





ಪುತ್ತೂರು: ಬನ್ನೂರು ಗ್ರಾ.ಪಂ ವ್ಯಾಪ್ತಿಯ ಬೀರಿಗ ಅಂಗನವಾಡಿ ಕೇಂದ್ರದಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ಸುರೇಶ್ ಧ್ವಜಾರೋಹಣ ನೆರವೇರಿಸಿದರು.








ಬಾಲವಿಕಾಸ ಸಮಿತಿ ಅಧ್ಯಕ್ಷೆ ಸ್ವಾತಿ ಗಣೇಶ್, ಬನ್ನೂರು ಗ್ರಾ.ಪಂ ಮಾಜಿ ಸದಸ್ಯ ತಿಮ್ಮಪ್ಪ ಗೌಡ, ಪೋಷಕರಾದ ಚಿದಾನಂದ ಬೀರಿಗ, ಪ್ರಕಾಶ್ ಪಂಜಿಗ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿದ್ಯಾ, ಕಾರ್ಯದರ್ಶಿ ಧನ್ಯಾ ದಾರಂದಕುಕ್ಕು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಪುಣಾಣಿಗಳಿಂದ ಸ್ವಾತಂತ್ರ್ಯ ದಿನದ ಬಗ್ಗೆ ಭಾಷಣ, ದೇಶ ಭಕ್ತಿಗೀತೆ, ಅಭಿನಯಗೀತೆ ನಡೆಯಿತು. ಅಂಗನವಾಡಿ ಕಾರ್ಯಕರ್ತೆ ಅರುಣಾ ಸ್ವಾಗತಿಸಿದರು. ಸಹಾಯಕಿ ಸಂಧ್ಯಾ ಸಹಕರಿಸಿದರು.









