ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆಗೆ ಮೆಸ್ಕಾಂನಿಂದ ವಿಶೇಷ ಶಿಬಿರ

0

ಪುತ್ತೂರು: ಕೆ.ಇ.ಆರ್.ಸಿ. ಹಾಗೂ ರಾಜ್ಯ ಸರಕಾರದ ಆದೇಶದಂತೆ ಮೆಸ್ಕಾಂ ಇಲಾಖೆಯ ಎಲ್ಲಾ ಕೃಷಿ ನೀರಾವರಿಯ ಪಂಪ್ ಸೆಟ್ ಗಳಿಗೆ ಸಹಾಯಧನವನ್ನು ಮುಂದುವರಿಸಲು ಆಧಾರ್ ಕಾರ್ಡ್ ಜೋಡಾವಣೆಯು ಕಡ್ಡಾಯಗೊಳಿಸಿದ್ದು ರೈತರ ಅನುಕೂಲಕ್ಕಾಗಿ ಮೆಸ್ಕಾಂ ಕುಂಬ್ರ ಉಪವಿಭಾಗ ವ್ಯಾಪ್ತಿಯ ಸವಣೂರು, ನೆಟ್ಟಣಿಗೆ ಮುಡ್ನೂರು ಹಾಗೂ ಬೆಟ್ಟಂಪಾಡಿಯಲ್ಲಿ ಒಂದು ದಿನದ ವಿಶೇಷ ಶಿಬಿರವನ್ನು ನಡೆಸಲಿದೆ.

ಆ.21- ಸವಣೂರು ಗ್ರಾ.ಪಂ.ಕಚೇರಿ, ಆ.22 ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ಕಚೇರಿ, ಆ.23ಬೆಟ್ಟಂಪಾಡಿ ಗ್ರಾ.ಪಂ.ಸಭಾಭವನದಲ್ಲಿ ಶಿಬಿರಗಳು ನಡೆಯಲಿದೆ.
ಕೃಷಿ ಬಳಕೆದಾರರು ಆಧಾರ್ ಕಾರ್ಡಿನ ಜೊತೆಗೆ ಪಂಪ್ ಸೆಟ್ ಗಳ (ಆರ್.ಆರ್ ನಂಬರ್) ಸಂಬಂಧಿಸಿದ ಸ್ಥಾವರ ಸಂಖ್ಯೆ , ಜಾಗಕ್ಕೆ ಸಂಬಂಧಿಸಿದ ಲಭ್ಯವಿರುವ ಯಾವುದೇ ದಾಖಲೆ ಗಳನ್ನು( ಆರ್.ಟಿ.ಸಿ,ಕ್ರಯಚೀಟು,ವೀಲುನಾಮೆ ಇನ್ನಿತರ ) ಪಡೆದುಕೊಂಡು ಶಿಬಿರದಲ್ಲಿ ಭಾಗವಹಿಸಿ ಆಧಾರ್ ಜೋಡಣೆ ಮಾಡಿಸಬಹುದಾಗಿದೆ. ಅದಾರ್ ಜೋಡಣೆ ಪ್ರಕ್ರಿಯೆಯು ಸಂಪೂರ್ಣ ಉಚಿತವಾಗಿದ್ದು, ಯಾವುದೇ ಶುಲ್ಕಗಳನ್ನು ಪಾವತಿಸುವ ಅಗತ್ಯವಿರುವುದಿಲ್ಲ ಎಂದು ಮೆಸ್ಕಾಂ ನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here