ಪುತ್ತೂರಿನಲ್ಲಿ ಬೃಹತ್ ಪಂಜಿನ ಮೆರವಣಿಗೆ, ಭಾರತ ಮಾತಾ ಪೂಜನಾ ಕಾರ್ಯಕ್ರಮ

0

ಬೊಳುವಾರಿನಲ್ಲಿ ಆರ್ ಎಸ್ ಎಸ್ ಹಿರಿಯ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆಗೆ ಚಾಲನೆ

ಸೂರ್ಯ ಚಂದ್ರ ಇರುವ ತನಕ ಹಿಂದೂ ಸಮಾಜ ಶಾಶ್ವತ – ಡಾ| ರವೀಶ ಪಡುಮಲೆ
ಅಖಂಡ ಭಾರತ ಅಜೆಂಡ ಅಲ್ಲ ಸಹಜತೆ – ಮಹೇಶ್ ಕಜೆ

ಪುತ್ತೂರು: ಭಾರತ ಇದ್ದರೆ ಜಗತ್ತು, ಭಾರತ ಇಲ್ಲದಿದ್ದರೆ ಜಗತ್ತು ಉಳಿಯುವುದಿಲ್ಲ. ಹಾಗಾಗಿ ಸೂರ್ಯಚಂದ್ರ ಇರುವ ತನಕ ಹಿಂದೂ ಸಮಾಜ ಶಾಶ್ವತವಾಗಿ ಇರುತ್ತದೆ. ಹಿಂದೂ ಸಮಾಜವನ್ನು ಯಾರಿಂದಲೂ ನಶಿಸಲು ಸಾಧ್ಯವಿಲ್ಲ ಎಂದು ದೈವ ನರ್ತಕರು ಮತ್ತು ಸಿವಿಲ್ ಇಂಜಿನಿಯರ್ ಆಗಿರುವ ಡಾ| ರವೀಶ್ ಪಡುಮಲೆ ಅವರು ಹೇಳಿದರು.


ವಿಶ್ವಹಿಂದು ಪರಿಷದ್, ಬಜರಂಗದಳ, ಹಿಂದು ಜಾಗರಣಾ ವೇದಿಕೆ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಅಖಂಡ ಭಾರತದ ಸಂಕಲ್ಪವನ್ನು ಮುಂದಿಟ್ಟುಕೊಂಡು ಆ.14ರ ರಾತ್ರಿ ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಿಂದ ಹೊರಟ ಬೃಹತ್ ಪಂಜಿನ ಮೆರವಣಿಗೆ ಬಳಿಕ ಕಿಲ್ಲೆ ಮೈದಾನದಲ್ಲಿ ನಡೆದ ಭಾರತ ಮಾತಾ ಪೂಜನಾ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಭಾರತದ ಸಂಕಲ್ಪ ಮಾಡಬೇಕಾದರೆ ಒಂದು ಕಾಲದಲ್ಲಿ ಖಂಡ ಖಂಡ ಆಗಿತ್ತು ಎಂಬದು ಸತ್ಯ. ಯಾಕೆಂದರೆ ಹಿಂದೆ ಭಾರತ ಅಖಂಡವಾಗಿತ್ತು. ಭಾರತ ದೇಶದ ಮೇಲೆ ದಾಳಿ ಆದಾಗ ನಮ್ಮ ಧರ್ಮ, ಸಮಾಜವನ್ನು ಉಳಿಸಲು ನಮ್ಮ ಹಿರಿಯರು ಶ್ರಮ ಪಟ್ಟಿದ್ದಾರೆ. ಬ್ರಿಟೀಷರು, ಪ್ರೆಂಚರು, ಪೋರ್ಚುಗೀಸರು ದಾಳಿ ನಡೆಸಿದರೂ ಭಾರತವನ್ನು ಎನು ಮಾಡಲು ಅವರಿಂದ ಆಗಲಿಲ್ಲ. ಅ ಬಳಿಕ ಬಂದ ಸುಲ್ತಾನ್, ನವಾಬರ ದಾಳಿ ಆಯಿತು. ಅವರಿಂದ ಧರ್ಮಪ್ರಚಾರವೂ ನಡೆದರೂ ಆದರೂ ಹಿಂದೂ ಸಮಾಜವನ್ನು ಯಾರಿಂದಲೂ ಮುಗಿಸಲು ಆಗಿಲ್ಲ. ಇವತ್ತು 18ನೇ ಶತಮಾನದಲ್ಲಿ ಎದ್ದು ನಿಂತಿದ್ದೇವೆ. ತುಂಡಾದ ಭಾರತ ಒಂದಾಗುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಆದರೆ ಒಂದಾಗಬೇಕೆಂದು ನಮ್ಮ ಆಶಯ. ಈ ನಿಟ್ಟಿನಲ್ಲಿ ಹಿಂದೂ ಸಮಾಜದಲ್ಲಿ ಜಾತಿಯನ್ನು ಬಿಟ್ಟು ಒಂದೇ ಹಿಂದೂ ಜಾತಿಯ ಮೂಲಕ ಕಿಡಿ ವಿಶ್ವದಲ್ಲಿರುವ ಹಿಂದೂಗಳನ್ನು ಒಟ್ಟು ಮಾಡಬೇಕೆಂದರು.


ಅಖಂಡ ಭಾರತ ಅಜೆಂಡ ಅಲ್ಲ ಸಹಜತೆ:
ನ್ಯಾಯವಾದಿ ಮಹೇಶ್ ಕಜೆ ಅಧ್ಯಕ್ಷತೆ ವಹಿಸಿ ಮಾತನಾಡಿ ಅಖಂಡ ಭಾರತ ಒಂದು ಅಜೆಂಡ ಎಂಬ ಭಾವನೆಯಲ್ಲಿ ನೋಡುವವರಿದ್ದಾರೆ. ಆದರೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಮಾರ್ಕೇಂಡೆಯ ಅವರನ್ನು ಪಾಕಿಸ್ತಾನದ ಪತ್ರಕರ್ತ ಸಂದರ್ಶನ ಮಾಡಿದಾಗ ಭಾರತ ಎಲ್ಲಾ ಸಮಸ್ಯೆಗಳಿಗೆ ಭಾರತ ಪುನರ್ ಏಕೀಕರಣ ಆಗಬೇಕೆಂದು. ಅಖಂಡ ಭಾರತ ಯಾವಾಗ ಆಗುತ್ತದೆಯೋ ಆಗ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ನ್ಯಾಯಾಧೀಶರೇ ಹೇಳಿರುವುದನ್ನು ಪಾಕಿಸ್ತಾನದ ಪತ್ರಿಕೆಯೇ ವರದಿ ಮಾಡಿದೆ. ಹಾಗಿರುವಾಗ ಅಖಂಡ ಭಾರತ ಒಂದು ಅಜೇಂಡಾ ಎಂದು ಪ್ರಶ್ನಿಸುವರನ್ನು ನಾವು ಪ್ರಶ್ನಿಸಬೇಕಾಗಿದೆ. ಇದು ಅಜೆಂಡ ಅಲ್ಲ ಸಹಜತೆ ಎಂದು ತಕ್ಕ ಉತ್ತರ ನೀಡಬೇಕಾಗಿದೆ. ಭಾರತ ದೇಶವನ್ನು ಭಾರತ ಮಾತೆಯ ಸ್ಥಾನದಲ್ಲಿ ಮಣ್ಣಿನಲ್ಲಿ ಗೌರವಿಸುತ್ತೇವೆ. ಭಾರತ ಪರಿಪೂರ್ಣತೆ ಆಗಬೇಕಾದರೆ ಪುನರ್ ಏಕೀಕರಣ ಆಗಲೇಬೇಕೆಂದರು. ನಾವೆಲ್ಲ ಸಂಕುಚಿತ ಭಾವನೆ ಬಿಟ್ಟು ಹಾಕಿ ವಿಸ್ತಾರವಾದ ಭಾವನೆ ಬೆಳೆಸಬೇಕು. ನಾವೆಲ್ಲ ಭಾರತಿಯರೆಂಬುದು ಜಾಗೃತಿಯಾಗಲಿ ಎಂದರು.


ಮಾಜಿ ಸೈನಿಕರಿಗೆ ಗೌರವ:
ಮಾಜಿ ಸೈನಿಕರಾದ ನೀಲಪ್ಪ ಗೌಡ ಸಿಂಗಾಣಿ ಮತ್ತು ವಸಂತ ಗೌಡ ದೇವಸ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಅರಂಭದಲ್ಲಿ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು. ಬಳಿಕ ವೇದಿಕೆಯ ಮುಂಭಾಗ ಭಾರತ್ ಮಾತಾ ಭಾವ ಚಿತ್ರದ ಎದುರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮ ಆರಂಭಗೊಂಡಿತು. ವಿಶ್ವಹಿಂದು ಪರಿಷತ್ ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ, ಪ್ರಜ್ವಲ್ ಸಂಪ್ಯ, ದಿನೇಶ್ ಪಂಜಿಗ, ಜಗದೀಶ್ ಬನ್ನೂರು, ಸುಧೀರ್ ತಿಂಗಳಾಡಿ, ದಿನೇಶ್ ತಿಂಗಳಾಡಿ ಅತಿಥಿಗಳನ್ನು ಗೌರವಿಸಿದರು. ಬಜರಂಗದಳದ ನಗರ ಸಂಯೋಜಕ ಜಯಂತ್ ಕುಂಜೂರುಪಂಜ ಸ್ವಾಗತಿಸಿ, ವಿಶ್ವಹಿಂದು ಪರಿಷತ್ ನ ರವಿ ಕೈಂತಡ್ಕ ವಂದಿಸಿದರು. ವಿಶಾಖ್ ರೈ ಕಾರ್ಯಕ್ರಮ ನಿರೂಪಿಸಿದರು. ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ ದಿನೇಶ್ ಪಂಜಿಗ ಅಖಂಡ ಭಾರತ ಸಂಕಲ್ಪದ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಡಾ ಶೋಭಿತಾ ಸತೀಶ್ ವಂದೆ ಮಾತರಂ ಹಾಡಿದರು.


ಬೊಳುವಾರಿನಲ್ಲಿ ಪಂಜಿನ ಮೆರವಣಿಗೆಗೆ ಚಾಲನೆ:
ಬೊಳುವಾರಿನಿಂದ ಆರಂಭಗೊಂಡ ಪಂಜಿನ ಮೆರವಣಿಗೆಯನ್ನು ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ವಾಸುದೇವ ಸಾಲಿಯಾನ್ ಅವರು ಸಂಘಟಕರಿಗೆ ದೊಂದಿ ಹಸ್ತಾಂತರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಮುಖ್ಯರಸ್ತೆಯಾಗಿ ಸಾಗಿ ಬಂದ ಮೆರವಣಿಗೆ ಪುತ್ತೂರು ಕಿಲ್ಲೆ ಮೈದಾನದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಸಮಾವೇಶಗೊಂಡಿತು.


ವಿಶ್ವಹಿಂದು ಪರಿಷತ್ ನ ಸೇವಪ್ರಮುಖ್ ಹರೀಶ್ ದೊಳ್ಪಾಡಿ, ನಗರ ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ, ಬಜರಂಗದಳದ ನಗರ ಸಂಯೋಜಕ ಜಯಂತ್ ಕುಂಜೂರುಪಂಜ, ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ದಿನೇಶ್ ಪಂಜಿಗ, ನ್ಯಾಯವಾದಿ ಮಾದವ ಪೂಜಾರಿ, ಜಗದೀಶ್ ನೀರ್ಪಾಜೆ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ ಜೀವಂಧರ್ ಜೈನ್, ಮಾಜಿ ಪುರಸಭೆ ಅಧ್ಯಕ್ಷರಾದ ರಾಜೇಶ್ ಬನ್ನೂರು, ಯು ಲೋಕೇಶ್ ಹೆಗ್ಡೆ, ನಗರಸಭಾ ಸದಸ್ಯರಾದ ಸುಂದರ ಪೂಜಾರಿ ಬಡಾವು, ಪುತ್ತೂರು ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ನೂತನ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ನೂತನ ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು, ಪುಡಾ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಭಾಮಿ ಜಗದೀಶ್ ಶೆಣೈ, ಬನ್ನೂರು ಶಿವಪಾರ್ವತಿ ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ನವೀನ್ ಪಡಿವಾಳ್, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಸಂತೋಷ್ ಬೋನಂತಾಯ, ನ್ಯಾಯವಾದಿಗಳಾದ ಮಂಜುನಾಥ್ ಎನ್ ಎಸ್, ವಕೀಲರ ಸಂಘ ಕಾರ್ಯದರ್ಶಿ ಚಿನ್ಮಯಗ ರೈ, ವಿರೂಪಸಕ್ಷ ಭಟ್ ಮಚ್ಚಿಮಲೆ , ನಗರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಶೆಣೈ, ಸವಿನ್ ಬನ್ನೂರು, ಬಲ್ನಾಡು, ವಿಶ್ವನಾಥ ಕುಲಾಲ್, ಸಂತೋಷ್ ಕೈಕಾರ, ಹರಿಣಿ ಪುತ್ತೂರಾಯ, ಧನ್ಯ ಕುಮಾರ್ ಬೆಳಂದೂರು, ನೀಲಂತ್ ಬೊಳುವಾರು, ಜನಾರ್ದನ ಬೆಟ್ಟ ಸಹಿತ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here