ರೋಹಿಣಿ ಹೊಲಿಗೆ & ಆರ್ಟ್ಸ್,ಕ್ರಾಪ್ಟ್ ತರಬೇತಿ ಕೇಂದ್ರದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಡ್ರಾಯಿಂಗ್ ಸ್ಪರ್ಧೆ

0

ಪುತ್ತೂರು: ರೋಹಿಣಿ ಹೊಲಿಗೆ & ಆರ್ಟ್ಸ್, ಕ್ರಾಪ್ಟ್ ತರಬೇತಿ ಕೇಂದ್ರದ ವತಿಯಿಂದ,ಸೀನಿಯರ್ ಚೇಂಬರ್‍ಸ್ ಇಂಟರ್‌ನ್ಯಾಷನಲ್ ಪುತ್ತೂರು, ಎಸ್.ಕೆ. ಗೋಲ್ಡ್‌ಸ್ಮಿತ್ ಇಂಡಸ್ಟ್ರೀಯಲ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು, ಲಯನ್ಸ್ ಕ್ಲಬ್ ಪುತ್ತೂರು,ಶಿಕ್ಷಣ ಸಂಪನ್ಮೂಲ ಕೇಂದ್ರ ಘಟಕ ಪುತ್ತೂರು, ಸೀನಿಯರ್ ಚೇಂಬರ್‍ಸ್ ಇಂಟರ್‌ನ್ಯಾಷನಲ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ 1 ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಆ. 15 ರಂದು ಡ್ರಾಯಿಂಗ್ ಸ್ಪರ್ಧೆಯನ್ನು ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್.ಕೆ. ಗೋಲ್ಡ್‌ಸ್ಮಿತ್ ಇಂಡಸ್ಟ್ರೀಯಲ್ ಕೋ-ಆಪರೇಟಿವ್ ಸೊಸೈಟಿ ಮಂಗಳೂರು ಇದರ ಉಪಾಧ್ಯಕ್ಷ ಆನಂದ್ ಆಚಾರ್ಯ ಮಾತನಾಡಿ ನಮ್ಮ ಸೊಸೈಟಿ ಈ ವರ್ಷ ವಜ್ರಮಹೋತ್ವವನ್ನು ಆಚರಿಸುತಿದ್ದು ಅದಕ್ಕೆ ಪೂರ್ವಭಾವಿಯಾಗಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತಿದ್ದೇವೆ. ಇದೊಂದು ಉತ್ತಮ ಕಾರ್ಯಕ್ರಮವಾದ್ದರಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತದ ಡ್ರಾಯಿಂಗ್ ಸ್ಪರ್ಧೆಯ ಪ್ರಾಯೋಜಕತ್ವವನ್ನು ವಹಿಸಿಕೊಂಡೆವು ಎಂದರು.

ಲಯನ್ಸ್ ಕ್ಲಬ್ ಪುತ್ತೂರು ಇದರ ಅಧ್ಯಕ್ಷೆ ಪ್ರೇಮಲತಾ ರಾವ್, ಡಿ.ಸಿ.ವತ್ಸಲಾ ರಾಜ್ನಿ, ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ರಫೀಕ್,ಬಾಲನ್ಯಾಯ ಕಾಯ್ದೆ ಇದರ ಜಡ್ಜ್ ಕಸ್ತೂರಿ ಬೊಳುವಾರು,ಸೀನಿಯರ್ ಚೇಂಬರ್‍ಸ್ ಇಂಟರ್‌ನ್ಯಾಷನಲ್ ಪುತ್ತೂರು ಇದರ ಅಧ್ಯಕ್ಷೆ ಮಲ್ಲಿಕಾ ಜೆ. ರೈ, ತೀರ್ಪುಗಾರರಾಗಿ ಆಗಮಿಸಿದ ಪತ್ರಕರ್ತ ಸಂಶುದ್ದಿನ್ ಸಂಪ್ಯ ಮತ್ತು ಡ್ರಾಯಿಂಗ್ ಮಾಸ್ಟರ್ ದಿನೇಶ್ ವಿಶ್ವಕರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಪರ್ಧಾ ವಿಜೇತರಾದವರಿಗೆ ಬಹುಮಾನವನ್ನು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಟಿಫಿಕೆಟ್ ನೀಡಿ ಗೌರವಿಸಲಾಯಿತು.
ಶ್ರೀರಕ್ಷ ಪ್ರಾರ್ಥಿಸಿದರು,ರೋಹಿಣಿ ಹೊಲಿಗೆ & ಆರ್ಟ್ಸ್ ಕ್ರಾಪ್ಟ್ ತರಬೇತಿ ಕೇಂದ್ರದ ಮುಖ್ಯಸ್ಥೆ ರೋಹಿಣಿ ಆಚಾರ್ಯ ಪ್ರಾಸ್ಥಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುಮಂಗಲ ಶೆಣೈ ವಂದಿಸಿದರು.ಲಯನ್ಸ್ ಕ್ಲಬ್ ಪುತ್ತೂರು ಇದರ ಕಾರ್ಯದರ್ಶಿ ಅರವಿಂದ ಭಗವಾನ್ ರೈ,ಖಜಾಂಚಿ ಸುಧಾಕರ್ ಕೆ.ಪಿ. ಹಾಗೂ ಸಂಸ್ಥೆಯ ವಿದ್ಯಾರ್ಥಿಗಳಾದ ಸುಮಂಗಲ,ಉಷಾ,ಕಿರಣ್,ಪ್ರಥೀಕ್ ಸಂತೋಷ್,ಶ್ವೇತಾ,ಲಿಖಿತಾ,ಸೌಮ್ಯ,ಮಮತ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಡ್ರಾಯಿಂಗ್ ಸ್ಪರ್ಧೆಯಲ್ಲಿ ವಿಜೇತರಾದವರು:
ಸ್ಪರ್ಧೆಯನ್ನು ಎರಡು ವಿಭಾಗದಲ್ಲಿ ಏರ್ಪಡಿಸಲಾಗಿತ್ತು. 1 ರಿಂದ 6 ನೇ ತರಗತಿ ಪ್ರಥಮ: ಶ್ರವಣ್ ವಿ.ಕ.ಮಾದ್ಯಮ 4 ನೇ ತರಗತಿ, ದ್ವಿತೀಯ: ನಿಧಿ ಕೈರಂಗಳ 1 ನೇ ತರಗತಿ ಶ್ರೀರಾಮ ಶಾಲೆ ಕಲ್ಲಡ್ಕ, ತೃತೀಯ: ಶ್ರುತಿ ಎಸ್ ನಾಯ್ಕ್ ವಿ.ಕ.ಮಾದ್ಯಮ 5 ನೇ ತರಗತಿ, ಸಮಧಾನಕರ: ಶ್ರೀವಿತ್ 3ನೇ ತರಗತಿ ಬಿ.ಇ.ಎಂ. ಶಾಲೆ ಮಂಜಲ್ಪಡ್ಪು.
7ರಿಂದ 10ನೇ ತರಗತಿ ಪ್ರಥಮ: ನಿನಾದ್ ಕೈರಂಗಳ ಶ್ರೀರಾಮ ಶಾಲೆ ಕಲ್ಲಡ್ಕ 7ನೇ ತರಗತಿ, ದ್ವಿತೀಯ:ವಿಸ್ಮಯ ಸುದಾನ ಶಾಲೆ ಪುತ್ತೂರು 9ನೇ ತರಗತಿ, ತೃತೀಯ:ತ್ರಿಷಾ ತ್ರಿಷ್ಟಾ ವಿ.ಕ.ಮಾದ್ಯಮ 7 ನೇ ತರಗತಿ , ಸಮಧಾನಕರ: ಚಿಂತನಾ ಎಂ. ವಿ.ಆ.ಮಾಧ್ಯಮ 8ನೇತರಗತಿ ಸ್ಪರ್ಧೆಯಲ್ಲಿ ವಿಜೇತರಾದರು.

LEAVE A REPLY

Please enter your comment!
Please enter your name here