ಪುತ್ತೂರು ಲ್ಯಾಂಪ್ಸ್ ಸಹಕಾರಿ ಸಂಘದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

0

ಪುತ್ತೂರು:ದರ್ಬೆಯಲ್ಲಿರುವ ಪರಿಶಿಷ್ಠ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ಧೇಶ ಸಹಕಾರಿ(ಲ್ಯಾಂಪ್ಸ್) ಸಂಘದಲ್ಲಿ 78ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸಲಾಯಿತು.
ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ ಎಸ್ ಆಲಂಕಾರು ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯದ ಮಹತ್ವದ ಬಗ್ಗೆ ಮಾತಾನಾಡಿದರು.

ಕರ್ನಾಟಕ ರಾಜ್ಯ ಲ್ಯಾಂಪ್ಸ್ ಪೆಡರೇಶನ್ -ಮೈಸೂರು ಇದರ ಉಪಾಧ್ಯಕ್ಷ ಮಂಜುನಾಥ್ ಎನ್ ಎಸ್, ಪ್ರವೀಣ್ ಭಂಡಾರಿ, ದೇವಿಪ್ರಸಾದ್ ರೈ ಪಿಂಗಾರ ಹಾಗೂ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣಪಣ್ಣ ಎಚ್ ಮಾತಾನಾಡಿದರು. ಸಂಘದ ಉಪಾಧ್ಯಕ್ಷರು, ನಿರ್ದೇಶಕರುಗಳು ಹಾಗೂ ನೌಕರ ವೃಂದದವರು ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೇಸಪ್ಪ ನಾಯ್ಕ ಸ್ವಾಗತಿಸಿದರು. ಸಿಬಂದಿ ಹೊನ್ನಪ್ಪ ನಾಯ್ಕ ವಂದಿಸಿದರು.

LEAVE A REPLY

Please enter your comment!
Please enter your name here