ಮುಂಡೂರು ಗ್ರಾಮ ಪಂಚಾಯತ್‌ ನಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

0

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರಿಸುವುದು ನಮ್ಮೆಲ್ಲರ ಬಾಧ್ಯತೆಯಾಗಿದೆ- ಚಂದ್ರಶೇಖರ ಎನ್.ಎಸ್.ಡಿ

ಪುತ್ತೂರು: ಮುಂಡೂರು ಗ್ರಾಮ ಪಂಚಾಯತ್‌ ನಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್‌ ಎನ್‌.ಎಸ್‌.ಡಿ ಮಾತನಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ ಯೋಧರನ್ನು ಸದಾ ಸ್ಮರಿಸುವುದು ನಮ್ಮೆಲ್ಲರ ಬಾಧ್ಯತೆಯಾಗಿದೆ ಎಂದು ಹೇಳಿದರು.

ಮುಂಡೂರು ಶಾಲಾ ವಿದ್ಯಾರ್ಥಿಗಳು ಪಥ ಸಂಚಲನದೊಂದಿಗೆ ಗ್ರಾಮ ಪಂಚಾಯತ್‌ ಆವರಣಕ್ಕೆ ಆಗಮಿಸಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಗ್ರಾ.ಪಂ ಕಾರ್ಯದರ್ಶಿ ಸೂರಪ್ಪ.ಕೆ , ಸದಸ್ಯರಾದ ಬಾಬು ಕಲ್ಲಗುಡ್ಡೆ, ಅಶೋಕ್‌ ಕುಮಾರ್‌ ಪುತ್ತಿಲ, ಬಾಲಕೃಷ್ಣ ಕುರೆಮಜಲು, ದುಗ್ಗಪ್ಪ.ಎನ್‌, ಕರುಣಾಕರ ಗೌಡ ಎಲಿಯ, ಉಮೇಶ್‌ ಅಂಬಟ , ಪುಷ್ಪಾ , ಅರುಣ ಎ.ಕೆ, ಮಹಮ್ಮದ್‌ ಆಲಿ, ಸಿಬ್ಬಂದಿಗಳಾದ ಕೊರಗಪ್ಪ ಕೆ, ಸತೀಶ್‌ ಹೆಚ್, ಮೋಕ್ಷ ಎನ್‌, ಕವಿತಾ ಎಂ ಎಸ್‌, ಶ್ರದ್ಧಾ ಹಾಗೂ ಶಾಲಾ ಶಿಕ್ಷರ ವೃಂದ , ಮುಂಡೂರು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ್‌ ಪಜಿಮಣ್ಣು ಸಂಜೀವಿನಿ ಒಕ್ಕೂಟದ ಸದಸ್ಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು, ಗ್ರಾ.ಪಂ ಉಪಸ್ಥಿತರಿದ್ದರು.
ಶಶಿಧರ್ ಕೆ ಮಾವಿನಕಟ್ಟೆ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here