ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಸಾಮೂಹಿಕ ವ್ರತಾಚರಣೆ – ಪುತ್ತೂರಿನಿಂದ ತೆರಳುವ ಭಕ್ತರಿಗೆ ಉಚಿತ ವಾಹನದ ವ್ಯವಸ್ಥೆ

0

ಪುತ್ತೂರು: ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮಾಣಿಲ ಶ್ರೀಧಾಮದ ಬೆಳ್ಳಿಹಬ್ಬ ಮಹೋತ್ಸವದ ಸಮಾರೋಪ ಸಮಾರಂಭವು ಆ.16ರಿಂದ ಆ.18ರ ವರೆಗೆ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದ್ದು ಆ.18ಕ್ಕೆ ಕಾರ್ಯಕ್ರಮಕ್ಕೆ ಪುತ್ತೂರಿನಿಂದ ತೆರಳುವ ಭಕ್ತಾದಿಗಳಿಗೆ ಉಚಿತ ವಾಹನದ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಶ್ರೀಧಾಮ ಮಾಣಿಲ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವದ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ತಿಳಿಸಿದ್ದಾರೆ.

ಕಳೆದ ವರ್ಷ ಪುತ್ತೂರಿನಿಂದ ಅದ್ದೂರಿಯ ಹೊರೆಕಾಣಿಕೆ ಸಮರ್ಪಣೆ ಮೂಲಕ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿತ್ತು. ಈ ಕುರಿತು ಸ್ವಾಮೀಜಿಯವರಿಗೆ ಪುತ್ತೂರಿನ ಭಕ್ತರ ಮೇಲೆ ಅಪಾರ ಪ್ರೀತಿ ಇದೆ. ಇದೀಗ ಆ.18ಕ್ಕೆ ಬೆಳ್ಖಿಹಬ್ಬದ ಸಮಾರೋಪ ಕಾರ್ಯಕ್ರಮಕ್ಕೆ ಪುತ್ತೂರಿನಿಂದ ಉಚಿತವಾಗಿ ವಾಹನದ ವ್ಯವಸ್ಥೆ ಮಾಡಲಾಗುವುದು. ಕಾರ್ಯಕ್ರಮಕ್ಕೆ ತೆರಳುವವರು ಮುಂಚಿತವಾಗಿ ಪುತ್ತೂರು ತಾಲೂಕು ಸಮಿತಿಯನ್ನು ಸಂಪರ್ಕಿಸಬೇಕು ಎಂದರು.

ಸಮಿತಿ ಕಾರ್ಯಾಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಅವರು ಮಾತನಾಡಿ ವಿವಿಧ ಕ್ಷೇತ್ರದ ಅಭಿವೃದ್ಧಿ, ಧರ್ಮದ ಬಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಪುತ್ತೂರಿನ ಸಮಸ್ತ ಹಿಂದು ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಮತ್ತು ಸ್ವಾಮಿಜಿಯವರ ಪರಿಕಲ್ಪಣೆಯನ್ನು ಸಾಕಾರಗೊಳಿಸಬೇಕು ಎಂದ ಅವರು ಇದರ ಜೊತೆಗೆ ಹೊರೆಕಾಣಿಕೆ ಸಮರ್ಪಣೆ ಮಾಡುವವರು ಕ್ಷೇತ್ರಕ್ಕೆ ನೇರವಾಗಿ ಸಮರ್ಪಿಸಬಹುದು ಅಥವಾ ನಮ್ಮನ್ನು ಸಂಪರ್ಕಿಸಬಹದು ಎಂದರು.

ಸಮಿತಿ ಗೌರವಾಧ್ಯಕ್ಷ ಡ.ಸುರೇಶ್ ಪುತ್ತೂರಾಯ ಅವರು ಮಾತನಾಡಿ ಮಾಣಿಲ ಪುಣ್ಯಕ್ಷೇತ್ರಕ್ಕೆ ಭಕ್ತರು ಒಮ್ಮೆಯಾದರೂ ಭೇಟಿ ನೀಡಬೇಕೆಂದರು.
ಸಮಿತಿ ಇನ್ನೋರ್ವ ಕಾರ್ಯಾಧ್ಯಕ್ಷ ಕೃಷ್ಣ ಎಂ ಅಳಿಕೆ ಅವರು ಮಾತನಾಡಿ, ದ.ಕ ಜಿಲ್ಲೆಯಲ್ಲೇ ಮಾಣಿಲದಲ್ಲಿ ಮಾತ್ರ 48 ದಿನ ಶ್ರೀ ಲಕ್ಷ್ಮೀ ಪೂಜೆ ನಡೆಯುತ್ತಿದೆ. ಅದೇ ರೀತಿ ಕೊಲ್ಲಾಪುರ ಮಹಾಲಕ್ಷ್ಮೀ‌ಕ್ಷೇತ್ರ ಬಿಟ್ಟರೆ ಕರ್ನಾಟಕದಲ್ಲಿ ಮಹಾಲಕ್ಷ್ಮೀ ಕ್ಷೇತ್ರ ಇರುವುದು ಮಾಣಿಲದಲ್ಲಿ ಮಾತ್ರ ಎಂದರು. ಪತ್ರಿಕಾಗೋಷ್ಟಿಯಲ್ಲಿ ಸಮಿತಿ ಕಾರ್ಯದರ್ಶಿ ನವೀನ್ ಕುಲಾಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here