಸ್ಯೆಯಾಗಿದೆ ಎಂದು ಸದಸ್ಯ ಗಿರಿಶಂಕರ ಸುಲಾಯ ಹೇಳಿದರು.

ಸಭೆಯಲ್ಲಿ ಇತರ ವಿಚಾರಗಳು ಚರ್ಚೆಗೆ ಬಂದವು.ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ, ಪಿಡಿಓ ಸಂದೇಶ್,ಗ್ರಾ.ಪಂ.ಸದಸ್ಯರಾದ ಗ್ರಾ.ಪಂ.ಸದಸ್ಯರಾದ ಗಿರಿಶಂಕರ ಸುಲಾಯ, ಅಬ್ದುಲ್ ರಝಾಕ್,ಚೆನ್ನು ಮುಂಡತಡ್ಕ, ಸತೀಶ್ ಅಂಗಡಿಮೂಲೆ,ರಾಜೀವಿ ಶೆಟ್ಟಿ, ರಫೀಕ್ ಎಂ.ಎ. ,ಬಾಬು ಎನ್.,ಶೀನಪ್ಪ ಶೆಟ್ಟಿ ನೆಕ್ರಾಜೆ,ಭರತ್ ರೈ ,ಹರೀಶ್ ಕಾಯರಗುರಿ, ತೀರ್ಥರಾಮ ಕೆಡೆಂಜಿ,ತಾರಾನಾಥ ಬೊಳಿಯಾಲ,ಯಶೋಧಾ,ಚಂದ್ರಾವತಿ ಸುಣ್ಣಾಜೆ,ವಿನೋದಾ ರೈ ,ಹರಿಕಲಾ ರೈ ,ಚೇತನಾ ಶಿವಾನಂದ, ಶಬೀನಾ ,ಇಂದಿರಾ ಬೇರಿಕೆ ಮೊದಲಾದವರಿದ್ದರು.

ಸಿಬ್ಬಂದಿ ಪ್ರಮೋದ್ ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here