ಬೆಥನಿ ಆಂಗ್ಲ ಮಧ್ಯಮ ಪ್ರೌಢ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

0

ಪುತ್ತೂರು:ಬೆಥನಿ ಆಂಗ್ಲ ಮಾಧ್ಯಮ ಪ್ರೌ ಢ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಆಗಸ್ಟ್ 15ರಂದು ನೆರವೇರಿತು .

ಮುಖ್ಯ ಅತಿಥಿ ಭಗಿನಿ ಪವಿತ್ರಾ ಗ್ರೇಸಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಸಂಘಗಳ ಪಾತ್ರ ದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ಎಂಟು ವಿವಿಧ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ತಮ್ಮ ಸಂಘಗಳ ಗುರಿ ಉದ್ದೇಶಗಳ ಮಾಹಿತಿ ನೀಡಿದರು.

ಮುಖ್ಯ ಶಿಕ್ಷಕಿ ಭಗಿನಿ ಆಗ್ನೇಸ್ ಶಾಂತಿ ಅಧ್ಯಕ್ಷತೆಯಲ್ಲಿ,ನಿವೃತ್ತ ಯೋಧ ಸುಬ್ಬಪ್ಪ ಪಾಟಾಳಿ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ ರೈ,ರವರ ಉಪಸ್ಥಿತಿಯೊಂದಿಗೆ ಕಾರ್ಯಕ್ರಮವು ನೆರವೇರಿತು.


ವಿಜ್ಞಾನ ಸಂಘ ,ysm, ಸ್ಕೌಟ್ ಮತ್ತು ಗೈಡ್ಸ್, ಕ್ರೀಡಾ ಸಂಘ, ಹೆರಿಟೇಜ್ ಸಂಘ,ಗ್ರಾಹಕ ಬಳಕೆದಾರರ ಸಂಘ,ಸುರಕ್ಷತೆ ಹಗೂ ಭದ್ರತಾ ಸಂಘ,ಸಾಹಿತ್ಯ ಸಂಘದಿಂದ ಮನೋರಂಜನೆ ಕಾರ್ಯಕ್ರಮ ಸಾಂಘವಾಗಿ ನೆರವೇರಿತು.ವಿದ್ಯಾರ್ಥಿನಿ ಅಶ್ವಿಮಾ ನಝ್ಮಾ ಸ್ವಾಗತಿಸಿದರು. ರೋಶ್ನಿ, ಶೈಮ ಹಾಗೂ ಅಸ್ಲಾಮಿಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


LEAVE A REPLY

Please enter your comment!
Please enter your name here