ಮರೀಲ್ ಇ ಎಸ್ ಆರ್ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಪುತ್ತೂರು: ಮರಿಲ್ ಎಸ್ ಆರ್ ಪ್ರೆಸಿಡೆನ್ಸಿ ಸ್ಕೂಲ್ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ ನಡೆಸಿ ಮಾತನಾಡಿದ ಉದ್ಯಮಿ ಗಂಗಾಧರ ಆಚಾರ್ಯ ಅವರು ವಿದ್ಯಾರ್ಥಿಗಳು ದೇಶದ ಭವಿಷ್ಯ ಸಾವಿರಾರು ಹೋರಾಟಗಾರರ ಹೋರಾಟದ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ ಈ ಸ್ವಾತಂತ್ರ್ಯವನ್ನು ಅತ್ಯಂತ ಆರೋಗ್ಯದಾಯಕವಾಗಿ ಮುನ್ನಡೆಸಿಕೊಂಡು ಹೋಗುವಂಥದ್ದು ಮುಂದಿನ ಪ್ರಜೆಗಳಾದ ನಿಮ್ಮ ಆದ್ಯ ಕರ್ತವ್ಯ ಎಲ್ಲರೂ ಪ್ರೀತಿಯಿಂದ ಸಹಬಾಳ್ವೆಯಿಂದ ಬಾಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಂಸ್ಥೆಯ ಸಂಚಾಲಕರಾದ ಜಾಕೀರ್ ಹುಸೈನ್ ಮಾತನಾಡಿ, ಬಲಿದಾನಗೈದ ಎಲ್ಲರೂ ನಮಗೆ ಮಾರ್ಗದರ್ಶಕರು ಅವರ ಬಲಿದಾನವನ್ನು ವ್ಯರ್ಥ ಗೊಳಿಸದೆ ಪ್ರೀತಿ ವಿಶ್ವಾಸದಿಂದ ಭಾರತದ ಸ್ವಾತಂತ್ರ್ಯವನ್ನು ಅನುಭವಿಸಬೇಕು ಯಾವುದೇ ರೀತಿಯ ದ್ವೇಷ ಮತ್ಸರಗಳು ನಮ್ಮೊಂದಿಗೆ ಬರದಂತೆ ನೋಡಿಕೊಳ್ಳಬೇಕು ಮುಂದಿನ ಬಲಿಷ್ಠ ಭಾರತದ ಪ್ರಜೆಗಳಾದ ತಾವು ದೇಶದ ಏಳಿಗೆಗಾಗಿ ಶ್ರಮಿಸಬೇಕು ಎಂದರು

ಆಡಳಿತ ಮಂಡಳಿಯ ನಿರ್ದೇಶಕರಾದ ವಿ.ಕೆ ಶರೀಫ್ ಬಪ್ಪಳಿಗೆ ಮಾತನಾಡಿ, ನಮ್ಮ ಪೂರ್ವಿಕರ ಆದರ್ಶಗಳನ್ನು ಮೈಗೂಡಿಸಿಕೊಂಡು ಭವ್ಯ ಭಾರತವನ್ನು ಸೃಷ್ಟಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತಿ ಮುಖ್ಯವಾಗಿದೆ ಈ ನಿಟ್ಟಿನಲ್ಲಿ ತಾವೆಲ್ಲರೂ ಶ್ರಮಿಸಬೇಕೆಂದು ನುಡಿದರು.
ವಿದ್ಯಾರ್ಥಿ ಪೋಷಕರಾದ ಅಬ್ದುಲ್ ಹಮಿ ಅವರು ವಿದ್ಯಾರ್ಥಿಗಳಿಗೆ ಬಾವುಟದ ಬಣ್ಣಗಳ ಬಗ್ಗೆ ವಿವರಿಸಿ ಜೀವನ ದುದ್ದಕ್ಕೂ ಅದರಂತೆ ನಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರುಗಳಾದ ವಿ. ಕೆ. ಸಲೀಂ, ಮಕ್ಸೂದ್, ಶಾಲಾ ಮುಖ್ಯ ಶಿಕ್ಷಕಿ, ಶಿಕ್ಷಕ ಮತ್ತು ಶಿಕ್ಷಕೇತರವೃಂದ ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿ ಮನರಂಜಿಸಿದರು. ಕಾರ್ಯಕ್ರಮವನ್ನು ರಾಹೀಲ ಬಿ. ನಿರೂಪಿಸಿ, ಶೆರಿಲ್ ಶೆಲ್ಮ ಡಿಸೋಜಾ ಸ್ವಾಗತಿಸಿ, ಫಾತಿಮಾತ್ ಝೀಯಾನ ವಂದಿಸಿದರು.

LEAVE A REPLY

Please enter your comment!
Please enter your name here