ಕುಂಬ್ರ ಮರ್ಕಝ್ ಕ್ಯಾಂಪಸ್‌ನಲ್ಲಿ ಎನ್‌ಆರ್‌ಐ ಸಮಾವೇಶ

0

ಕಣ್ಮನ ಸೆಳೆದ ಫುಡ್ ಶೋ, ವರ್ಕಿಂಗ್ ಮೋಡೆಲ್
ಶ್ರೀಮಂತಿಕೆ ಅಹಂಗಾಗಿ ಇರುವುದಲ್ಲ-ಝಖರಿಯ್ಯ ಮುಝೈನ್

ಪುತ್ತೂರು: ಮನುಷ್ಯ ಎಷ್ಟೇ ಎತ್ತರಕ್ಕೇರಿದರೂ ಹಿಂದಿನ ಜೀವನದಲ್ಲಿ ಅನುಭವಿಸಿದ ಸಂಕಷ್ಟಗಳನ್ನು ಮರೆಯಬಾರದು. ಕಷ್ಟ, ನಷ್ಟ, ನೋವಿನಿಂದ ಮಿಂದೆದ್ದು ಶ್ರೀಮಂತಿಕೆಯಲ್ಲಿ ಕುಬೇರರಾದವರು ಹಳೇ ನೆನಪುಗಳನ್ನು ಮೆಲುಕು ಹಾಕುತ್ತಿರುವ ಮೂಲಕ ಶ್ರೀಮಂತಿಕೆಯ ಅಹಂ ಅನ್ನು ಇಲ್ಲವಾಗಿಸಬಹುದು. ಬೆಲ್ಲದ ಮೂಟೆ ಹೊತ್ತು ಜೀವನ ಸಾಗಿಸಿದ ಹಳೇ ನೆನಪು ಇರುವುದರಿಂದಲೇ ನಾನಿಂದು ಎಷ್ಟೇ ಶ್ರೀಮಂತಿಕೆ ಇದ್ದರೂ ಸಾದಾ ವ್ಯಕ್ತಿಯಾಗಿ ನಿಮ್ಮೊಂದಿಗೆ ಬೆರೆಯುತ್ತಿದ್ದೇನೆ. ದಾನ ಮಾಡಿ ಯಾರೂ ಸೋತದ್ದಿಲ್ಲ,ಇದಕ್ಕೆ ಸ್ವತಃ ನಾನೇ ಉದಾಹರಣೆ. ಮಹಿಳೆಯರ ಶಿಕ್ಷಣಕ್ಕೆ ಮರ್ಕಝುಲ್ ಹುದಾ ಕುಂಬ್ರ ನೀಡುತ್ತಿರುವ ಆದ್ಯತೆ ಪ್ರಶಂಸನೀಯ. ಇದರ ಜೊತೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಝಖರಿಯ್ಯ ಅಲ್ ಮುಝೈನ್ ಜುಬೈಲ್ ಹೇಳಿದರು.


ಕುಂಬ್ರ ಮರ್ಕಝುಲ್ ಹುದಾ ಸಭಾಂಗಣದಲ್ಲಿ ನಡೆದ ಎನ್‌ಆರ್‌ಐ ಬೆನಿಫಾಕ್ಟರ್ಸ್ ಕಾನ್ಕ್ಲೇವ್ ಕಾರ್ಯಕ್ರಮದಲ್ಲಿ ಪ್ರಮುಖ ಅಭ್ಯಾಗತರಾಗಿ ಅವರು ಮಾತನಾಡಿದರು. ಶರೀಅತ್ ವಿಭಾಗದ ಪ್ರಾಂಶುಪಾಲರಾದ ಮುಹಮ್ಮದ್ ಸಅದಿ ವಳವೂರು ಪ್ರಾರ್ಥನೆ ನೆರವೇರಿಸಿದರು. ಮರ್ಕಝುಲ್ ಹುದಾದ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ಡಾ.ಅಬ್ದುಲ್ ರಶೀದ್ ಝೈನಿ ವಿಷಯ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಸ್ವಾಗತಿಸಿದರು.

ಪೇನಲ್ ಡಿಸ್ಕಸ್:
ಬಳಿಕ ನಡೆದ ಪ್ಯಾನಲ್ ಡಿಸ್ಕಸ್‌ನಲ್ಲಿ ಝಕರಿಯ್ಯಾ ಅಲ್ ಮುಝೈನ್, ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಎಂಎಚ್‌ಕೆ ಸೌದಿ ರಾಷ್ಟ್ರೀಯ ಅಧ್ಯಕ್ಷ ಫಾರೂಕ್ ಹಾಜಿ ಕನ್ಯಾನ, ಎಜಕೇಶನಲ್ ಎಕ್ಸಲೇಶನ್ ಫೌಂಡೇಶನ್‌ನ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ, ಡಾ ಅಬ್ದುಲ್ ರಶೀದ್ ಝೈನಿ ಭಾಗವಹಿಸಿದ್ದರು. ಮರ್ಕಝ್ ಎಜುಕೇಶನ್ ಎಡ್ವೈಸರಿ ಬೋರ್ಡ್ ಚೇರ್‌ಮೆನ್ ಕಮರುದ್ದೀನ್ ಗೂಡಿನಬಳಿ ವಿಷಯ ಮಂಡಿಸಿ ಪ್ಯಾನಲ್ ಡಿಸ್ಕಸ್ ನಿರ್ವಹಣೆ ಮಾಡಿದರು. ಚರ್ಚೆಯಲ್ಲಿ ಸೌದಿ ರಾಷ್ಟ್ರೀಯ ಸಮಿತಿ ಪ್ರಮುಖ ಶಾಹುಲ್ ಹಮೀದ್ ಉಜಿರೆ, ಯುಎಇ ಪ್ರಮುಖ ಬ್ರೈಟ್ ಇಬ್ರಾಹಿಂ ಹಾಜಿ ವಿಟ್ಲ, ಶುಕೂರ್ ಮಣಿಲ, ಎಂ ಎಸ್ ಮುಹಮ್ಮದ್ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಎಂಎಚ್‌ಕೆ ಸೌದಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ನೌಶಾದ್ ಕಬಕ, ಮರ್ಕಝ್ ಗಲ್ಫ್ ಕೋರ್ಡಿನೇಟರ್ ಶಂಸುದ್ದೀನ್ ಬೈರಿಕಟ್ಟೆ, ಅನಿವಾಸಿ ಘಟಕಗಳ ಪ್ರಮುಖ ಆಸಿಫ್ ಗೂಡಿನಬಳಿ, ಮುಹಮ್ಮದ್ ರೋಯಲ್ ಮುಕ್ವೆ, ಅಬ್ದುಲ್ಲ ಮುಸ್ಲಿಯಾರ್ ಕುಡ್ತ ಮುಗೇರು, ಮುಈನುದ್ದೀನ್ ನೂರಾನಿ, ಅಬ್ದುಲ್ ಹಮೀದ್ ಇಂದ್ರಾಜೆ, ಆಶಿಕ್ ದರ್ಬೆ, ಉಸ್ಮಾನ್ ಬಹರೈನ್, ಮುಸ್ತಫಾ ಮಾಂಬಿಳಿ ಸುಳ್ಯ, ರಫೀಕ್ ಶಿಬರೂರು, ಫಿರೋಸ್ ಪರ್ಲಡ್ಕ, ಬಶೀರ್ ಮಂಗಳೂರು, ಮೂಸ ಮದನಿ ಸಂಪ್ಯ, ಉಮರ್ ಸಖಾಫಿ, ಕಲಂದರ್ ಕಬಕ, ನೌಫಲ್ ಮುಲ್ಕಿ, ಅನ್ಸಾರ್ ಕೋಡಿಜಾಲ್ ಉಪಸ್ಥಿತರಿದ್ದರು. ಈ ವೇಳೆ ಎಂಎಚ್‌ಕೆ ಸೌದಿ ಸಮಿತಿಯ ಆರ್ಗೈಸರ್ ರಶೀದ್ ಸಖಾಫಿ ಮಿತ್ತೂರು, ಎಂಎಚ್‌ಕೆ ಒಮಾನ್ ಆರ್ಗನೈಸರ್ ಉಬೈದ್ ಸಖಾಫಿ ಅವರನ್ನು ಗೌರವಿಸಲಾಯಿತು.


ಆಡಳಿತ ಸಮಿತಿಯ ಕೋಶಾಧಿಕಾರಿ ಯೂಸುಫ್ ಸಾಜ, ಪ್ರಮುಖರಾದ ಯೂಸುಫ್ ಹಾಜಿ ಕೈಕಾರ, ಆಶಿಕುದ್ದೀನ್ ಅಕ್ತರ್, ಲೆಕ್ಕಪರಿಶೋಧಕ ಅನ್ವರ್ ಹುಸೇನ್ ಗೂಡಿನಬಳಿ, ಕಾರ್ಯದರ್ಶಿ ಯೂಸುಫ್ ಮೈದಾನಿಮೂಲೆ, ಕರೀಂ ಕಾವೇರಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮರ್ಕಝ್ ಶರೀಅತ್ ಉಪನ್ಯಾಸಕ ಜಲೀಲ್ ಸಖಾಫಿ, ಪದವಿ ಪ್ರಾಂಶುಪಾಲ ಮನ್ಸೂರ್ ಕಡಬ, ಪದವಿಪೂರ್ವ ಪ್ರಾಂಶುಪಾಲ ಸಂಧ್ಯಾ ಪಿ, ಪದವಿ ವಿಭಾಗದ ಶರೀಅತ್ ಅಧ್ಯಾಪಕ ಸ್ವಾಲಿಹ್ ಹನೀಫಿ ಉಪಸ್ಥಿತರಿದ್ದರು.

ವಿವಿಧ ಖಾದ್ಯಗಳು:
ಆಗಮಿಸಿದ ಅತಿಥಿಗಳಿಗೆ ವಿಶಿಷ್ಠ ಭಕ್ಷ್ಯ ಖಾದ್ಯಗಳನ್ನು ಸಿದ್ದಪಡಿಸಲಾಗಿತ್ತು. ಪತ್ರೋಡೆ, ಹಲಸಿನ ಖಾದ್ಯ, ಅರಸಿನ ಎಲೆಯಪ್ಪ, ನುಗ್ಗೆ ಸೊಪ್ಪು ಪಲ್ಯ, ಪೂಂಬೆ ಪಲ್ಯ, ಬಾಳೆದಿಂಡು ಪಲ್ಯ, ಹಲಸಿನ ಬೀಜ ದುಕ್ಕ, ಚೇಂಬು ಪುಳಿಮುಂಚಿ, ತಮರೆ ಚಟ್ನಿಯೊಂದಿಗೆ ಮಟನ್ ಮಂದಿ, ಮೀನಿನ ಸ್ಪೆಷಲ್ ಅನಿವಾಸಿ ಅತಿಥಿಗಳು ಸವಿದರು.

ಆಕರ್ಷಕ ಫುಡ್ ಶೋ:
ಕ್ಯಾಂಪಸ್ ಮೂರು ಮಹಡಿಗಳಲ್ಲಿ ಸುಮಾರು ನಲುವತ್ತಕ್ಕೂ ಮಿಕ್ಕ ಫುಡ್ ಕೌಂಡರ್ ಗಳಲ್ಲಿ ವಿಶೇಷ ಫುಡ್ ಶೋ ಏರ್ಪಡಿಸಲಾಗಿದ್ದು ವಿವಿದ ಶೈಲಿಯ ಭಕ್ಷ್ಯ ಪದಾರ್ಥಗಳು ಅತಿಥಿಗಳ ಗಮನ ಸೆಳೆಯಿತು.


ವೈವಿಧ್ಯಮಯ ಜ್ಯೂಸ್,ಚಾಟ್ಸ್, ಹಳ್ಳಿ ತಿನಿಸುಗಳು, ವಿವಿಧ ರುಚಿಗಳ ಉಪ್ಪಿನ ಕಾಯಿ, ಕೇಕ್, ವೆಜ್ ಮತ್ತು ನಾನ್ ವೆಜ್‌ಗಳ ರೈಸ್ ವೆರೈಟಿಗಳು ಅತ್ಯಾಕರ್ಷಕವಾಗಿ ಸಿದ್ದಪಡಿಸಿ ಇಡಲಾಗಿತ್ತು. ಅಲ್ಲದೆ ಸಯನ್ಸ್, ಕಾಮರ್ಸ್, ಆರ್ಟ್ಸ್ ವಿಭಾಗಗಳ ವಿದ್ಯಾರ್ಥಿನಿಯರು ರಚಿಸಿದ ಮೋಡೆಲ್‌ಗಳೂ ಆಕರ್ಷಣೀಯವಾಗಿತ್ತು. ಫುಡ್ ಶೋದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರ ಕೌಷಲ್ಯತೆ ಕಂಡ ಝಕರಿಯ್ಯ ಮುಝೈನ್ 90 ಸಾವಿರ ರೂ.ವನ್ನು ಸ್ಥಳದಲ್ಲೇ ಕೊಡುಗೆಯಾಗಿ ವಿದ್ಯಾರ್ಥಿನಿಯರಿಗೆ ನೀಡಿದರು. ಸಂಸ್ಥೆಯ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಸಿದ್ದಗೊಳಿಸಿದ ವರ್ಕಿಂಗ್ ಮೋಡೆಲ್‌ಗಳೂ ಈ ಸಂದರ್ಭದಲ್ಲಿ ಗಮನ ಸೆಳೆಯಿತು.

LEAVE A REPLY

Please enter your comment!
Please enter your name here