ಪುತ್ತೂರು: ಡಾ| ಪಿ.ಬಿ. ರೈ ಪ್ರತಿಷ್ಟಾನ ಕೆಯ್ಯೂರು ಮತ್ತು ಪವಿತ್ರ ವಿವಾ ಎಂಟರ್ಪ್ರೈಸಸ್ ನೆಲ್ಯಾಡಿ ಇವರ ಜಂಟಿ ಆಶ್ರಯದಲ್ಲಿ ಪುತ್ತೂರು ಎಪಿಎಂಸಿ ರಸ್ತೆಯ ಬಾಪ್ ಬೆನ್ಸ್ ವಾಣಿಜ್ಯ ಸಂಕೀರ್ಣದಲ್ಲಿ ಆ.18ರಂದು ಉದ್ಘಾಟನೆಗೊಳ್ಳಲಿರುವ ಸಾವಯವ ಗೊಬ್ಬರ ಮತ್ತು ಔಷಧಿ ವಿತರಕ ಕೇಂದ್ರವಾದ ಜಗದಂಬಾ ಎಂಟರ್ಪ್ರೈಸಸ್ ನ ಕಚೇರಿಗೆ ಶ್ರೀ ಕ್ಷೇತ್ರ ಕೊಣಾಜೆಕಲ್ಲು ಸಿದ್ದಾಶ್ರಮ ಮಠದ ಗಣೇಶ್ ಗುರೂಜಿಯವರು ಆ. 16 ರಂದು ಭೇಟಿ ನೀಡಿ ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು.
ಪುತ್ತೂರಿನ ಈ ಭಾಗದಲ್ಲಿ ಒಳ್ಳೆಯ ಸಂಸ್ಥೆಯೊಂದನ್ನು ದಂಬೆಕ್ಕಾನ ಸದಾಶಿವ ರೈ ಮತ್ತು ಅವರ ತಂಡ ಹುಟ್ಟುಹಾಕಿದೆ. ಇದರಿಂದ ಕೃಷಿಕರಿಗೆ ಒಳ್ಳೆಯದಾಗಲಿ. ಈ ಉತ್ಪನ್ನದಿಂದ ಅತ್ಯಧಿಕ ಬೆಳೆ ತೆಗೆಯುವಂತಾಗಲಿ. ಹೆಚ್ಚು ಜನರಿಗೆ ತಲುಪುವಂತಾಗಲಿ. ಇದಕ್ಕೆ ಉತ್ತಮ ಮಾರುಕಟ್ಟೆ ಲಭ್ಯವಾಗಲು ದೇವರು ಅನುಗ್ರಹಿಸಲಿ ಎಂದರು.
ಆ. 18ರಂದು ಸಂಸ್ಥೆಯ ಉದ್ಘಾಟನೆ
ಆ. 18ರಂದು ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ನೂಜಿ ತರವಾಡು ಮನೆಯ ಪ್ರಭಾ ಎಸ್. ರೈ ಮತ್ತು ಅನಿತಾ ಹೇಮನಾಥ ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿಯೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಡಾ. ಪಿ.ಬಿ. ರೈ ಪ್ರತಿಷ್ಠಾನದ ಗೌರವಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಇದೇ ವೇಳೆ ತಿಳಿಸಿದರು.
ಈ ವೇಳೆ ಡಾ. ಪಿ.ಬಿ. ರೈ ಪ್ರತಿಷ್ಟಾನದ ಅಧ್ಯಕ್ಷ ದಂಬೆಕ್ಕಾನ ಸದಾಶಿವ ರೈ, ಪ್ರಭಾ ಎಸ್. ರೈ, ಪವಿತ್ರಾ ವಿವಾ ಎಂಟರ್ಪ್ರೆöÊಸಸ್ ನೆಲ್ಯಾಡಿ ಇದರ ಎ.ಆರ್. ಅಮನ್ ಮತ್ತಿತರರು ಉಪಸ್ಥಿತರಿದ್ದರು.