ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯಿರುವ ಐತಿಹಾಸಿಕ ಗಾಂಧೀಕಟ್ಟೆಯಲ್ಲಿ ದೇಶದ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಶಾಸಕ ಅಶೋಕ್ ಕುಮಾರ್ ರೈ ಧ್ವಜಾರೋಹಣ ನೆರವೇರಿಸಿ, ನಶೆ ಮುಕ್ತ ಭಾರತ ಸಂದೇಶ ನೀಡಿದರು. ನಂತರ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ತಹಶಿಲ್ದಾರ್ ಪುರಂದರ, ಪೌರಾಯುಕ್ತ ಮಧು ಎಸ್ ಮನೋಹರ್, ಡಿವೈಎಸ್ಪಿ ಅರುಣ್ ನಾಗೇ ಗೌಡ, ನಗರ ಠಾಣಾ ನಿರೀಕ್ಷಕ ಸತೀಶ್, ಸಂಚಾರಿ ಠಾಣಾ ಎಸ್.ಐ ಉದಯ ರವಿ ಗಾಂಧೀ ಪ್ರತಿಮೆಗೆ ಹಾರಾರ್ಪಣೆ ಮಾಡಿದರು. ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರರವರ ಪತ್ನಿ ಶಿಖಾ, ಗಾಂಧೀಕಟ್ಟೆ ಸಮಿತಿಯ ನಾರಾಯಣ ರೈ ಕುಕ್ಕುವಳ್ಳಿ, ಶಿವರಾಮ ಆಳ್ವ, ಸಯ್ಯದ್ ಕಮಲ್, ಸಯ್ಯದ್ ಕಮಲ್, ಗಿರಿಧರ ಸಂಪ್ಯ, ಸಾಹಿರಾ ಬಾನು, ದಾಮೋದರ ಭಂಡಾರ್ ಕರ್, ಕಾರ್ತಿಕ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಗಾಂಧೀಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ, ಪುರಸಭಾ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ವಂದಿಸಿದರು.