ಪುತ್ತೂರು: ಎಪಿಎಂಸಿ ರಸ್ತೆಯ ಜೆಎಂಜೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಎರಡನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ನ ಸ್ತ್ರೀ ಸಂಘಟನೆಯ ಸಹಭಾಗಿತ್ವದಲ್ಲಿ ಬೀರಮಲೆ ಪ್ರಜ್ಞಾ ಆಶ್ರಮದಲ್ಲಿನ ವಿಶೇಷ ಚೇತನರೊಂದಿಗೆ ಒಂದು ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆಶ್ರಮದ ವಿಶೇಷಚೇತನರೊಂದಿಗೆ ಬೆರೆತು ಅವರೊಂದಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಡುವ ಮೂಲಕ, ಅವರಿಗೆ ವಸ್ತ್ರಗಳ ಕೊಡುಗೆ ಜೊತೆಗೆ ಸಹಭೋಜನವನ್ನು ಸವಿಯುವುದರೊಂದಿಗೆ ಕಾಲ ಕಳೆಯಲಾಯಿತು. ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್ ಸ್ವಾಗತಿಸಿ, ಸ್ತ್ರೀ ಸಂಘಟನೆ ಅಧ್ಯಕ್ಷೆ ನತಾಲಿಯಾ ಪಾಯಿಸ್ ವಂದಿಸಿದರು.
ಪ್ರಜ್ಞಾ ಆಶ್ರಮದ ವಿಶೇಷಚೇತನರು ಪ್ರಾರ್ಥಿಸಿದರು. ಪ್ರಜ್ಞಾ ಆಶ್ರಮದ ವ್ಯವಸ್ಥಾಪಕ ಅಣ್ಣಪ್ಪರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ತ್ರೀ ಸಂಘಟನೆಯ ಅಧ್ಯಕ್ಷೆ ನತಾಲಿಯಾ ಪಾಯಿಸ್ ಹಾಗೂ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಉಪಾಧ್ಯಕ್ಷ ಆಂಟನಿ ಒಲಿವೆರಾರವರು ಪ್ರಜ್ಞಾ ಆಶ್ರಮವನ್ನು ಮುನ್ನೆಡೆಸುತ್ತಿರುವ ಅಣ್ಣಪ್ಪ ಹಾಗೂ ಜ್ಯೋತಿ ದಂಪತಿಗೆ ಉತ್ತಮ ಆರೋಗ್ಯವನ್ನು ಕರುಣಿಸಲೆಂದು ಶುಭ ಹಾರೈಸಿದರು. ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕ ಹಾಗೂ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಕೋಶಾಧಿಕಾರಿ ವಿಕ್ಟರ್ ಶರೂನ್ ಡಿ’ಸೋಜ, ಸದಸ್ಯರಾದ ವಾಲ್ಟರ್ ಡಿ’ಸೋಜ, ಪ್ರೇಮ್, ವಿಲ್ಮಾ, ಸ್ತ್ರೀ ಸಂಘಟನೆಯ ಸದಸ್ಯರು, ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಸದಸ್ಯರು ಉಪಸ್ಥಿತರಿದ್ದರು.