ಪುತ್ತೂರು: ಮುಂಡೂರು ಗ್ರಾಮದ ತೌಡಿಂಜ ನಿವಾಸಿ ಬಾಲಪ್ಪ ಗೌಡ (82 ವ) ರವರು ಹೃದಯಾಘಾತದಿಂದ ಆ.21ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ವೆಂಕಮ್ಮ, ಪುತ್ರರಾದ ಪದ್ಮಯ್ಯ ಗೌಡ, ಚೆನ್ನಪ್ಪ ಗೌಡ, ನಾರಾಯಣ ಗೌಡ, ಮೋನಪ್ಪ ಗೌಡ, ಪುತ್ರಿಯರಾದ ಪುಷ್ಪ, ಕುಸುಮ, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.