ಬಡಗನ್ನೂರು: ಕರ್ನಾಟಕ ಮುಸ್ಲಿಂ ಜಮಾಅತ್,ಎಸ್ ವೈ ಎಸ್,ಎಸ್ ಎಸ್ ಎಫ್ ಈಶ್ವರಮಂಗಲ ಸರ್ಕಲ್ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಇದರ ಪ್ರಯುಕ್ತ ವಿದ್ಯುತ್ ಪವರ್ ಮ್ಯಾನ್ ಗಳಿಗೆ ಹಾಗೂ ಅಂಬ್ಯುಲೆನ್ಸ್ ಚಾಲಕರಿಗೆ ಗೌರವಾರ್ಪಣೆ ಕಾರ್ಯಕ್ರಮವು ಆ.15ರಂದು ಈಶ್ವರಮಂಗಲ ತ್ವೈಬಾ ಸೆಂಟರ್ ನಲ್ಲಿ ನಡೆಯಿತು.
ಎಸ್ ವೈ ಎಸ್ ಸರ್ಕಲ್ ಅಧ್ಯಕ್ಷರಾದ ಉಮ್ಮರ್ ಸಅದಿಯವರ ಅಧ್ಯಕ್ಷತೆಯಲ್ಲಿ ಈಸ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಮೀದ್ ಕೊಯಿಲ ಸ್ವಾಗತಿಸಿದರು. ದ.ಕ ಈಸ್ಟ್ ಜಿಲ್ಲಾಧ್ಯರಾದ ಅಬ್ದುಲ್ ಅಝೀಝ್ ಮಿಸ್ಬಾಹಿ ಸಭೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹಂಝ ಉಸ್ತಾದ್, ಅಬ್ದುಲ್ ಜಲೀಲ್ ಸಖಾಫಿ ಕರ್ನೂರು, ಸಂಶುದ್ದೀನ್ ಹನೀಫಿ, ಮೊದಲಾದ ಗಣ್ಯರು ಪ್ರಸ್ತಾವಿಕವಾಗಿ ಮಾತನಾಡಿದರು. ತ್ವೈಬಾ ಎಜ್ಯುಕೇಶನ್ ಸೆಂಟರ್ ವಿದ್ಯಾರ್ಥಿ ಮಿಸ್ಬಾಹ್ ಸಂದೇಶ ಪ್ರಭಾಷಣ ಮಾಡಿದರು.
ಮೆಸ್ಕಾಂ ಈಶ್ವರಮಂಗಲ ಸೆಕ್ಷನ್ ಜೆ.ಇ ರಮೇಶ್ ಕೆ ಮಾತಾನಾಡಿ ಮಳೆಕಾಲದಲ್ಲಿ ಅತಿ ಹೆಚ್ಚು ಕಷ್ಟಪಡುವವರು ನಮ್ಮ ಇಲಾಖೆಯ ಪವರ್ ಮ್ಯಾನ್ ಸಿಬ್ಬಂದಿಗಾಳಾಗಿದ್ದಾರೆ. ಅವರನ್ನು ಯಾರೂ ಗುರುತಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ಎಸ್ ವೈ ಎಸ್ ನಮ್ಮನ್ನು ಗುರುತಿಸಿ ಸನ್ಮಾನಿಸುವುದು ಅತೀ ಸಂತೋಷ ತಂದಿದೆ ಹಾಗೂ ನಮಗೆ ಸ್ಪೂರ್ತಿಯಾಗಿದೆ. ಇದು ಎಲ್ಲರಿಗೂ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಅಂಬ್ಯುಲೇನ್ಸ್ ಚಾಲಕರಾದ ಹನೀಫ್ ಸಿಲ್ ಸಿಲಾ, ರಿಯಾಝ್ ನೆಯ್ಯಡ್ಕ ಹಾಗೂ ಮೆಸ್ಕಾಂ ಅಧಿಕಾರಿಗಳಾದ ರಮೇಶ್.ಕೆ (ಜೆ.ಇ), ಕೇಶವ. ಪಿ (ಮೀಟರ್ ರೀಡರ್), ನಾಗೇಶ.ಕೆ ಎಸ್ (ಮೆಕ್ಯಾನಿಕ್ ದರ್ಜೆ||), ಪವರ್ ಮ್ಯಾನ್ ಗಳಾದ ಗಂಗಾಧರ.ಬಿ, ದಿತೀಶ್. ಎಸ್, ಪಾಂಡಪ್ಪ ದೊಡಮನಿ-(ಸಹಾಯಕ ಪವರ್ ಮ್ಯಾನ್), ಆರ್ ಕಿರಣ್-(ಸಹಾಯಕ ಪವರ್ ಮ್ಯಾನ್), ರಫೀಕ್ ಅಕ್ಕೋಜಿ(ಕಿರಿಯ ಪವರ್ ಮ್ಯಾನ್), ಸಂಪತ್ ಕುಮಾರ್. ಆರ್ ಸಂಗಟಿ-(ಕಿರಿಯ ಪವರ್ ಮ್ಯಾನ್), ದರ್ಶನ್ ಹಿಪ್ಪರಗಿ-(ಕಿರಿಯ ಪವರ್ ಮ್ಯಾನ್), ಬಂದೇನವಾಜ -(ಹಿರಿಯ ಪವರ್ ಮ್ಯಾನ್) ,ಹನುಮಂತ ದಾಸರ -(ಸಹಾಯಕ ಪವರ್ ಮ್ಯಾನ್), ಶರಣು ಎಂ ಛಲವಾದಿ,(ಸಹಾಯಕ ಪವರ್ ಮ್ಯಾನ, ಚೈತನ್ ಬನ್ನಿಕೊಪ್ಪ (ಜೂನಿಯರ್ ಪವರ್ ಮ್ಯಾನ್) ರವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್. ಎಸ್ ವೈ ಎಸ್, ಎಸ್ ಎಸ್ ಎಫ್ ನೇತಾರು.ಟೀಂ ಇಸಾಬ ತಂಡದ ಕಾರ್ಯಕರ್ತರು ಭಾಗವಹಿಸಿದರು. ಸರ್ಕಲ್ ಪ್ರಧಾನ ಕಾರ್ಯದರ್ಶಿ ಶರೀಫ್ ಪಿ ಎಚ್ ಅವರ ಧನ್ಯವಾದದೊಂದಿಗೆ ಈ ಸಮಾರಂಭ ಸಮಾಪ್ತಿಗೊಂಡಿತು.