ಪುತ್ತೂರು: ಮೊಟ್ಟೆತ್ತಡ್ಕ ಬದ್ರಿಯಾ ಜುಮಾ ಮಸೀದಿ ಹಾಗೂ ಎಸ್.ಕೆ.ಎಸ್.ಬಿ.ವಿ ಹಿದಾಯತುಲ್ ಇಸ್ಲಾಂ ಮದ್ರಸ ವತಿಯಿಂದ ಮದ್ರಸ ವಠಾರದಲ್ಲಿ ಜಮಾಅತ್ ಅಧ್ಯಕ್ಷರಾದ ಅಬ್ದುಲ್ಲಾ ಕೆ ರವರ ನೇತೃತ್ವದಲ್ಲಿ ಹಿರಿಯ ವ್ಯಕ್ತಿ ಆದಂ ಝಮ್ ಝಮ್ ರವರು ತ್ರಿವರ್ಣ ಧ್ವಜ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮದ್ರಸ ಮುಖ್ಯೋಪಾಧ್ಯಾಯರಾದ ಉಮರುಲ್ ಫಾರೂಕ್ ಫೈಝಿ ಕೊಡಿಪ್ಪಾಡಿ ಪ್ರಾರ್ಥನೆ ನಡೆಸಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ಸ್ಥಳೀಯ ಖತೀಬರಾದ ಅಶ್ರಫ್ ರಹ್ಮಾನಿ ವೀರಮಂಗಲರವರ ಸಂದೇಶ ಭಾಷಣದ ನಂತರ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮದ್ರಸ ವಿದ್ಯಾರ್ಥಿಗಳಿಗೆ ನಡೆಸಿದ ಧ್ವಜ ತಯಾರಿಕೆ, ಭೂಪಟ ರಚನೆ, ದೇಶಭಕ್ತಿ ಗೀತೆ, ಕೊಲಾಜ್ ಮುಂತಾದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಮದ್ರಸ ಅಧ್ಯಾಪಕರಾದ ಬಶೀರ್ ದಾರಿಮಿ ಕಳಂಜ, ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಹನೀಫ್, ಕೋಶಾಧಿಕಾರಿ ಹಮೀದ್, ಉಪಾಧ್ಯಕ್ಷರಾದ ಹನೀಫ್, ಜೊತೆ ಕಾರ್ಯದರ್ಶಿ ರಹ್ಮತುಲ್ಲಾ, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷರಾದ ನಿಸಾರ್, ಪ್ರಧಾನ ಕಾರ್ಯದರ್ಶಿ ನಿಝಾಂ, ಉಪಾಧ್ಯಕ್ಷ ಶರೀಫ್, ಸಂಘಟನಾ ಕಾರ್ಯದರ್ಶಿ ಸಿದ್ದೀಕ್, ಜೊತೆ ಕಾರ್ಯದರ್ಶಿ ಹಾಶಿರ್, ಎಸ್.ಕೆ.ಎಸ್.ಬಿ.ವಿ ಅಧ್ಯಕ್ಷ ಝಿಶಾನ್, ಪ್ರಧಾನ ಕಾರ್ಯದರ್ಶಿ ತಬ್ಶೀರ್, ಕೋಶಾಧಿಕಾರಿ ಶಹ್ಝಾದ್ ಸಂಘಟನಾ ಕಾರ್ಯದರ್ಶಿ ಆದಿಲ್ ಸಹಿತ ಜಮಾಅತ್ ಕಮಿಟಿ, ಎಸ್.ಕೆ.ಎಸ್.ಎಸ್.ಎಫ್, ಎಸ್.ಕೆ.ಎಸ್.ಬಿ.ವಿ ಸಂಘಟನಾ ನೇತಾರರು ಹಾಗೂ ಕಾರ್ಯಕರ್ತರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗಿಯಾದರು. ಕೊನೆಗೆ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.