ಪುತ್ತೂರು: ಒಕ್ಕಲಿಗ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಗೌಡ ಸಂಘ, ಒಕ್ಕಲಿಗ ಸ್ವಸಹಾಯ ಸಂಘದದ ಸಹಯೋಗದೊಂದಿಗೆ ಆ.16ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ ನಡೆಯಿತು.
ಬೆಳಿಗ್ಗೆ ಮಹಿಳಾ ಗೌಡ ಸಂಘದ ಅಧ್ಯಕ್ಷೆ ವಾರಿಜ ಕೆ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕಿ ಲೀಲಾವತಿ ಎಂ ನೇರಳ ಅವರಿಂದ ಧಾರ್ಮಿಕ ಉಪನ್ಯಾಸ ನೀಡಿ ಸುಲಭವಾಗಿ ಆಶೋತ್ತರಗಳನ್ನು ಈಡೆರಿಸುವ ವ್ರತಾಚರಣೆಯೇ ವರಮಹಾಲಕ್ಷ್ಮೀ ಪೂಜೆ. ಮಾಡುವ ಪೂಜೆ ನಿಷ್ಠೆಯಿಂದ ಇರಬೇಕು. ಯಾಕೆಂದರೆ ದೇವರು ನಮ್ಮೊಳಗೆ ಇದ್ದಾರೆ ಎಂದು ಹೇಳಿದರು.
ಸನ್ಮಾನ:
ಸಮಾಜದಲ್ಲಿ ಅತ್ಯಂತ ಉನ್ನತ ಕ್ಷೇತ್ರದಲ್ಲಿ ಹಲವು ಮಜಲುಗಳಲ್ಲಿ ಕೆಲಸ ನಿರ್ವಹಿಸಿದ ವಿಶ್ರಾಂತ ಪ್ರಾಧ್ಯಾಪಕಿ ಲೀಲಾವತಿ ಎಂ ನೇರಳ ಮತ್ತು ಅವರ ಗಂಡ ಬಾಲಕೃಷ್ಣ ಗೌಡ ಅವರನ್ನು ಮಹಿಳಾ ಗೌಡ ಸೇವಾ ಸಂಘದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಮಹಿಳಾ ಗೌಡ ಸಂಘದ ಗೌರವಾಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಯುವ ಗೌಡ ಸೇವ ಸಂಘದ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಒಕ್ಕಲಿಗ ಸ್ವಸಹಾಯ ಸಂಘದ ಅಧ್ಯಕ್ಷ ಮನೋಹರ್ ಡಿ ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರಿ ಬನ್ನೂರು, ಲಿಂಗಪ್ಪ ಗೌಡ, ಮಾದವ ಪೆರಿಯತ್ತೋಡಿ, ಲೋಕೇಶ್ ಬನ್ನೂರು ಅತಿಥಿಗಳನ್ನು ಗೌರವಿಸಿದರು. ಮಹಿಳಾ ಸಂಘದ ಕೋಶಾಧಿಕಾರಿ ರತ್ನಾವತಿ ಅತಿಥಿಯನ್ನು ಪರಿಚಯಿಸಿದರು. ಉಷಾಮಣಿ ದಯಾನಂದ್ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಸಂಧ್ಯಾ ಶಶಿಧರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.