ಪುತ್ತೂರು: ದರ್ಬೆ ಮೊಯಿದೀನ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಆಶೀರ್ವಾದ್ ಎಂಟರ್‌ಪ್ರೈಸಸ್ ಆಯೋಜಿಸಿರುವ ಲಕ್ಕೀ ಸ್ಕೀಂ ಯೋಜನೆಯ ಆರನೇ ಕಂತಿನ ಡ್ರಾ. ಆ.15ರಂದು ನಡೆಯಿತು.
ಸುಕುಮಾರ್ ಕೋಟೆಕಾರ್ ಮಂಗಳೂರು ಮತ್ತು ವಿಘ್ನೇಶ್ವರ ಬೆಳ್ಳಾರೆ 50 ಸಾವಿರ ರೂ. ಮೌಲ್ಯದ ಚಿನ್ನದ ಸರ ಬಂಪರ್ ಡ್ರಾ.ವಿಜೇತರಾಗಿ ಆಯ್ಕೆಗೊಂಡರು. ಸಾಟ್ರಿಕ್ ಡಿ.ಕುನ್ಹಾ ಮಂಗಳೂರು, ದೀಕ್ಷಿತ್ ಬೆಳ್ಳಾರೆ, ಅಶೋಕ್ ಕುಮಾರ್ ಮತ್ತು ದಿಯಾನ್ ಸಾಮೆತ್ತಡ್ಕರವರು ಚಿನ್ನದ ಉಂಗುರ ವಿಜೇತರಾಗಿ ಆಯ್ಕೆಯಾದರು. ಅಲ್ಲದೆ 50 ಮಂದಿ ಸರ್‌ಪ್ರೈಸ್ ಬಹುಮಾನಗಳ ವಿಜೇತರಾಗಿ ಆಯ್ಕೆಗೊಂಡರು. ದೀಪಾ ಮತ್ತು ಹುಬ್ಬಳ್ಳಿ ಟ್ರೇಡರ‍್ಸ್ ಮಾಲಕ ಜಯರಾಜ್ ಶೆಟ್ಟರ್ ಬಂಪರ್ ಡ್ರಾ.ವಿಜೇತರನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿದರು. ಗ್ರಾಹಕರುಗಳಾದ ಮೋಹನ್ ಕೆ. ಕೆಎಸ್‌ಆರ್‌ಟಿಸಿ, ಕೃಷ್ಣ ನಾಯ್ಕ, ಶಕೀಲ್ ದರ್ಬೆ, ಶ್ಯಾಮ್ ಭಟ್ ಹಾಗೂ ಶಾರಿಕ್ ಉಪಸ್ಥಿತರಿದ್ದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರ್ವಹಿಸಿದರು.
ಡ್ರಾ.ವಿಜೇತರಿಗೆ ಮನೆ ಗೆಲ್ಲುವ ಅವಕಾಶ:
ಆಶೀರ್ವಾದ್ ಲಕ್ಕೀ ಸ್ಕೀಂ ಯೋಜನೆಯಲ್ಲಿ ಸದಸ್ಯರು ಪ್ರತೀ ತಿಂಗಳು ತಲಾ 1೦೦೦ರೂ.ನಂತೆ ಒಟ್ಟು 20 ಕಂತುಗಳನ್ನು ತುಂಬಬೇಕಾಗುತ್ತದೆ. ಪ್ರತೀ ತಿಂಗಳ 15ರಂದು ಡ್ರಾ. ನಡೆಯಲಿದ್ದು ಡ್ರಾ. ವಿಜೇತರು ಮುಂದಿನ ಕಂತು ಪಾವತಿ ಮಾಡಬೇಕಾಗಿಲ್ಲ. ಪ್ರತೀ ತಿಂಗಳ ಡ್ರಾ.ದಲ್ಲಿ ವಿಜೇತರು ಆಕರ್ಷಕ ಬಹುಮಾನಗಳು ಗೆಲ್ಲಲು ಅವಕಾಶ ಲಭ್ಯವಿದ್ದು ಕೊನೆಯ ಮೂರು ಕಂತುಗಳ ಡ್ರಾ. ವಿಜೇತರಿಗೆ 2ಬಿಎಚ್‌ಕೆ ಮನೆಯನ್ನು ಪಡೆದುಕೊಳ್ಳುವ ಅವಕಾಶವನ್ನು ಸಂಸ್ಥೆ ನೀಡಿದೆ.
ಸ್ವಾತಂತ್ರ್ಯೋತ್ಸವಕ್ಕೆ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಣೆ
ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಆಶೀರ್ವಾದ್ ಎಂಟರ್‌ಪ್ರೈಸಸ್‌ನಿಂದ ಪುತ್ತೂರು ತಾಲೂಕಿನ ವಿವಿಧ ಶಾಲೆಯ ಸುಮಾರು 4000 ವಿದ್ಯಾರ್ಥಿಗಳಿಗೆ ಲಾಡು ಮತ್ತು ಚಾಕಲೋಟ್ ವಿತರಿಸಲಾಯಿತು.