ಕೊಯಿಲ ಪಶುಸಂಗೋಪನಾ ಇಲಾಖೆ ಹುಲ್ಲುಗಾವಲಿನಲ್ಲಿ ರೀಲ್ಸ್‌ಗಾಗಿ ಲಾರಿ ಚಾಲನೆ

0

ಪ್ರಶ್ನಿಸಲು ಹೋದ ರಿಕ್ಷಾ ಚಾಲಕರಿಗೆ ಹಲ್ಲೆಗೆ ಯತ್ನ ಆರೋಪ-ಠಾಣೆಗೆ ಕರೆಸಿ ಪೊಲೀಸರಿಂದ ಮುಚ್ಚಳಿಕೆ

ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಕೊಯಿಲದಲ್ಲಿರುವ ಪಶು ಸಂಗೋಪನಾ ಇಲಾಖೆಗೆ ಸೇರಿದ ವಿಶಾಲವಾದ ಹುಲ್ಲುಗಾವಲು ಪ್ರದೇಶದಲ್ಲಿ ರೀಲ್ಸ್‌ಗಾಗಿ ಲಾರಿ ಚಾಲನೆ ಮಾಡುತ್ತಿರುವುದನ್ನು ಪ್ರಶ್ನಿಸಲು ಹೋದ ರಿಕ್ಷಾ ಚಾಲಕರಿಗೆ ಯುವಕರ ತಂಡವೊಂದು ಹಲ್ಲೆಗೆ ಮುಂದಾದ ಘಟನೆ ಆ.22ರಂದು ನಡೆದಿದೆ. ಬಳಿಕ ಕಡಬ ಪೊಲೀಸರು ಯುವಕರನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡಿರುವುದಾಗಿ ವರದಿಯಾಗಿದೆ.


ಕೊಯಿಲ ಪಶು ಸಂಗೋಪನಾ ಇಲಾಖೆಗೆ ಸೇರಿದ ಹಚ್ಚ ಹಸಿರಿನಿಂದ ಕೂಡಿದ್ದ ಹುಲ್ಲುಗಾವಲು ಪ್ರದೇಶದಲ್ಲಿ ಯುವಕರ ತಂಡವೊಂದು ಎಲ್ಲೆಂದರಲ್ಲಿ ಲಾರಿ ಚಾಲನೆ ಮಾಡುವ ಮೂಲಕ ರೀಲ್ಸ್ ಮಾಡುತ್ತಿದ್ದರು. ಇದನ್ನು ಸ್ಥಳೀಯ ರಿಕ್ಷಾ ಚಾಲಕರು ಪ್ರಶ್ನಿಸಿದ್ದಾರೆ. ಗೋವುಗಳು ಮೇಯುವ ಜಾಗವಾಗಿದ್ದು ಇಲ್ಲಿ ವಾಹನ ಚಾಲನೆ ಮಾಡದಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಮನ್ನಣೆ ನೀಡಿದ ಲಾರಿ ಚಾಲಕ ಹಾಗೂ ಇತರ ಯುವಕರು ಸ್ಥಳದಿಂದ ತೆರಳಿದ್ದಾರೆ. ಆದರೆ ಬಳಿಕದ ಬೆಳವಣಿಗೆಯಲ್ಲಿ ಯುವಕ ತಂಡವೊಂದು ರಿಕ್ಷಾ ನಿಲ್ದಾಣಕ್ಕೆ ಆಗಮಿಸಿ ರಿಕ್ಷಾ ಚಾಲಕರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಮುಂದಾದರು ಎನ್ನಲಾಗಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕರನ್ನು ಕಡಬ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here