ಕಡಬ: ರೆಂಜಿಲಾಡಿ ಸ್ಯಾಂಥೋಮ್ ವಿದ್ಯಾನಿಕೇತನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಕಡಬ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷರು ಹಾಗೂ ಶಾಲಾ ಕೋಶಾಧಿಕಾರಿ ಕೆ ಸಿ ಸೈಮನ್ ನೆರವೇರಿಸಿದರು.
ಶಾಲಾ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ತುಳುನಾಡ ಮಾಜಿ ಸೈನಿಕರು ಪೋಷಕರಿಂದ ಹಾಗೂ ಊರವರ ಸಹಕಾರದೊಂದಿಗೆ ಆಕರ್ಷಕ ಪಥಸಂಚಲನ ನಡೆಯಿತು.
ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳ ಶಂಖದಳ ಪಥಸಂಚಲನಕ್ಕೆ ವಿಶೇಷ ಮೆರುಗು ನೀಡಿತು.
ಸಭಾಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಫಾದರ್ ಪೌಲ್ ಜೇಕಬ್ ವಹಿಸಿದ್ದರು. ಅತಿಥಿಗಳಾಗಿ ಮಾಜಿ ಸೈನಿಕರು ಹಾಗೂ ಶಾಲಾ ಶೈಕ್ಷಣಿಕ ಸಲಹೆಗಾರಾದ ಟಿ.ಜೆ ಮ್ಯಾಥ್ಯೂರವರು ಮಾತಾನಾಡಿ ಉತ್ತಮ ರಾಜ್ಯವನ್ನು ಕಟ್ಟಿ ಉತ್ತಮ ರಾಷ್ಟ್ರವನ್ನು ನಿರ್ಮಾಣ ಮಾಡೋಣ ಎನ್ನುವ ಸಂದೇಶ ನೀಡಿದರು.
ವಲಯದ ಸಂಪನ್ಮೂಲ ವ್ಯಕ್ತಿ ಗಣೇಶ್ ನಡುವಾಳ್, ಜಿಪಂ ಮಾಜಿ ಸದಸ್ಯ ಪಿ.ಪಿ ವರ್ಗೀಸ್, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಸದಸ್ಯರಾದ ಇಮ್ಯಾನುವೆಲ್ ಪಿ.ಜೆ, ಮಾಜಿ ಸದಸ್ಯ ಕೆ.ಜೆ ಥೋಮಸ್, ಉರುಂಬಾಲು ಉಮಾಮಹೇಶ್ವರ ದೇವಸ್ಥಾನದ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ, ರಕ್ಷಕ-ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ಯಶೋಧರ ತಮ್ಮಯ್ಯ ಬಲ್ಲಾಳ್
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮಣ್ ಗೌಡ ಸಾಂತ್ಯಡ್ಕ , ರೆಂಜಿಲಾಡಿ ಪೂಸೊಳಿಗೆ ಬದ್ರಿಯಾ ಜಮಾ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ ಜಿಲ್ಲಾ ಪಂಚಾಯತ್ ಸೈನಿಕ ಸಂಘದ ಗೌರವ ಅಧ್ಯಕ್ಷ ವಾಸುದೇವ ಬಾನಡ್ಕ , ಮಾಜಿ ಸೈನಿಕರು ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್ ತೀರ್ಪುಗಾರ ತಾರಾನಾಥ, ತುಳುನಾಡ ಮಾಜಿ ಸೈನಿಕರ ಸಂಘ ಕಡಬ ಇದರ ಉಪಾಧ್ಯಕ್ಷ
ಓ.ಜೆ.ನೈನಾನ್ ವೀರನಾರಿ ಜಿಲ್ಲಾಧ್ಯಕ್ಷೆ ಗೀತಾ ಜಿ.ಕೆ, ನಮ್ಮ ತುಳುನಾಡ ಮಾಜಿ ಸೈನಿಕರ ಸಂಘದ ಸರ್ವ ಸದಸ್ಯರು ಶಾಲಾ ಮುಖ್ಯ ಗುರುಗಳು ಶಿಕ್ಷಕ ಶಿಕ್ಷಕೇತರ ವರ್ಗ ಆಟೋರಿಕ್ಷಾ ಚಾಲಕ ಮಾಲಕರು, ಸೈಂಟ್ ಥೋಮಸ್ ಓರ್ಥೋಡೋಕ್ಸ್ ಚರ್ಚ್ ರಂಜಿಲಾಡಿ ಇದರ ಸದಸ್ಯರು, ಹಳೇ ವಿದ್ಯಾರ್ಥಿಗಳು ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಸೈಂಟ್ ಥೋಮಸ್ ಓರ್ಥೋಡೋಕ್ಸ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ನಂತರ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಧ್ವಜಾರೋಹಣ ಕಾರ್ಯಕ್ರಮವನ್ನು ಸಹ ಶಿಕ್ಷಕಿ ಶ್ವೇತಾ ನಿರೂಪಿಸಿದರು. ಸಭಾ ಕಾರ್ಯಕ್ರಮವನ್ನು ಪ್ರಭಾರ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಸ್ವಾಗತಿಸಿದರು ಸಹ ಶಿಕ್ಷಕಿ ಶ್ರೀಮತಿ ಮೇರಿ ಫಿಲಿಪ್ ವಂದಿಸಿದರು. ಕ್ರಿಸ್ಟಿನಾ ಪಿ.ಕೆ ನಿರೂಪಿಸಿದರು. ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಅನೀಶ್ ಆತ್ರಶಾಲ ನೀಡಿದರು.ಆಡಳಿತ ಮಂಡಳಿಯ ಸದಸ್ಯರಾದ ವಿನೋದ್ ಟಿ.ಟಿ, ಈ ಜೆಬಿನ್ ಜೆ.ಪಿ ಸುನಿಲ್ ರಾಜು, ವರ್ಗೀಸ್ ಕೆ.ಎ ಹಾಜರಿದ್ದರು.