





ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿಯ ದಿನ ಭಕ್ತರೊಬ್ಬರಿಗೆ ಮಗುವಿನ ಚಿನ್ನದ ಕೈ ಬಳೆ ಬಿದ್ದು ಸಿಕ್ಕಿದ್ದು ಅದನ್ನು ದೇವಳಕ್ಕೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.


ಸುಮಾರು ಎರಡು ಮೂರು ವರ್ಷ ಪ್ರಾಯದ ಮಗುವಿನ ಚಿನ್ನದ ಕೈಬಳೆಯ ಸೂಕ್ತ ಗುರುತು ನೀಡಿ ದೇವಳದ ಕಚೇರಿಯಿಂದ ಪಡೆಯುವಂತೆ ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ತಿಳಿಸಿದ್ದಾರೆ.














